ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಪೊಲೀಸರ ದುರ್ವತನೆ ಸಮರ್ಥಿಸಿದರೇ ಬೆಂಗಳೂರು ಕಮೀಷನರ್?

|
Google Oneindia Kannada News

Recommended Video

ಟ್ರಾಫಿಕ್ ಪೊಲೀಸ್ ಕೆಟ್ಟ ವರ್ತನೆಯನ್ನು ಸಮರ್ಥಿಸಿಕೊಂಡರಾ ಕಮೀಷನರ್ | Oneindia Kannada

ಬೆಂಗಳೂರು, ಸೆಪ್ಟೆಂಬರ್ 29: ಸಂಚಾರಿ ಪೊಲೀಸರು ಇತ್ತೀಚೆಗೆ ತನ್ನ ದುರ್ವತನೆಯಿಂದ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ದಂಡ ಏರಿಕೆ ನಂತರವಂತೂ ದುರ್ವತನೆ ಪ್ರಮಾಣ ಹೆಚ್ಚಾಗಿಯೇ ವರದಿ ಆಗುತ್ತಿದೆ. ಇವು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದೆ.

ಆದರೆ ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಮಾಡಿರುವ ಟ್ವೀಟ್ ಒಂದು ಪೊಲೀಸರ ದುರ್ವತನೆಯನ್ನು ಸಮರ್ಥಿಸುವಂತಿದೆ. ಆಯುಕ್ತರ ಈ ಟ್ವೀಟ್‌ ಸಹ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಪೊಲೀಸರಿಂದ ಹಲ್ಲೆ; ಸಾಯುವ ನಿರ್ಧಾರ ಮಾಡಿದ್ದೇನೆ ಎಂದ ಚಾಲಕಪೊಲೀಸರಿಂದ ಹಲ್ಲೆ; ಸಾಯುವ ನಿರ್ಧಾರ ಮಾಡಿದ್ದೇನೆ ಎಂದ ಚಾಲಕ

ಇಂದು ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ಅವರು, 'ಸಂಚಾರಿ ಪೊಲೀಸರಿಂದ ಸೇವೆ ಒತ್ತಾಯ ಮಾಡುವುದು ಸಾರ್ವಜನಿಕರ ಹಕ್ಕು, ಯಾವುದೇ ಸ್ಥಳದಲ್ಲಿ, ಯಾವುದೇ ಜಂಕ್ಷನ್‌ನಲ್ಲಿಯಾದರೂ ಅರ್ಧ ದಿನ ನಮ್ಮ ಸಂಚಾರಿ ಪೊಲೀಸರ ಜೊತೆ ಕೆಲಸ ಮಾಡಿ, ಆ ನಂತರ ಪೊಲೀಸರು ಹೇಗೆ ವರ್ತಿಸಬೇಕು ಎಂದು ಸಲಹೆ ನೀಡಿ' ಎಂದು ಹೇಳಿದ್ದಾರೆ.

Bengaluru Police Commissioner Tweet About Traffic Police Job

ಭಾಸ್ಕರ್ ರಾವ್ ಅವರ ಈ ಟ್ವೀಟ್ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರ ದುರ್ವತನೆಯನ್ನು ಸಮರ್ಥಿಸುವಂತೆ ಈ ಟ್ವೀಟ್ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿ

'ಟ್ರಾಫಿಕ್ ಪೊಲೀಸರ ಕಾರ್ಯ ಸುಲಭದ್ದು ಎಂದು ಯಾರೂ ಹೇಳಿಲ್ಲ, ಆದರೆ ಅವರಿಂದ ಕನಿಷ್ಟ ಸೌಜನ್ಯವನ್ನಷ್ಟೆ ನಾವು ನಿರೀಕ್ಷಿಸುತ್ತಿದ್ದೇವೆ' ಎಂದು ಭಾಸ್ಕರ್‌ ರಾವ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ ಸಂತೀಪ್ ಎಂಬ ಟ್ವಿಟ್ಟರ್ ಬಳಕೆದಾರ.

ಕೆಲವರು ಭಾಸ್ಕರ್ ರಾವ್ ಅವರ ಪರವಹಿಸಿಯೂ ಟ್ವೀಟ್ ಮಾಡಿದ್ದು, ಸಂಚಾರಿ ಪೊಲೀಸರ ಕೆಲಸ ಅತ್ಯಂತ ದುಸ್ತರವಾದುದು, ಸಾರ್ವಜನಿಕರು ಅನುಸರಿಸಿಕೊಂಡು ಹೋಗಬೇಕು, ಸಂಚಾರಿ ಪೊಲೀಸರ ಮೇಲೆ ಕರುಣೆಯಿಂದ ವರ್ತಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

English summary
Bengaluru police commissioner Bhaskar Rao tweet about Traffic police. His tweet seems to justify police's outrage against public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X