ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವೇ ದಿನಗಳಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎತ್ತಂಗಡಿ?

|
Google Oneindia Kannada News

ಬೆಂಗಳೂರು, ಮೇ 18: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಸದ್ಯದಲ್ಲೇ ಸರಕಾರ ಎತ್ತಂಗಡಿ ಮಾಡಿ, ಆದೇಶ ಹೊರಡಿಸುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿಬರುತ್ತಿದೆ.

Recommended Video

ಕಬ್ಬನ್ ಪಾರ್ಕ್ ಅಂದ್ರೆ ದೇವೇಗೌಡ್ರಿಗೆ ಬಹಳ ಇಷ್ಟ..! | YSV Datta about Deve Gowda

ಪ್ರಮುಖವಾಗಿ ಲಾಕ್ ಡೌನ್ ವೇಳೆ ಹೊರಬಿದ್ದ ಕೆಲವೊಂದು ಭ್ರಷ್ಟಾಚಾರ ಪ್ರಕರಣಗಳು ಭಾಸ್ಕರ್ ರಾವ್ ಅವರ ಕುರ್ಚಿಗೆ ಸಂಚಕಾರ ತಂದಿದೆ ಎಂದು ಹೇಳಲಾಗುತ್ತಿದೆ. ಎಸಿಪಿ ದರ್ಜೆಯ ಪೊಲೀಸ್ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಪ್ರಕರಣವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ.

ಭಾಸ್ಕರ್ ರಾವ್ ಅವರಿಂದ ತೆರವಾಗುವ ಜಾಗಕ್ಕೆ ಈಗಾಗಲೇ ಮೂವರು ಐಪಿಎಸ್ ಅಧಿಕಾರಿಗಳು, ಉನ್ನತ ಮಟ್ಟದಲ್ಲಿ ಲಾಬಿಯನ್ನು ಆರಂಭಿಸಿದ್ದಾರೆಂದೂ ಹೇಳಲಾಗುತ್ತಿದೆ.

crime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣcrime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡು, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ, ಬಿಜೆಪಿ/ಸಂಘ ಪರಿವಾರದ ಪ್ರಮುಖರೊಬ್ಬರು ತೀವ್ರ ಒತ್ತಡ ಹೇರಿದ್ದರಿಂದ, ಭಾಸ್ಕರ್ ರಾವ್ ಅವರನ್ನು ನಗರದ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಬೆಂಗಳೂರು ಕಮಿಷನರ್ ಹುದ್ದೆಗೆ ಸಂಭಾವ್ಯ ಅಧಿಕಾರಿಗಳು:

ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಅಶ್ವಥ್ ನಾರಾಯಣ್ ಆರೋಪ

ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಅಶ್ವಥ್ ನಾರಾಯಣ್ ಆರೋಪ

ಭಾಸ್ಕರ್ ರಾವ್ ಅವರ ಕಾರ್ಯವೈಖರಿಯ ಬಗ್ಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತೀವ್ರ ಅಸಮಾಧಾನವನ್ನು ಹೊಂದಿದ್ದರು. ಪಾಸ್ ವಿತರಿಸುವಲ್ಲಿ ಆಯುಕ್ತರು ಲಂಚ ಪಡೆದಿದ್ದಾರೆಂದು, ನೇರವಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಅಶ್ವಥ್ ನಾರಾಯಣ್ ಆರೋಪಿಸಿದ್ದರು. ಇದಾದ ನಂತರ ಭಾಸ್ಕರ್ ರಾವ್ ಕಣ್ಣೀರು ಹಾಕಿದ್ದು, ಸಿಎಂ ಬಿಎಸ್ವೈ ಅವರನ್ನು ಸಮಾಧಾನ ಪಡಿಸಿದ್ದೆಲ್ಲಾ ಸುದ್ದಿಯಾಗಿತ್ತು.

ಮದ್ಯ, ಗುಟ್ಕಾ ಮಾರಾಟ ಅವ್ಯಾಹತ

ಮದ್ಯ, ಗುಟ್ಕಾ ಮಾರಾಟ ಅವ್ಯಾಹತ

ಇನ್ನು, ಲಾಕ್ ಡೌನ್ ವೇಳೆ, ಮದ್ಯ, ಗುಟ್ಕಾ ಮಾರಾಟವನ್ನು ರಾಜ್ಯ/ಕೇಂದ್ರ ಸರಕಾರ ನಿಷೇಧಗೊಳಿಸಿತ್ತು. ಆದರೆ, ಈ ಅವಧಿಯಲ್ಲಿ ಅವ್ಯಾಹತವಾಗಿ ಮದ್ಯಗಳು ಮಾರಾಟವಾಗುತ್ತಿದ್ದವು. ಮಾಸ್ಕ್ ಗಳು ಕಾಳಸಂತೆಯಲ್ಲಿ ಬಿಕರಿಯಾಗುತ್ತಿದ್ದವು. ಇದನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾಗದೇ ಇದ್ದದ್ದು, ಭಾಸ್ಕರ್ ರಾವ್ ತಲೆದಂಡಕ್ಕೆ ಕಾರಣವಾಗುವ ಸಾಧ್ಯತೆಯಿದೆ.

crime beat 2: ಸಾಕೇತ್ ಎನ್ಕೌಂಟರ್ ಮಾಡಿದ ಕಾಪ್ ಈಗ ಸಿಗರೇಟ್ ಸುಲಿಗೆ ಕೇಸ್ ಆರೋಪಿcrime beat 2: ಸಾಕೇತ್ ಎನ್ಕೌಂಟರ್ ಮಾಡಿದ ಕಾಪ್ ಈಗ ಸಿಗರೇಟ್ ಸುಲಿಗೆ ಕೇಸ್ ಆರೋಪಿ

ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧದ ಎರಡು ಪ್ರತ್ಯೇಕ ಪ್ರಕರಣ

ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧದ ಎರಡು ಪ್ರತ್ಯೇಕ ಪ್ರಕರಣ

ಇನ್ನು, ಲಾಕ್ ಡೌನ್ ನಿರ್ಬಂಧ ಉಲ್ಲಂಘಿಸಿ ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡುವ ನೆಪದಲ್ಲಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧದ ಎರಡು ಪ್ರತ್ಯೇಕ ಪ್ರಕರಣವೂ ಭಾಸ್ಕರ್ ರಾವ್ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.

ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್ ಪಂಥ್

ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್ ಪಂಥ್

ಭಾಸ್ಕರ್ ರಾವ್ ಜಾಗಕ್ಕೆ, ಹಿರಿಯ ಐಪಿಎಸ್ ಅಧಿಕಾರಿ, ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್ ಪಂಥ್, ಅಗ್ನಿಶಾಮಕ ಪಡೆಯ ಎಡಿಜಿಪಿ ಸುನಿಲ್ ಅಗರವಾಲ್ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಅಮೃತ್ ಪಾಲ್ ಅವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ, ಮುಖ್ಯಮಂತ್ರಿಗಳಿಗೆ ಆತ್ಮೀಯರಾಗಿರುವ ಕಮಲ್ ಪಂಥ್, ಬೆಂಗಳೂರು ನಗರದ ಕಮಿಷನರ್ ಆಗುವ ಸಾಧ್ಯತೆಯಿಲ್ಲದಿಲ್ಲ.

English summary
Bengaluru Police Commissioner Bhaskar Rao May Transferred, Sources,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X