ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಭೆ

|
Google Oneindia Kannada News

ಬೆಂಗಳೂರು, ಜೂನ್ 25: ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಗೆ ಆಗ್ರಹಿಸಿ ಒತ್ತಾಯಿಸಿದ ಪ್ರತಿಭಟನಾಕಾರರು ವಿಧಾನಸೌಧದ ಅಂಗಳಕ್ಕೆ ನುಗ್ಗಿದ್ದರು. ಇದನ್ನು ಭದ್ರತಾ ವೈಫಲ್ಯ ಎಂದು ಪರಿಗಣಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ನಗರದಲ್ಲಿ ತಡರಾತ್ರಿ ಡಿಸಿಪಿ, ಎಡಿಸಿಪಿ ಸೇರಿ ಇನ್ನೂ ಹಲವು ಪ್ರಮುಖ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಅಲೋಕ್ ಕುಮಾರ್ ಅವರು ಭದ್ರತಾ ನಿರ್ಲಕ್ಷ್ಯದ ಬಗ್ಗೆ ಗರಂ ಆಗಿದ್ದಾರೆ ಎನ್ನಲಾಗಿದೆ.

ಪರಿಶಿಷ್ಟ ಪಂಗಡ ಮೀಸಲಾತಿ ಕುರಿತು ಸಿಎಂ ಕುಮಾರಸ್ವಾಮಿ ಸಭೆಪರಿಶಿಷ್ಟ ಪಂಗಡ ಮೀಸಲಾತಿ ಕುರಿತು ಸಿಎಂ ಕುಮಾರಸ್ವಾಮಿ ಸಭೆ

ಮೀಸಲಾತಿ ಹೋರಾಟಗಾರರು ನಗರ ಪ್ರವೇಶಿಸುತ್ತಿದ್ದಾರೆ ಎಂದು ಮೊದಲೇ ಮಾಹಿತಿ ಇದ್ದರೂ ಸಹ, ಅವರನ್ನು ಫ್ರೀಡಂ ಪಾರ್ಕ್‌ ಬಳಿ ತಡೆಯದೆ, ವಿಧಾನಸೌಧದ ಬಳಿಗೆ ಬಿಟ್ಟ ಕಾರಣ ವಿಧಾನಸೌಧದ ಬಳಿ ಹಲವು ಗೊಂದಲುಗಳು ಉಂಟಾಗಿವೆ.

Bengaluru police commissioner call city police officers meeting

ಅಷ್ಟೆ ಅಲ್ಲದೆ, ಮೆಜಿಸ್ಟಿಕ್‌ ನಿಂದ ಕೆ.ಆರ್.ವೃತ್ತದ ವರೆಗೆ ಸಂಚಾರ ದಟ್ಟಣೆ ಉಂಟಾಗಿ ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಯಿತು.

ವಿಧಾನಸೌಧದ ಬಳಿ ಪ್ರತಿಭಟನಾಕಾರರು ಮುತ್ತಿಗೆಗೆ ಬಂದಾಗ ಅಲ್ಲಿ ಕೇವಲ 50 ಮಂದಿ ಮಾತ್ರ ಪೊಲೀಸರು ಇದ್ದರು, ಇವರು ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನನು ತಡೆಯಲು ವಿಫಲರಾದರು ಎನ್ನಲಾಗಿದೆ.

ಬೆಂಗಳೂರಿನ ಹೊಸ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಬೆಂಗಳೂರಿನ ಹೊಸ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ಪ್ರತಿಭಟನೆ ಮತ್ತು ಸಂಚಾರ ದಟ್ಟಣೆಯಿಂದಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸಹ ಕಾರು ಬಿಟ್ಟು, ಮೆಟ್ರೋದಲ್ಲಿ ಪ್ರಯಾಣಿಸಬೇಕಾಯಿತು, ಇವರೊಬ್ಬರೇ ಅಲ್ಲದೆ, ವಿಧಾನಸೌಧಕ್ಕೆ ಬಂದ ಹಲವು ಪ್ರಮುಖ ಅಧಿಕಾರಿಗಳು, ರಾಜಕಾರಣಿಗಳಿಗೂ ಪ್ರತಿಭಟನೆಯ ಬಿಸಿ ತಾಗಿತು, ಹಾಗಾಗಿ ಅಲೋಕ್ ಕುಮಾರ್ ಅವರನ್ನು ಸಿಎಂ ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆಯಷ್ಟೆ ರೈತ ರೇವಣ್ಣ ಕುಮಾರ್‌ ಎಂಬಾತ ಭದ್ರತೆಯ ನಡುವೆಯೂ ವಿಧಾನಸೌಧದ ಒಳಕ್ಕೆ ಆಯುಧ ಒಯ್ದು ಆತ್ಮಹತ್ಯೆಗೆ ಯತ್ನಿಸಿದ್ದ, ಅದಾದ ಒಂದೇ ದಿನಕ್ಕೆ ಮತ್ತೆ ವಿಧಾನಸೌಧದ ಬಳಿಯೇ ಭದ್ರತಾ ಲೋಪ ಕಂಡು ಬಂದಿರುವುದು ಅಲೋಕ್ ಕುಮಾರ್ ಅವರ ಸಿಟ್ಟಿಗೆ ಕಾರಣವಾಗಿದೆ.

English summary
Today reservation activists managed to get into the gates of Vidhan Soudha by passing police security. So Bengaluru police commissioner Alok Kumar call for city police officers meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X