• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್‌ಬಿಐ ಆದೇಶವನ್ನೇ ವಂಚನೆಗೆ ಬಳಸಿಕೊಂಡವರು ಅರೆಸ್ಟ್

By Kiran B Hegde
|

ಬೆಂಗಳೂರು, ಡಿ. 27: ವಂಚಕರು ಜನರನ್ನು ಮೋಸಗೊಳಿಸಲು ಹಲವು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಸರ್ಕಾರ ಭದ್ರತೆಯ ಉದ್ದೇಶದಿಂದ ಕೈಗೊಳ್ಳುವ ಕ್ರಮಗಳನ್ನೂ ಈ ಚಾಲಾಕಿ ಕಳ್ಳರು ವಂಚನೆಗೋಸ್ಕರ ಉಪಯೋಗಿಸಿಕೊಳ್ಳಬಲ್ಲರು. ಇಂತಹ ಐವರನ್ನು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಸೆರೆಹಿಡಿದ್ದಾರೆ.

ಕಳ್ಳನೋಟುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 2005ನೇ ಇಸ್ವಿಗಿಂತ ಮೊದಲು ಮುದ್ರಣಗೊಂಡಿರುವ ನೋಟುಗಳನ್ನು ವಾಪಸ್ ಪಡೆಯಲು ಆರ್‌ಬಿಐ ಕ್ರಮ ಕೈಗೊಂಡಿದೆ. ಆದರೆ, ಈ ಆದೇಶವನ್ನೇ ಆರೋಪಿಗಳು ಜನರನ್ನು ಮೋಸಗೊಳಿಸಲು ಉಪಯೋಗಿಸಿಕೊಂಡಿದ್ದರು.

ರವೀಂದ್ರರೆಡ್ಡಿ, ಶ್ರೀನಾಥ್, ಚಂದ್ರಶೇಖರ್, ಬೈರಪ್ಪ ಹಾಗೂ ಪ್ರವೀಣ್‍ಕುಮಾರ್ ಬಂಧಿತ ಆರೋಪಿಗಳು. ಅವರಿಂದ 49,500 ರೂ. ನಗದು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರ್‌ಬಿಐ ಆದೇಶವನ್ನು ಜನರೆದುರು ಹಿಡಿದ ಈ ಆರೋಪಿಗಳು 2005ನೇ ಇಸವಿಗಿಂತ ಮೊದಲಿನ ನೋಟುಗಳನ್ನು ಪಡೆದು ಹೊಸ ನೋಟು ನೀಡುವ ಆಮಿಷ ಒಡ್ಡುತ್ತಿದ್ದರು. ಜನರಿಂದ ಹೆಚ್ಚಿನ ಮೊತ್ತ ಪಡೆದು, ಕಡಿಮೆ ಮೊತ್ತದ ಹಣ ನೀಡುತ್ತಿದ್ದರು. ನಂತರ ಹಣ ವಾಪಸ್ ನೀಡದೆ ತಲೆಮರೆಸಿಕೊಳ್ಳುತ್ತಿದ್ದರು.

ಜನರು ಇಂತಹ ಮೋಸಗಳಿಗೆ ಬಲಿಯಾಗಬಾರದು. ತಮ್ಮಲ್ಲಿರುವ 2005ಕ್ಕಿಂತ ಹಳೆಯ ನೋಟುಗಳನ್ನು ಬ್ಯಾಂಕ್‌ಗೆ ನೀಡಿ ಹೊಸ ನೋಟು ಪಡೆಯಬೇಕೆಂದು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Central police have arrested five accused for cheating people. They were collecting notes which were printed before 2005 and paying less sum of money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more