ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್' ವಿಡಿಯೋ ವೈರಲ್

|
Google Oneindia Kannada News

Recommended Video

ಬೆಂಗಳೂರು ಪೊಲೀಸರ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್' ವಿಡಿಯೋ ವೈರಲ್ | Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ಪೊಲೀಸರು 'ಢರ್ಡ್‌ ಡಿಗ್ರಿ ಟ್ರೀಟ್‌ಮೆಂಟ್' ಕೊಡುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೊಡಿಯೇ ಇರುತ್ತಿರಿ. ಆದರೆ ನಿಜವಾಗಿಯೂ ಈ ವಿಧಾನ ಎಷ್ಟು ಭಯಾನಕವಾಗಿರುತ್ತದೆ ಎಂಬುದಕ್ಕೆ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷ್ಯ ನೀಡಿದೆ.

ವ್ಯಕ್ತಿಯೊಬ್ಬನ ಕಾಲನ್ನು ಉದ್ದನೆಯ ಕೋಲೊಂದಕ್ಕೆ ಕಟ್ಟಿ ಆತನನ್ನು ಉಲ್ಪಾ ಮಲಗಿಸಿ ಕಾಲಿಗೆ ಲಾಠಿಯಿಂದ ಹೊಡೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು. ಇದು ನಗರದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ವಿಡಿಯೋ ಎನ್ನಲಾಗಿದೆ.

ಟ್ರಾಫಿಕ್ ದಂಡ: ಉದ್ದೇಶ ಒಳ್ಳೆಯದು, ಜಾರಿ ವಿಧಾನ ಮಧ್ಯಮ ವರ್ಗಕ್ಕೆ ಹೊರೆಟ್ರಾಫಿಕ್ ದಂಡ: ಉದ್ದೇಶ ಒಳ್ಳೆಯದು, ಜಾರಿ ವಿಧಾನ ಮಧ್ಯಮ ವರ್ಗಕ್ಕೆ ಹೊರೆ

ಪೊಲೀಸರು ಹೊಡೆಯುತ್ತಿರುವ ಈ ಮಾದರಿಯನ್ನು ಪೊಲೀಸ್ ಭಾಷೆಯಲ್ಲಿ 'ಬಾಂಬೆ ಕಟ್ಟು' ಎನ್ನುತ್ತಾರೆ. ಆರೋಪಿಯ ತಲೆ ನೆಲಕ್ಕೆ ತಾಗಿ ಆತನ ಕಾಲು ಮೇಲ್ಮುಖವಾಗಿರುವಂತೆ ಆತನನ್ನು ಹಿಡಿದು, ಕಾಲಿನ ಪಾದಕ್ಕೆ ಹೊಡೆಯಲಾಗುತ್ತದೆ. ಇದು ಆರೋಪಿಗೆ ಅಪಾರ ನೋವು ಉಂಟುಮಾಡುತ್ತದೆ.

Bengaluru Police Brutally Hitting A Accused Video Viral

ವಿಡಿಯೋದಲ್ಲಿ ಹೊಡೆಸಿಕೊಳ್ಳುತ್ತಿರುವ ವ್ಯಕ್ತಿಯು ನಗರದ ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಟೆಕ್ನೀಶಿನಯನ್ ಆಗಿ ಕೆಲಸ ಮಾಡುತ್ತಿದ್ದ, ಅಲ್ಲಿಯೇ ಕೆಳಹಂತದ ಹುದ್ದೆಯಲ್ಲಿದ್ದ ಯುವತಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ ಹಾಗಾಗಿ ಪೊಲೀಸರ ಆತನಿಗೆ ಬುದ್ಧಿ ಕಲಿಸಲು ಹೀಗೆ ಬಾಂಬೆ ಕಟ್ಟು ಹಾಕಿ ಸರಿಯಾಗಿ ಥಳಿಸಿದ್ದಾರೆ.

'ವಿಕ್ರಂ'ಗಾಗಿ ಪದ್ಯ ಬರೆದ ಬೆಂಗಳೂರು ಪೊಲೀಸರು!'ವಿಕ್ರಂ'ಗಾಗಿ ಪದ್ಯ ಬರೆದ ಬೆಂಗಳೂರು ಪೊಲೀಸರು!

ಆದರೆ ಈ ವಿಡಿಯೋ ವೈರಲ್ ಆಗಲು ಠಾಣೆಯ ಸಿಬ್ಬಂದಿಯೇ ಕಾರಣವಾಗಿದ್ದು, ಎಸ್‌ಐ ಜೊತೆ ದ್ವೇಷ ಇಟ್ಟುಕೊಂಡಿದ್ದ ಸಿಬ್ಬಂದಿಯೇ ವಿಡಿಯೋವನ್ನು ಹೊರಗೆ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ. ಕಾನೂನು ಪ್ರಕಾರ ಪೊಲೀಸರು ಹೀಗೆ ಹಿಂಸೆ ಮಾಡುವಂತಿಲ್ಲವಾದ್ದರಿಂದ ಎಸ್‌ಐ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ.

English summary
Bengaluru police brutally hitting a accused in station video viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X