ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಫ್ ಫೆಸ್ಟಿವಲ್ ಗೆ ಅನುಮತಿ ನೀಡಿಲ್ಲ: ಬೆಂಗಳೂರು ಪೊಲೀಸ್

By Mahesh
|
Google Oneindia Kannada News

ಬೆಂಗಳೂರು, ಮೇ 29: ಕೇರಳದಲ್ಲಿ ನಡೆಸಲಾದ ಗೋಹತ್ಯೆ ಕಮ್ ಬೀಫ್ ಫೆಸ್ಟಿವಲ್ ಈಗ ಬೆಂಗಳೂರಿಗೆ ಅಂಬೆಗಾಲಿಡುತ್ತಿರುವ ಸುದ್ದಿ ಬೆಳಗ್ಗೆ ಓದಿರುತ್ತೀರಿ.. -ಸೋಮವಾರ(ಮೇ 29) ಟೌನ್ ಹಾಲ್ ನಲ್ಲಿ ನಿಗದಿಯಾಗಿರುವ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಬೆಂಗಳೂರು ಕೇಂದ್ರ ವಲಯದ ಡಿಸಿಪಿ ಡಾ. ಚಂದ್ರಗುಪ್ತ ಅವರು ಟ್ವೀಟ್ ಮಾಡಿದ್ದಾರೆ.

ಸ್ಟೂಡೆಂಟ್ಸ್ ಫೆಡೆರೇಷನ್ ಆಫ್ ಇಂಡಿಯಾ(ಎಸ್ಎಫ್ ಐ) ಆಯೋಜನೆಯ ಬೀಫ್ ಫೆಸ್ಟಿವಲ್ ಅಥವಾ Mooment Bengluru ಕಾರ್ಯಕ್ರಮಕ್ಕೆ ಗೋ ಪರಿವಾರದವರು ವಿರೋಧ ವ್ಯಕ್ತಪಡಿಸಿ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬೀಫ್ ಫೆಸ್ಟಿವಲ್ ನಿಲ್ಲಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.[ಕಣ್ಣೂರಿನ ನಂತರ ಐಐಟಿ, ಮದ್ರಾಸಿನಲ್ಲಿ ಬೀಫ್ ಫೆಸ್ಟಿವಲ್]

 Bengaluru police denies permission to Mooment Bengluru-Beef Festival SFI

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಫ್ ಐ, ಡಿವೈಎಫ್ ಐ ಕಾರ್ಯಕರ್ತರು ಈ ಕಾರ್ಯಕಮವನ್ನು 4.30ರ ಬದಲಿಗೆ ಸಂಜೆ 6.45ಕ್ಕೆ ನಿಗದಿಪಡಿಸಲಾಗಿದೆ. ರಂಜಾನ್ ಪ್ರಾರ್ಥನೆ ನಿಮಿತ್ತ ವೇಳೆ ಬದಲಾಯಿಸಲಾಗಿದೆ ಎಂದಿದ್ದಾರೆ.[ಬೀಫ್ ಫೆಸ್ಟ್ : ಕವಯಿತ್ರಿಗೆ ಮುಸ್ಲಿಂರಿಂದಲೇ ಮಂಗಳಾರತಿ]

ಅಕ್ರಮವಾಗಿ ಪಶುಗಳ(ಹಸು,ಎಮ್ಮೆ, ಒಂಟೆ, ಎತ್ತು, ಇತ್ಯಾದಿ)ಮಾರಾಟವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ನಿಯಮಾವಳಿಗಳ ವಿರುದ್ಧ ಕೇರಳದಲ್ಲಿ ಭಾರಿ ವಿರೋಧ, ಪ್ರತಿಭಟನೆ ವ್ಯಕ್ತವಾಗಿದೆ.[ಬೆಂಗಳೂರಲ್ಲಿ ಬೀಫ್ ಫೆಸ್ಟಿವಲ್ ವಿರುದ್ಧ ಗೋರಕ್ಷಕರ ಪ್ರತಿಭಟನೆ]

English summary
Bengaluru police has denied permission to the event “Mooment Bengluru” beef festival by Student Federation of India(SFI). The event is rescheduled for 6:45pm, May29 at the Puttannachetty Townhall. Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X