ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ ಮುಂಜಾಗ್ರತೆ: ಶಾಂತವಾಗಿ ಶುರುವಾಯ್ತು ಹೊಸವರ್ಷ

|
Google Oneindia Kannada News

ಹೊಸ ವರ್ಷವನ್ನು ವಿಶ್ವದಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಬರಮಾಡಿಕೊಳ್ಳಲಾಗಿದೆ. ಪ್ರತಿ ವರ್ಷವೂ ಒಂದಿಲ್ಲೊಂದು ಅಹಿತಕರ ಘಟನೆಯಿಂದಾಗಿ ಕಪ್ಪು ಚುಕ್ಕೆ ಹೊಂದಿದ್ದ ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಈ ಬಾರಿ ಬೆಂಗಳೂರು ಪೊಲೀಸರು ಅತಿಯಾದ ಭದ್ರತೆ ಏರ್ಪಡಿಸಿದ್ದರಿಂದ ಹೆಚ್ಚು ಅಹಿತಕರ ಘಟನೆಗಳ ವರದಿಯಾಗಿಲ್ಲ.

ಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದೆ ಜಗತ್ತುಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದೆ ಜಗತ್ತು

ಇಲ್ಲಿನ ಕಾವೇರಿ ಎಂಪೋರಿಯಂ ಜಂಕ್ಷನ್ ಬಳಿ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ ಎಂದು ಕೆಲವು ಮೂಲಗಳು ತಿಳಿಸಿದ್ದರೂ, ಈ ಕುರಿತು ಖಚಿತ ಮಾಹಿತಿ ಲಭ್ಯವಿಲ್ಲ.

Bengaluru police made new year celebration peaceful

ಬ್ರಿಗೇಡ್ ರಸ್ತೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ದಾರಿ ಗುರುತಿಸಿದ್ದು ಸಹ ಸುರಕ್ಷಿತ ಹೊಸ ವರ್ಷದ ನಾಂದಿಗೆ ಕಾರಣವಾಯಿತು. ಅಷ್ಟೇ ಅಲ್ಲ, ಒಂದೇ ಸ್ಥಳದಲ್ಲಿ ಹೆಚ್ಚು ಜನ ನಿಲ್ಲುವುದಕ್ಕೆ ಅವಕಾಶವನ್ನೂ ನೀಡಿರಲಿಲ್ಲ. ಅಲ್ಲದೆ ಜನ ಜಂಗುಳಿ ತಡೆಯುವುದಕ್ಕಾಗಿ ಪೊಲೀಸರು ಕೆಲಕಾಲ ಬ್ರಿಗೇಡ್ ರಸ್ತೆಯನ್ನು ಮುಚ್ಚಿದ್ದರು.

ಹೊಸ ವರ್ಷವನ್ನು ಸಂಭ್ರಮಿಸುವುದಕ್ಕೆಂದು ಬಂದವರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಪೊಲೀಸರೇ ಇದ್ದಿದ್ದರಿಂದ ಈ ಬಾರಿಯ ಹೊಸ ವರ್ಷ ಸುರಕ್ಷಿತವಾಗಿ ಆಚರಣೆಗೊಂಡಿದೆ. ಪ್ರತಿ ವರ್ಷಾರಂಭದಲ್ಲೂ ಒಂದಿಲ್ಲೊಂದು ಅಹಿತಕರ ಘಟನೆಯಿಂದ ಸುದ್ದಿಯಾಗುತ್ತಿದ್ದ ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳು ಬೆಂಗಳೂರು ಪೊಲೀಸರ ಕಣ್ಗಾವಲಿನಿಂದಾಗಿ ಈ ವರ್ಷ ಪ್ರಶಂಸೆಗೆ ಪಾತ್ರವಾಗಿವೆ.

English summary
People in Bengaluru's MG Road and Brigade road celebrate new year peacefully on Mid night of Dec 31st. To avoid unhealthy incidents Bengaluru police have arranged tight security in these roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X