ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಚರ; ಇನ್ಮುಂದೆ ಪಿಜಿಗಳಿಗೆ ಪ್ರತಿವಾರ ಬರಲಿದ್ದಾರೆ ಪೊಲೀಸರು...!

|
Google Oneindia Kannada News

ಬೆಂಗಳೂರು, ಫೆಬ್ರವರಿ 3: ಬೆಂಗಳೂರಿಗೆ ಸಾಮಾನ್ಯರಂತೆ ಬಂದು ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿ) ನೆಲಸಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಜಿಗಳಿಗೆ ಬಿಸಿ ಮುಟ್ಟಿಸಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.

ನಗರದಲ್ಲಿರುವ ಪಿಜಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು ಪೊಲೀಸರು ಈ ಪಿಜಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರೂ ನಗರದ ಹೊರವಲಯದ ಪಿಜಿಗಳು ಹಣದಾಸೆಗೆ ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಇತ್ತೀಚೆಗೆ ಪೊಲೀಸರು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದಾರೆ.

ಶಾಲಾ ವಾಹನ; ಪೋಷಕರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್ಶಾಲಾ ವಾಹನ; ಪೋಷಕರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್

ಇದಕ್ಕೆ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರು ಪೊಲೀಸರು, ಇನ್ನುಂದೆ ತಮ್ಮ ಪಿಜಿಗಳಿಗೆ ಯಾರೇ ಬಂದು ಹೋದರೂ (Visitors) ಅಂತವರ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಂಡು, ಪ್ರತಿ ವಾರ ಸಂಬಂಧಿಸಿದ ಪೊಲೀಸ್ ಠಾಣೆಗೆ ಪಿಜಿಗಳ ಮಾಲೀಕರು ನೀಡಬೇಕು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.

ಪ್ರತಿಯೊಬ್ಬ ವಿಸಿಟರ್‌ಗಳ ಮಾಹಿತಿ ಬೇಕು

ಪ್ರತಿಯೊಬ್ಬ ವಿಸಿಟರ್‌ಗಳ ಮಾಹಿತಿ ಬೇಕು

ಇನ್ನುಂದೆ ತಮ್ಮ ಪಿಜಿಗಳಿಗೆ ಯಾರೇ ಬಂದು ಹೋದರೂ ಅಂತವರ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಳ್ಳಬೇಕು. ಕೇಳಿದಾಗ ಆ ದಾಖಲೆಗಳನ್ನು ನೀಡಬೇಕು ಎಂದು ಖಡಕ್ ಸೂಚನೆಯನ್ನು ಪೊಲೀಸರು ಕೊಟ್ಟಿದ್ದಾರೆ. ಪಿಜಿಗೆ ಸೇರುವ ಪ್ರತಿಯೊಬ್ಬರ ವಿವರವನ್ನು ಪ್ರತಿ ತಿಂಗಳು ನೀಡಬೇಕು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಹೊಸ ಆದೇಶದ ಪ್ರಕಾರ ಪಿಜಿಗೆ ಬಂದು ಹೋಗುವ ಪ್ರತಿಯೊಬ್ಬ ವಿಸಿಟರ್​ಗಳ ವಿವರವನ್ನು ಮಾಲೀಕರು ಪೊಲೀಸರಿಗೆ ಪ್ರತೀ ವಾರ ಕಡ್ಡಾಯವಾಗಿ ನೀಡಬೇಕು ಎಂದು ಪೊಲೀಸರು ಪಿಜಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಿಯಮಗಳನ್ನು ಉಲ್ಲಂಘಿಸುವಂತಿಲ್ಲ

ನಿಯಮಗಳನ್ನು ಉಲ್ಲಂಘಿಸುವಂತಿಲ್ಲ

ಪಿಜಿಗಳು ಬಿಬಿಎಂಪಿಯಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆದಿರಬೇಕು, ಯಾವುದೇ ವಿದ್ಯಾರ್ಥಿಗಳನ್ನು ಅಥವಾ ವ್ಯಕ್ತಿಗಳನ್ನು ಪೇಯಿಂಗ್ ಗೆಸ್ಟ್ ಆಗಿ ಸೇರಿಸಿಕೊಳ್ಳುವಾಗ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಡಬೇಕು, ವೋಟರ್ ಐಡಿ, ಆಧಾರ್ ಕಾರ್ಡ್, ಕಾಲೇಜು ಐಡಿ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಪಡೆದುಕೊಳ್ಳಬೇಕು. ಪಿಜಿಗೆ ಸೇರುವ ವಿದ್ಯಾರ್ಥಿಗಳ ಪೂರ್ವಾಪರ ವಿಚಾರಣೆ ನಡೆಸಿ ಅದರ ಮಾಹಿತಿ ಇಟ್ಟುಕೊಳ್ಳಬೇಕು ಎಂಬ ಸೂಚನೆಗಳನ್ನು ಪಿಜಿಗಳು ಇನ್ಮುಂದೆ ಕಡ್ಡಾಯವಾಗಿ ಪಾಲಿಸಬೇಕಿದೆ.

ಅನುಮಾನ ಬಂದಲ್ಲಿ ಪೊಲೀಸ್ ಸಂಪರ್ಕಿಸಿ

ಅನುಮಾನ ಬಂದಲ್ಲಿ ಪೊಲೀಸ್ ಸಂಪರ್ಕಿಸಿ

ಪಿಜಿಗೆ ಪ್ರತಿನಿತ್ಯ ಬಂದು ಹೋಗುವವರ ವಿವರ ಸಂಗ್ರಹಿಸಿಡಬೇಕು, ಪಿಜಿಯಲ್ಲಿ ಸಿಸಿಟಿವಿ ಅಳವಡಿಸಬೇಕು; ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು, ರಿಜಿಸ್ಟರ್ ಪುಸ್ತಕ ಇಟ್ಟು ಅದರಲ್ಲಿ ಪ್ರತಿಯೊಬ್ಬರ ಹೆಸರು ನಮೂದಿಸಬೇಕು, ಪಿಜಿಯಲ್ಲಿರುವ ಅಥವಾ ಪಿಜಿಗೆ ಬಂದು ಹೋಗುವ ಯಾರ ಬಗ್ಗೆಯಾದರೂ ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು. ದೇಶ ವಿರೋಧಿ ಮತ್ತು ದುಷ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಪಿಜಿ ಅವಕಾಶ ಕೊಡಬಾರದು ಪಿಜಿ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ಈ ಎಲ್ಲ ಮಾಹಿತಿಯನ್ನು ಪ್ರತಿ ವಾರ ಸಲ್ಲಿಕೆ ಮಾಡಬೇಕು ಎಂದು ಪೊಲೀಸರು ಪಿಜಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು

ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು

ದೇಶದ ಭಯೋತ್ಪಾದಕರಿಗೆ ಬೆಂಗಳೂರು ಆಶ್ರಯ ತಾಣವಾಗುತ್ತಿದೆ ಎಂಬ ಆರೋಪಗಳನ್ನು ಕೇಳಿರುತ್ತೇವೆ. ಎನ್​ಐಎ ವಶದಲ್ಲಿರುವ ಅನೇಕ ಶಂಕಿತ ಉಗ್ರರು ಬೆಂಗಳೂರಿನ ಪೇಯಿಂಗ್ ಗೆಸ್ಟ್ ರೂಮುಗಳಲ್ಲಿ ನೆಲಸಿದ್ದುದು ತಿಳಿದುಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಅವ್ಯವಸ್ಥಿತವಾಗಿ ತಲೆ ಎತ್ತಿರುವ ಪಿಜಿಗಳು ಉಗ್ರರ ಪಾಲಿಗೆ ಆಶ್ರಯದ ನೆಲೆಗಳಾಗಿದ್ದರೆ ಅಚ್ಚರಿ ಇಲ್ಲ. ಈ ಹಿನ್ನೆಲೆಯಲ್ಲಿ ನಗರದ ಪಿಜಿಗಳ ಮೇಲೆ ಇನ್ನಷ್ಟು ನಿಗಾ ಇಡಲು ಪೊಲೀಸರು ನಿರ್ಧರಿಸಿದ್ದಾರೆ.

English summary
Bengaluru Police Strictly Warn To Paying Guest Homes. every sunday pg owners must send a pg visitors information to the nearest police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X