ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಬೀಟ್ ವ್ಯವಸ್ಥೆಗೆ ಇನ್ಮುಂದೆ ಸು'ಬಾಹು' ಬಲ..!

|
Google Oneindia Kannada News

ಬೆಂಗಳೂರು, ಜನವರಿ 20: ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ಸಾರ್ವಜನಿಕ ಸೇವೆಗಳು ಜನಸಾಮಾನ್ಯರ ಕೈಗಟುಕುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಪೊಲೀಸರೂ ಸಹ ತಮ್ಮ ಇಲಾಖೆ ಕಾರ್ಯಗಳನ್ನು ಡಿಜಿಟಲೀಕರಣ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಹೊಸದಾಗಿ 'ಸುಬಾಹು' ಅಂಡ್ರಾಯ್ಡ್ ಅಪ್ಲಿಕೇಶನ್ ಸೇರಿಕೊಂಡಿದೆ.

ಪೊಲೀಸ್‌ ಇಲಾಖೆ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಸಾರ್ವಜನಿಕರು ನಿಶ್ಚಿಂತೆಯಿಂದ ಇರಲಿ ಎಂದು ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ತಮ್ಮ ವ್ಯಾಪ್ತಿಯಲ್ಲಿ ಠಾಣೆಗಳ ಪೊಲೀಸ್ ಸಿಬ್ಬಂದಿ, ಪಾಳಿಯಲ್ಲಿ ಕೆಲಸ ಮಾಡಿ ಬೀಟ್‌ಗಳ ಅಂದಿನ ವಿದ್ಯಮಾನಗಳನ್ನು ದಾಖಲಿಸುವುದೇ ಬೀಟ್ ವ್ಯವಸ್ಥೆ. ಬೀಟ್ ವ್ಯವಸ್ಥೆಯಲ್ಲಿ ಆಯಾ ವ್ಯಾಪ್ತಿಯ ಬೀಟ್ ಪೊಲೀಸರು ತಾವು ಕೈಗೊಳ್ಳುವ ಬೀಟ್‌ನ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಬೇಕಿದೆ. ಇದು ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಆಗಾಗ ಸಾಬೀತಾಗುತ್ತಾ ಬಂದಿದೆ.

ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!

ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸ್‌ರು 'ಇ-ಬೀಟ್' ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕಾಗಿ ಆಗ್ನೇಯ ಡಿಸಿಪಿ ವಿಭಾಗ Subhahu Beat ಎಂಬ ಅಂಡ್ರಾಯ್ಡ್ ಅಪ್ಲಿಕೇಶನ್ ಪ್ರಾರಂಭಿಸಿದೆ. ಇದಕ್ಕೆ ಗೃಹ ಇಲಾಖೆ ಮೆಚ್ಚುಗೆ ಸೂಚಿಸಿದ್ದು, ಪ್ರಾಯೋಗಿಕವಾಗಿ ಆರಂಭವಾಗಿರುವ 'ಸುಬಾಹು'ವನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅನ್ವಯಿಸಲು ಇಲಾಖೆ ಮುಂದಾಗಿದೆ.

ಏನಿದು ಸುಬಾಹು?

ಏನಿದು ಸುಬಾಹು?

ಸುಬಾಹು ಅಪ್ಲಿಕೇಶನ್‌ನ್ನು ಸದ್ಯ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರತುಪಡಿಸಿ ಬೇರೆ ವ್ಯಾಪ್ತಿಯ ಠಾಣೆಗಳ ಪೊಲೀಸರು ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗ್ನೇಯ ವಿಭಾಗದ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಸುಬಾಹು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು. ಬಳಿಕ ಬೀಟ್‌ ಸಿಬ್ಬಂದಿ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯುಆರ್ ಕೋಡ್‌ನ್ನು ತಮ್ಮ ಮೊಬೈಲ್‌ನಿಂದಲೇ ಸ್ಕ್ಯಾನ್‌ ಮಾಡಬೇಕು. ಆಗ ಸರ್ವರ್‌ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಾಧಿಕಾರಿಗಳಿಗೆ ರವಾನೆಯಾಗುತ್ತದೆ.

ಮೊಬೈಲ್‌ನಲ್ಲಿ ನಿಗಾ

ಮೊಬೈಲ್‌ನಲ್ಲಿ ನಿಗಾ

ಸಿಬ್ಬಂದಿಯ ಚಲನವಲನಗಳ ಕುರಿತು ಸುಬಾಹು ಮೂಲಕ ಹಿರಿಯ ಅಧಿಕಾರಿಗಳು ಕೂತಲ್ಲೇ ಮಾಹಿತಿ ಪಡೆಯಬಹುದು. ಪೊಲೀಸ್ ಇಲಾಖೆಯಲ್ಲಿ ಬೀಟ್ ವ್ಯವಸ್ಥೆ ಜಾರಿಯಾದ ಮೇಲೆ ಬೀಟ್‌ ಸಿಬ್ಬಂದಿ ಪಾಯಿಂಟ್‌ಗಳಿಗೆ ಹೋಗಿ ಅಲ್ಲಿರುವ ಪುಸ್ತಕದಲ್ಲಿ ಸಹಿ ಮಾಡಬೇಕಿತ್ತು. ಕೆಲ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿ ಸುತ್ತಿರಲಿಲ್ಲ ಹಾಗೂ ಮಳೆ, ಗಾಳಿಗೆ ಬೀಟ್ ಪಾಯಿಂಟ್‌ ಪುಸ್ತಕಗಳು ಹಾಳಾಗುತ್ತಿದ್ದವು ಎಂಬ ಆರೋಪಗಳು ಬೀಟ್ ವ್ಯವಸ್ಥೆಯಲ್ಲಿ ಸಹಜವಾಗಿವೆ.

ಫೋನ್ ನಂಬರ್ ಶೇರ್ ಮಾಡುವಾಗ ಹುಷಾರ್: ಭಾಸ್ಕರ್ ರಾವ್ ಟ್ವೀಟ್ಫೋನ್ ನಂಬರ್ ಶೇರ್ ಮಾಡುವಾಗ ಹುಷಾರ್: ಭಾಸ್ಕರ್ ರಾವ್ ಟ್ವೀಟ್

ಅಪರಾಧ ಚಟುವಟಿಕೆಗಳ ಮೇಲೂ ನಿಗಾ

ಅಪರಾಧ ಚಟುವಟಿಕೆಗಳ ಮೇಲೂ ನಿಗಾ

ಬೀಟ್‌ ಸಿಬ್ಬಂದಿ ತಮ್ಮ ಬೀಟ್ ಕರ್ತವ್ಯದ ಜೊತೆ ಯಾವುದಾದರೂ ಅಪರಾಧ ಪ್ರಕರಣಗಳು, ಅನುಮಾನಾಸ್ಪದ ಘಟನೆಗಳು ನಡೆದರೆ ಆ ಬಗ್ಗೆ ಫೋಟೊ, ಸ್ಥಳ ಮತ್ತು ಇತರ ಮಾಹಿತಿಯನ್ನು ಸುಬಾಹುವಿನಲ್ಲಿ ಅಪ್‌ಲೋಡ್‌ ಮಾಡಬೇಕು. ಅದು ಆಗ್ನೇಯ ವಿಭಾಗದ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ರವಾನೆಯಾಗುತ್ತದೆ. ಇದರಿಂದ ಕೂಡಲೇ ಆರೋಪಿಯ ಹಿನ್ನೆಲೆ ಪತ್ತೆ ಹಚ್ಚಬಹುದು. ಹಳೇ ರೌಡಿಶೀಟರ್‌ಗಳು, ಆರೋಪಿತ ವ್ಯಕ್ತಿಗಳ ಫೋಟೋಗಳನ್ನು ಅದರಲ್ಲಿ ನಮೂದಿಸಿ ಆತನ ಹಿನ್ನೆಲೆ ದಾಖಲಿಸಬಹುದಾಗಿದೆ.

ಇಶಾ ಪಂತ್ ಶ್ರಮ

ಇಶಾ ಪಂತ್ ಶ್ರಮ

''ಆಗ್ನೇಯ ವಿಭಾಗದಲ್ಲಿ ಸುಮಾರು 1,300 ಬೀಟ್‌ ಪಾಯಿಂಟ್‌ಗಳಿವೆ. ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳ ಬೀಟ್‌ ಹೊಣೆಯನ್ನು ಆಯಾ ಸಿಬ್ಬಂದಿಗೆ ವಹಿಸಲಾಗಿದೆ. ಇದಕ್ಕಾಗಿ ನಮ್ಮ ವ್ಯಾಪ್ತಿಯಲ್ಲಿ ಸುಬಾಹು ಮೊಬೈಲ್‌ ಅಪ್ಲಿಕೇಶನ್‌ನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಇದು ಬೀಟ್‌ ವ್ಯವಸ್ಥೆಯ ಸುಧಾರಣೆಯ ಭಾಗವಾಗಿ ಬಳಕೆಯಾಗುತ್ತಿದ್ದು, ಸುಬಾಹು ಅಪ್ಲಿಕೇಶನ್‌ನ್ನು ಸಾಕಷ್ಟು ಶ್ರಮವಹಿಸಿ ಜಾರಿಗೆ ತರಲಾಗಿದೆ. ಮುಂದೆ ಇದು ಎಲ್ಲ ಠಾಣೆಗಳಿಗೂ ಅನ್ವಯವಾಗಲಿದೆ ಎಂಬ ನಿರೀಕ್ಷೆ ಇದೆ'' ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!

English summary
Bengaluru Police Started New Subhahu Beat Mobile Application for Police Beat System.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X