ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದ ಯುವತಿ ಬಂಧನ

|
Google Oneindia Kannada News

ಬೆಂಗಳೂರು, ಜನವರಿ 23; ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಯುವತಿಯನ್ನು ಬಂಧಿಸಲಾಗಿದೆ. ಆಕೆ ಅಕ್ರಮವಾಗಿ ನೆಲೆಸಲು ನೆರವಾಗಿದ್ದ ಆಕೆಯ ಪತಿ ಮುಲಾಯಂ ಸಿಂಗ್ ಸಹ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಬೆಳ್ಳಂದೂರು ಠಾಣೆ ಪೊಲೀಸರು 19 ವರ್ಷದ ಇಕ್ರಾ ಜೀವನಿ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಭಾರತದಲ್ಲಿ ಅಕ್ರಮವಾಗಿ ನೆಲೆಸಲು ತನ್ನ ಗುರುತು ನಕಲು ಮಾಡಿದ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ.

ಪಾಕಿಸ್ತಾನ ಪರ ಘೋಷಣೆ: ಬಿಹಾರದಲ್ಲಿ ಐವರ ಬಂಧನ ಪಾಕಿಸ್ತಾನ ಪರ ಘೋಷಣೆ: ಬಿಹಾರದಲ್ಲಿ ಐವರ ಬಂಧನ

Bengaluru Police Arrested UP Man For Illegally Bringing His Pakistani Girlfriend To India Via Nepal

ಪೊಲೀಸರು ಇಕ್ರಾ ಜೀವನಿ ಮತ್ತು ಆಕೆಯ ಪತಿ ಮುಲಾಯಂ ಸಿಂಗ್ ಬಂಧಿಸಿದ್ದಾರೆ. 25 ವರ್ಷದ ಈತ ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಇಕ್ರಾ ಜೀವನಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿದೆ. ವಿದೇಶಿಗರ ನೋಂದಣಿ ಕಚೇರಿ ಅಧಿಕಾರಿಗಳು ವಿಳಾಸ ನಕಲು ಬಗ್ಗೆ ತನಿಖೆ ನಡೆಸಲಿದ್ದಾರೆ.

ಭಾರತದ ಯುವಕನಿಗೆ ಹಜ್‌ ವಿಸಾ ನಿರಾಕರಿಸಿದ ಪಾಕಿಸ್ತಾನ ಭಾರತದ ಯುವಕನಿಗೆ ಹಜ್‌ ವಿಸಾ ನಿರಾಕರಿಸಿದ ಪಾಕಿಸ್ತಾನ

ಡೇಟಿಂಗ್ ಅಪ್ಲಿಕೇಶನ್ ಮೂಲಕ ಪ್ರೀತಿ; ಇಕ್ರಾ ಜೀವನಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಉತ್ತರ ಪ್ರದೇಶದ ನಿವಾಸಿಯಾದ ಮುಲಾಯಂ ಸಿಂಗ್ ಪರಿಚಯ ಮಾಡಿಕೊಂಡಿದ್ದಳು. ಇಬ್ಬರು ಪ್ರೀತಿಸಲು ಆರಂಭಿಸಿದರು. 2022ರಲ್ಲಿ ನೇಪಾಳ ಗಡಿ ಮೂಲಕ ಭಾರತಕ್ಕೆ ಇಕ್ರಾ ಆಗಮಿಸಿದ್ದು ಬಳಿಕ ಇಬ್ಬರು ವಿವಾಹವಾಗಿದ್ದರು.

ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ 2,942 ವೀಸಾ ನೀಡಿದ ಪಾಕಿಸ್ತಾನಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ 2,942 ವೀಸಾ ನೀಡಿದ ಪಾಕಿಸ್ತಾನ

ನೇಪಾಳದಲ್ಲಿ ವಿವಾಹವಾದ ಬಳಿಕ ಇಬ್ಬರು ಬಿಹಾರದ ಬಿರಗುಂಜ್ ತಲುಪಿದ್ದರು. ಅಲ್ಲಿಂದ ಪಾಟ್ನಾಕ್ಕೆ ಹೋಗಿದ್ದರು. ಮುಲಾಯಂ ಸಿಂಗ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಸುಳ್ಳು ವಿಳಾಸ ಪತ್ರ ಮಾಡಿಕೊಂಡು ಇಕ್ರಾ ಜೀವನಿಯನ್ನು ಕರೆದುಕೊಂಡು ಬಂದಿದ್ದ.

2022ರ ಸೆಪ್ಟೆಂಬರ್‌ನಿಂದ ಮುಲಾಯಂ ಸಿಂಗ್ ಬೆಂಗಳೂರು ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ. ಇಕ್ರಾ ಹೆಸರನ್ನು ರಾವ್ ಯಾದವ್ ಎಂದು ಬದಲಿಸಿ, ಆಧಾರ್ ಕಾರ್ಡ್‌ ಪಡೆದಿದ್ದು, ನಂತರ ಭಾರತದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದರು.

ಪೋಷಕರ ಸಂಪರ್ಕಕ್ಕೆ ಯತ್ನ; ಮುಲಾಯಂ ಸಿಂಗ್ ಜೊತೆ ಇಕ್ರಾ ಜೀವನಿ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿರುವ ಪೋಷಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದಳು. ಇದನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿತ್ತು.

ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಖಚಿತವಾದ ಮಾಹಿತಿ ಅನ್ವಯ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಇಕ್ರಾ ಪಾಕಿಸ್ತಾನಿ ಪ್ರಜೆ ಎಂಬುದು ತಿಳಿದುಬಂದಿದೆ.

English summary
Bengaluru Bellandur police arrested Uttar Pradesh based man and his girl friend Pakistan based Ikra Jeevani for illegally bringing her to India via Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X