ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ: ಪೊಲೀಸ್ ಉನ್ನತಾಧಿಕಾರಿಗಳ ಸಭೆಯ ಮುಖ್ಯಾಂಶಗಳು

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 21: ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಮುನ್ನೆಚ್ಚರಿಕೆ ಕುರಿತಂತೆ ನಿನ್ನೆ (ಮಾರ್ಚ್ 20) ರ ಸಂಜೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ನ್ಯಾಯಯುತ ಚುನಾವಣೆ ನಡೆಯುವಂತೆ ದಮಾಡುವ ಹಾಗೂ ಸೂಕ್ತ ಭದ್ರತೆ ಒದಗಿಸುವ ಬಗೆಗೆ ಚರ್ಚಿಸಲಾಯಿತು. ಚರ್ಚೆಯಲ್ಲಿ ನಗರದ ಎಲ್ಲಾ ವಿಭಾಗದ ಡಿಸಿಪಿ ಎಸಿಪಿ ಮತ್ತು ಠಾಣಾ ಪೊಲೀಸ್ ಇನ್ಸಪೆಕ್ಟರ್‌ಗಳು ಭಾಗವಹಿಸಿದ್ದರು.

ಚುನಾವಣೆ ಹಿನ್ನೆಲೆ, ರೌಡಿಗಳಿಗೆ ಬೆಂಗಳೂರು ಪೊಲೀಸರ ಖಡಕ್ ವಾರ್ನಿಂಗ್ಚುನಾವಣೆ ಹಿನ್ನೆಲೆ, ರೌಡಿಗಳಿಗೆ ಬೆಂಗಳೂರು ಪೊಲೀಸರ ಖಡಕ್ ವಾರ್ನಿಂಗ್

Bengaluru police meeting about controlling election offense

ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಇಂತಿವೆ...

* ಚುನಾವಣೆ ಪ್ರಚಾರ ಮತ್ತು ಮತದಾನದಂದು ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆಗೆ ಹೆಚ್ಚು ಗಮನ
* ಪ್ರತಿ ಠಾಣೆಯ ಎಲ್ಲಾ ಸೂಕ್ಷ್ಮ ಪ್ರದೇಶಗಳ ಪಟ್ಟಿ ತಯಾರಿ
* ಯಾವ ರೌಡಿ ಶೀಟರ್‌ಗಳು ಯಾವ ಯಾವ ಪಕ್ಷದ ಪರವಾಗಿದ್ದಾರೆ ಪಟ್ಟಿ ಮಾಡುವುದು ಮತ್ತು ಅವರ ಮೇಲೆ ನಿಗಾ ವಹಿಸುವುದು
* ಸಿಆರ್‌ಪಿಸಿ 110 ಸೆಕ್ಷನ್ ಅಡಿಯಲ್ಲಿ ರೌಡಿಗಳ ಮಟ್ಟಹಾಕಲು ಸೂಚನೆ
* ಮತದಾರರಿಗೆ ಆಮಿಷ ಒಡ್ಡುವವರ ವಿರುದ್ದ ಸೂಕ್ತ ಕ್ರಮ, ಚುನಾವಣಾ ಅಕ್ರಮ ನಡೆಯದಂತೆ ಕ್ರಮ
* ರೌಡಿಶೀಟರ್‌ಗಳು ಪ್ರಸ್ತುತ ಯಾವ ಯಾವ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕುವುದು
* ಠಾಣಾ ವ್ಯಾಪ್ತಯ ಅಪರಾಧ ಚಟುವಟಿಕೆಗಳ ಬಗ್ಗೆ ಮೂರು ಮಾದರಿ ವಿಂಗಡಣೆ ಮಾಡಿ ಪ್ರತ್ಯೇಕ ತಂತ್ರದ ಮೂಲಕ ಬಗ್ಗುಬಡಿಯುವುದು
* ಸೂಕ್ಷ್ಮ, ಅತಿ ಸೂಕ್ಷ್ಮ, ಸಾಧಾರಣವೆಂದು ವಿಂಗಡನೆ ಮಾಡುವುದು
* ಪ್ರತಿ ಬೂತ್‌ಗೆ ಪ್ರತಿದಿನ ಭೇಟಿ ಮಾಡಿ ಪರಿಶೀಲನೆ ಮಾಡುವುದು
* ಒಂದೊಂದು ಕ್ಷೇತ್ರಕ್ಕೆ ಒಬ್ಬ ಎಸಿಪಿಗೆ ಭಧ್ರತೆಯ ಜವಾಬ್ದಾರಿ ವಹಿಸುವುದು
* ಬೂತ್ ಸುತ್ತಮುತ್ತ ಯಾರು ಸಂಚು ರೂಪಿಸದಂತೆ ಪರಿಶೀಲನೆ
* ಹೋಮ್‌ಗಾರ್ಡ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು
* ಬೇರೆ ಇಲಾಖೆಗಳೊಂದಿಗೆ ಸಂವಹನ ಸಾಧಿಸಿ ಪರಿಣಾಮಕಾರಿಯಾಗಿ ಕಾರ್ಯ ಮಾಡಬೇಕು
* ಮತದಾರರಿಗೆ, ಜನಪ್ರತಿನಿಧಿಗಳಿಗೆ ಬೆದರಿಕೆ ಒಡ್ಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು
* ಪಕ್ಷಗಳ ಕರ್ಯಕರ್ತರ ನಡುವೆ ಸೌಹಾರ್ಧ ಸ್ಪರ್ಧೆ ಏರ್ಪಡುವಂತೆ ಮಾಡಬೇಕು

English summary
Bengaluru police commissioner Sunil Kumar called meeting of all DCP, ACP and inspectors to discuss election security. meeting decided to give maximum security to voters. sunil kumar said to police that 'work for fair and fear free polling'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X