ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ವಾಹನ; ಪೋಷಕರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್

|
Google Oneindia Kannada News

ಬೆಂಗಳೂರು, ಜನವರಿ 29: ಕಾನೂನುಗಳನ್ನು ಉಲ್ಲಂಘನೆ ಮಾಡಿ, ಶಾಲಾ ವಾಹನಗಳು ಮಕ್ಕಳನ್ನು ತುಂಬಿಕೊಂಡು ಹೋಗುವುದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೋಷಕರ ಮೇಲೆ ಬೆರಳು ತೋರಿಸಿ ಎಚ್ಚರಿಕೆ ನೀಡಿದ್ದಾರೆ.

ಶಾಲಾ ವಾಹನವೊಂದು ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದನ್ನು ಫೋಟೊ ಹಾಕಿ ಟ್ವೀಟ್ ಮಾಡಿರುವ ಅವರು, ''ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಏನಾದರೂ ಆದರೆ ಸಾರ್ವಜನಿಕರು ಕೇವಲ ಪೊಲೀಸರ ಮೇಲೆ ಗೂಬೆ ಕೂರಿಸುವುದಲ್ಲ. ಇದಕ್ಕೆ ವಾಹನ ಚಾಲಕನಂತೆ ಪೋಷಕರೂ ಕಾರಣರಾಗುತ್ತಾರೆ'' ಎಂದು ಶಾಲಾ ಮಕ್ಕಳ ಪೋಷಕರನ್ನು ಎಚ್ಚರಿಸಿದ್ದಾರೆ.

ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!

ಯಾವ ವಾಹನಗಳಿಗೆ ಎಷ್ಟು ಮಕ್ಕಳನ್ನು ಹತ್ತಿಸಿಕೊಳ್ಳಲು ಅನುಮತಿ ನೀಡಿದೆಯೋ ಅಷ್ಟೇ ಸಂಖ್ಯೆಯಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಇದನ್ನು ಪೋಷಕರೂ ಸಹ ತಿಳಿದುಕೊಳ್ಳಬೇಕು. ಹೆಚ್ಚು ಮಕ್ಕಳನ್ನು ವ್ಯಾನ್‌ಗಳಲ್ಲಿ ತುಂಬಿ ಕಳುಹಿಸದಂತೆ ಭಾಸ್ಕರ್ ರಾವ್ ಅವರು ಈ ಮೂಲಕ ಪೋಷಕರನ್ನು ಎಚ್ಚರಿಸಿದ್ದಾರೆ.

Bengaluru Police Commissioner Warn To School Children Parents

ಫೋನ್ ನಂಬರ್ ಶೇರ್ ಮಾಡುವಾಗ ಹುಷಾರ್: ಭಾಸ್ಕರ್ ರಾವ್ ಟ್ವೀಟ್ಫೋನ್ ನಂಬರ್ ಶೇರ್ ಮಾಡುವಾಗ ಹುಷಾರ್: ಭಾಸ್ಕರ್ ರಾವ್ ಟ್ವೀಟ್

ಬೆಂಗಳೂರಿನ ಅಪರಾಧ ಹಾಗೂ ಟ್ರಾಫಿಕ್ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಟ್ವಿಟ್ಟರ್‌ನಲ್ಲಿ ವಿಭಿನ್ನವಾಗಿ ಗಮನ ಸೆಳೆದು ಕಾನೂನುಗಳನ್ನು ಉಲ್ಲಂಘನೆ ಮಾಡಬೇಡಿ ಎಂದು ಬೆಂಗಳೂರಿಗರಿಗೆ ತಿಳಿ ಹೇಳುವುದರಲ್ಲಿ ಸಿದ್ದಹಸ್ತರಾಗಿದ್ದಾರೆ.

English summary
Bangalore city police commissioner Bhaskar Rao has warned parents against violating laws and filling school vehicles with children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X