ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರಿಗೆ ಹದ್ದುಗಳನ್ನು ಪಳಗಿಸುವವರು ಬೇಕಂತೆ!

|
Google Oneindia Kannada News

ಬೆಂಗಳೂರು ಫೆಬ್ರವರಿ 28: ನೀವು ಹದ್ದುಗಳನ್ನು ಪಳಗಿಸುವ ತರಬೇತುದಾರರಾಗಿದ್ದರೆ ಅಥವಾ ನಿಮಗೆ ಹದ್ದುಗಳನ್ನು ಪಳಗಿಸುವವರ ಪರಿಚಯ ಇದ್ದರೆ ಕೂಡಲೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಸಂಪರ್ಕಿಸಬಹುದು.

Recommended Video

Bengaluru Police commissioner Bhaskar Rao wants an eagle trainer | BCP | Oneindia Kannada

ಹೌದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಹದ್ದುಗಳನ್ನು ಪಳಗಿಸುವವರು ಬೇಕಾಗಿದ್ದಾರೆ ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಭಾಸ್ಕರ್‌ರಾವ್‌ ಅವರು ''ಹದ್ದುಗಳ ತರಬೇತುದಾರರು ಬೇಕಾಗಿದ್ದಾರೆ. ಯಾರಾದರೂ ಇದ್ದಾರಾ ಅಥವಾ ಪರಿಚಯ ಇದ್ದರೆ ತಿಳಿಸಿ'' ಎಂದು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!

ಇತ್ತೀಚಿನ ದಿನಗಳಲ್ಲಿನಗರದಲ್ಲಿ ಡ್ರೋನ್‌ಗಳ ಬಳಕೆ ಅತ್ಯಂತ ಸಾಮಾನ್ಯ ಎನ್ನುವಂತಾಗಿದೆ. ಕೆಲ ದೇಶಗಳಲ್ಲಿ ಅಪಾಯಕಾರಿ ಎನಿಸುವ ಡ್ರೋನ್‌ಗಳನ್ನು ಹೊಡೆದುರಳಿಸಲು ಹದ್ದುಗಳನ್ನು ಪಳಗಿಸಿ ತರಬೇತಿ ನೀಡಿ ಬಳಕೆ ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ಡ್ರೋನ್‌ಗಳು ಸಾರ್ವಜನಿಕರ ಭದ್ರತೆಗೆ ತೊಂದರೆ ಉಂಟು ಮಾಡುತ್ತವೆ. ಅದರಲ್ಲೂ ಗಣ್ಯರು, ರಾಜಕಾರಣಿಗಳು, ವಿವಿಐಪಿಗಳು ಆಗಮಿಸಿದ್ದ ಸಂದರ್ಭದಲ್ಲಿಡ್ರೋನ್‌ಗಳ ಬಳಕೆ ಭೀತಿ ಉಂಟು ಮಾಡುತ್ತವೆ.

Bengaluru Police Commissioner Bhaskar Rao Tweet Wanted Eagle Trainers

ಡ್ರೋನ್‌ಗಳ ಮೂಲಕ ಕುಕೃತ್ಯಗಳನ್ನು ಎಸಗುವ ಸಾಧ್ಯತೆ ಇರುವ ಕಾರಣ ವಿವಿಐಪಿ ಪ್ರದೇಶದಲ್ಲಿ ಡ್ರೋನ್‌ ಕಾಣಿಸಿದರೆ ಹದ್ದುಗಳನ್ನು ಬಳಸಿ ಡ್ರೋನ್‌ಗಳನ್ನು ನೆಲಕ್ಕೆ ಕೆಡವಲು ಸಾಧ್ಯವಾಗುತ್ತದೆ ಎಂಬ ವಿಚಾರವನ್ನು ಪೊಲೀಸ್ ಆಯುಕ್ತರು ಹೊಂದಿದ್ದಾರೆ.

ಅನೇಕರು ಟ್ವೀಟ್‌ಗೆ ಪ್ರತಿಕ್ರಿಯಿಸಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮತ್ತು ದೇಶದ ಇತರ ನಗರಗಳಲ್ಲಿ ಹದ್ದು ತರಬೇತುದಾರರು, ಪಳಗಿಸುವವರಿದ್ದಾರೆಂದು ಸಾಕಷ್ಟು ಜನ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅವರ ಸಂಪರ್ಕದ ಬಗ್ಗೆ ಮಾಹಿತಿ ಒದಗಿಸುವುದಾಗಿ ತಿಳಿಸಿದ್ದಾರೆ.

English summary
Bengaluru city police commissioner Bhaskar Rao tweeted Wanted Eagle Trainers. He Tweet 'Do we have any Eagle Trainers in Bangalore or in our country? Need help...'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X