ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯರ ನೆರವಿಗೆ ಬೆಂಗಳೂರು ಪೊಲೀಸರ ಸಹಾಯವಾಣಿ

|
Google Oneindia Kannada News

ಬೆಂಗಳೂರು, ಮಾ. 27: ಹಿರಿಯರ ಮೇಲಾಗುತ್ತಿರುವ ನಿಂದನೆ ಮತ್ತು ದೌರ್ಜನ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸ್ ಇಲಾಖೆ ಮಾರ್ಚ್ 28 ರಂದು ಬೆಳಗ್ಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅರ್ಧ ದಿನದ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲದೇ ಹಿರಿಯರ ನೆರವಿಗೆ ಇರುವ ಸಹಾಯವಾಣಿಯನ್ನು ಪ್ರಚುರಪಡಿಸಲಾಗುವುದು.

ಹಿರಿಯರ ಸಹಾಯವಾಣಿಯು ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನಡುವಣ ಜಂಟಿ ಯೋಜನೆಯಾಗಿದೆ. ಪೊಲೀಸರು ಹಾಗೂ ಹಿರಿಯ ನಾಗರಿಕರ ನಡುವೆ ಒಂದು ಆರೋಗ್ಯಕರವಾದ ವಾತಾವರಣ ಸೃಷ್ಟಿಗೆ ಈ ಯೋಜನೆ ನೆರವಾಗಲಿದೆ.

police

ಪೊಲೀಸ್ ಆಯುಕ್ತರು ಎಂ.ಎನ್.ರೆಡ್ಡಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ದೌರ್ಜನ್ಯ, ನಿಂದನೆ, ಕಿರುಕುಳ, ಹಿಂಸೆ ಕುರಿತಾದ ಯಾವ ದೂರುಗಳಿದ್ದರೂ ನೇರವಾಗಿ ಸಹಾಯವಾಣಿ ಮೂಲಕ ದೂರು ದಾಖಲಿಸಬಹುದು.

ಸಹಾಯವಾಣಿ 2002 ರಲ್ಲೇ ಆರಂಭವಾಗಿದ್ದರೂ ಸರಿಯಾಗಿ ಪ್ರಚಾರ ಸಿಕ್ಕಿಲ್ಲ. ಈ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ನಿಜವಾಗಿ ಸಮಸ್ಯೆಯಲ್ಲಿರುವವರಿಗೆ ನೆರವು ನೀಡಲು ಸಾಧ್ಯವಾಗುತ್ತದೆ. ಬೆಂಗಳೂರಿನ ಎಲ್ಲ ಪೊಲೀಸ್ ಠಾಣೆಗಳಿಂದಲೂ ಒಬ್ಬ ಮುಖ್ಯ ಪೇದೆಯನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ 1090, 22943226 ಸಂಪರ್ಕಿಸಬಹುದು.

English summary
Bengaluru Police has introduced a help line for Senior Citizens. In this connection, a half-a-day seminar will held in city commissioner office on March 28, Saturday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X