ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾವೈರಸ್ ಪರೀಕ್ಷೆಯಲ್ಲಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಾಸ್

|
Google Oneindia Kannada News

ಬೆಂಗಳೂರು, ಜುಲೈ.21: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೇ ನಿಮ್ಮಲ್ಲರ ಆಶೀರ್ವಾದ ಮತ್ತು ಪ್ರಾರ್ಥನೆಯಿಂದ ಆರೋಗ್ಯವಾಗಿದ್ದೇನೆ. ಕೊವಿಡ್-19 ತಪಾಸಣೆ ವೇಳೆ ಸೋಂಕು ನೆಗೆಟಿವ್ ಇರುವುದು ದೃಢಪಟ್ಟಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

Recommended Video

Elephant : ಈ ಆನೆಯ ಕೋಪ ನೋಡಿದ್ರೆ ಭಯ ಆಗುತ್ತೆ | Angry Elephant found in Bandipur National Park | Oneindia Kannada

ಕೊರೊನಾವೈರಸ್ ಸೋಂಕು ತಪಾಸಣೆ ಮಾಡಿಸಿಕೊಳ್ಳುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಪೊಲೀಸ್ ಆಯುಕ್ತರು ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಭಾಸ್ಕರ್ ರಾವ್ ಚಾಲಕನಿಗೆ ಕೊರೊನಾ, ಕಮಿಷನರ್ ಕ್ವಾರಂಟೈನ್ಭಾಸ್ಕರ್ ರಾವ್ ಚಾಲಕನಿಗೆ ಕೊರೊನಾ, ಕಮಿಷನರ್ ಕ್ವಾರಂಟೈನ್

ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಚಾಲಕನಿಗೆ ಶುಕ್ರವಾರ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿತ್ತು. ಈ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕೊರೊನಾ ಭೀತಿ ಎದುರಾಗಿದ್ದು, ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಮೊರೆ ಹೋಗಿದ್ದರು.

Bengaluru Police Commissioner Bhaskar Rao Tested Negative For Coronavirus


ಚಾಲಕನಿಗೆ ಸೋಂಕು ತಗಲಿರುವ ಬಗ್ಗೆ ಟ್ವೀಟ್:

ಈ ಹಿಂದೆ ಸ್ವತಃ ಭಾಸ್ಕರ್ ರಾವ್ ಅವರೇ ಟ್ವೀಟ್ ಮಾಡಿದ್ದು 'ನನ್ನ ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ, ನಾನು ಕ್ವಾರಂಟೈನ್ ‌ಗೆ ಒಳಪಟ್ಟಿದ್ದೇನೆ' ಎಂದು ಮಾಹಿತಿ ನೀಡಿದ್ದರು. ಭಾಸ್ಕರ್ ರಾವ್ ಅವರು ಸೋಮವಾರ ಕೊವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇದಕ್ಕೂ ಮೊದಲು ಕಳೆದ ಮೂರು ತಿಂಗಳಲ್ಲಿ ನಾಲ್ಕು ಬಾರಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಈಗ ಐದನೇ ಬಾರಿ ಪರೀಕ್ಷೆಗೆ ಒಳಪಟ್ಟಿದ್ದಾರೆ.

English summary
Bengaluru Police Commissioner Bhaskar Rao Tested Negative For Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X