ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

25ಕ್ಕೂ ಹೆಚ್ಚು ಆನ್‌ಲೈನ್ ಸಂಸ್ಥೆಗಳ ವ್ಯವಹಾರಕ್ಕೆ ಪೊಲೀಸರ ಅನುಮತಿ

|
Google Oneindia Kannada News

ಬೆಂಗಳೂರು, ಮಾರ್ಚ್ 26: 25ಕ್ಕೂ ಹೆಚ್ಚು ಆನ್ ಲೈನ್ ಸಂಸ್ಥೆಗಳ ವ್ಯವಹಾರಕ್ಕೆ ಬೆಂಗಳೂರು ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಆಲ್ ಲೈನ್್ನಲ್ಲಿ ಆರ್ಡರ್ ಪಡೆದು, ಜನರಿಗೆ ಆಹಾರವನ್ನು ತಲುಪಿಸುವ ಕೆಲಸವನ್ನು ಈ ಸಂಸ್ಥೆಗಳು ಮಾಡಲಿದೆ.

ಕೊರೊನಾ ತಡೆಗೆ ಭಾರತ್ ಲಾಕ್ ಡೌನ್‌ ಆಗಿದೆ. 21 ದಿನಗಳ ಕಾಲ ಜನರು ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ. ಇತ್ತ ಬಹುತೇಕ ಆನ್ ಲೈನ್ ಡೆಲಿವರಿ ಕಂಪನಿಗಳು ಕೂಡ ಬಂದ್ ಆಗಿದ್ದವು. ಇದರಿಂದ ಜನರಿಗೆ ಅಗತ್ಯ ವಸ್ತುಗಳ ಕೊಂಡುಕೊಳ್ಳುವುದು ಸಮಸ್ಯೆಯಾಗಿದೆ.

ಆನ್ ಲೈನ್ ಮಾರಾಟಗಾರರೊಂದಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆಆನ್ ಲೈನ್ ಮಾರಾಟಗಾರರೊಂದಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ

ಹೀಗಾಗಿ, ನಿನ್ನೆ (ಮಾರ್ಚ್ 26) ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅನೇಕ ಆಲ್ ಲೈನ್ ಮಾರಾಟಗಾರರು ಭಾಗಿಯಾಗಿದ್ದರು. ಮಾತುಕತೆ ನಡೆಸಿ ಕೆಲವು ಸಂಸ್ಥೆಗಳ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.

Bengaluru Police department clear instructions to facilitate the operations of e-commerce retailers

ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ.

ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

English summary
Bengaluru police commissioner Bhaskar Rao clear instructions to facilitate the operations of e-commerce retailers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X