ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರಿಂದ ರೌಡಿ ಪರೇಡ್, ಮಾನವ ಹಕ್ಕು ಉಲ್ಲಂಘನೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಬೆಂಗಳೂರು ಪೊಲೀಸರು ನಡೆಸುವ ರೌಡಿ ಪರೇಡ್ ವಿವಾದಕ್ಕೆ ಕಾರಣವಾಗಿದೆ. ಪರೇಡ್‌ನಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಟನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸ್ವಾತಂತ್ರ ದಿನಾಚರಣೆ ಮತ್ತು ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು 379 ರೌಡಿಗಳ ಪರೇಡ್ ನಡೆಸಿದರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೆ.ಎಸ್.ಲೇಔಟ್ ಠಾಣೆಯ 71 ಸಿಬ್ಬಂದಿ ವರ್ಗಾವಣೆ ಮಾಡಿದ ಅಣ್ಣಾಮಲೈ!ಕೆ.ಎಸ್.ಲೇಔಟ್ ಠಾಣೆಯ 71 ಸಿಬ್ಬಂದಿ ವರ್ಗಾವಣೆ ಮಾಡಿದ ಅಣ್ಣಾಮಲೈ!

ಉತ್ತರ ವಿಭಾಗದ ಪೊಲೀಸರು ಡಿಸಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 779 ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದರು. ಗುರುವಾರ ಮಲ್ಲೇಶ್ವರಂ ಆಟದ ಮೈದಾನದಲ್ಲಿ 379 ರೌಡಿಗಳ ಪರೇಡ್ ಮಾಡಿದ್ದರು.

ಬೆಂಗಳೂರು ಪೊಲೀಸರು ಹೊಸ ವರ್ಷಾಚರಣೆ ಮಾಡಿದ್ದು ಹೀಗೆಬೆಂಗಳೂರು ಪೊಲೀಸರು ಹೊಸ ವರ್ಷಾಚರಣೆ ಮಾಡಿದ್ದು ಹೀಗೆ

Bengaluru Police Rowdy Parade Sparks Controversy

ಈ ಸಂದರ್ಭದಲ್ಲಿ ಮೀಸೆ ಬಿಟ್ಟಿರುವುದು, ಕ್ಷೌರ ಮಾಡಿಸದಿರುವುದು ಹಾಗೂ ರೌಡಿಗಳ ವೇಷ-ಭೂಷಣಗಳ ಬಗ್ಗೆ ಪೊಲೀಸರು ಹೀಯಾಳಿಸಿದ್ದಾರೆ. ಡಿಸಿಪಿ ನೀಡಿದ ಸೂಚನೆಯಂತೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯೊಬ್ಬರ ಮೀಸೆ ಹಿಡಿದು ಎಳೆದು ತಂದು ನಿಲ್ಲಿಸಿದ್ದಾರೆ.

ಪೊಲೀಸರ ಮೇಲೆ ಮಚ್ಚು ಎತ್ತಿದ ರೌಡಿಗೆ ಗುಂಡುಪೊಲೀಸರ ಮೇಲೆ ಮಚ್ಚು ಎತ್ತಿದ ರೌಡಿಗೆ ಗುಂಡು

ರೌಡಿಗಳ ಪರೇಡ್ ನಡೆಸಿದಾಗ ಪ್ರಸ್ತುತ ಕೆಲಸ, ಮನೆ ವಿಳಾಸ, ಸಂಬಂಧಿಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಂಡು ಅವರ ಮನ ಪರಿವರ್ತನೆ ಆಗುವಂತೆ ಸೂಚನೆಗಳನ್ನು ನೀಡಬೇಕು. ಆದರೆ, ಪೊಲೀಸರು ಪರೇಡ್‌ ಅನ್ನು ಶೋ ಅಪ್ ಕಾರ್ಯಕ್ರಮದಂತೆ ಮಾಡುತ್ತಾರೆ ಎಂಬುದು ಆರೋಪವಾಗಿದೆ.

ಶೇವಿಂಗ್, ಕಟಿಂಗ್ : ಪರೇಡ್‌ಗೆ ಬಂದಿದ್ದ ರೌಡಿಗಳ ಗಡ್ಡ, ಮೀಸೆ, ಹೇರ್‌ ಸ್ಟೈಲ್‌ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ವಿಭಿನ್ನ ಹೇರ್ ಸ್ಟೈಲ್ ಹೊಂದಿದ್ದ ರೌಡಿಗಳಿಗೆ ಕಪಾಳ ಮೋಕ್ಷ ಮಾಡಲಾಗಿದೆ. ಲಾಠಿಯಿಂದ ಥಳಿಸಲಾಗಿದೆ. ಸ್ಥಳದಲ್ಲಿಯೇ ಅವರಿಗೆ ಕಟಿಂಗ್, ಶೇವಿಂಗ್ ಮಾಡಲಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿಗಳು ಪರೇಡ್‌ನಲ್ಲಿ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೌಡಿಗಳಿಗೆ ಎಚ್ಚರಿಕೆ ನೀಡುವ ಕಾರ್ಯಕ್ರಮ ಶೋ ಅಪ್ ಕಾರ್ಯಕ್ರಮವಾಗಿದೆ. ರೌಡಿಗಳ ಮೇಲೆ ನಿಗಾ ಇಡಬೇಕು, ಬರೀ ಪರೇಡ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೆಲವು ನಿವೃತ್ತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

English summary
Bengaluru North police conducted rowdy parade ahead of Bakrid and Independence day. In a parade police violates the human rights alleged retired officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X