• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮುನ್ನಾ ಎಚ್ಚರ: ಹೀಗೂ ವಂಚಿಸುತ್ತಾರೆ

|

ಬೆಂಗಳೂರು, ಫೆಬ್ರವರಿ 14: ಹಣ ಕಳುಹಿಸಲು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಹೀಗೆ ಸ್ಕ್ಯಾನ್ ಮಾಡುವ ಮುನ್ನಾ ಎಚ್ಚರವಾಗಿದ್ದರೆ ಒಳಿತು. ಬೆಂಗಳೂರು ಪೊಲೀಸರು ಭೇದಿಸಿರುವ ಈ ಪ್ರಕರಣ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮುನ್ನಾ ಎಚ್ಚರವಹಿಸುವ ಸೂಚನೆ ನೀಡುತ್ತಿದೆ.

ನಗರ ಸಿಸಿಬಿ ಪೊಲೀಸರು ರಾಜಸ್ಥಾನದಲ್ಲಿ ಕೂತು ವಂಚನೆ ಮಾಡುತ್ತಿದ್ದ ಐವರು ವಂಚಕರನ್ನು ಬಂಧಿಸಿದ್ದಾರೆ. ಈ ವಂಚಕರು ಕ್ಯುಆರ್ ಕೋಡ್ ಮೂಲಕವೇ ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದೆ.

ಜೊಮ್ಯಾಟೊ, ಸ್ವಿಗ್ಗಿಗೆ ಬೆಂಗಳೂರು ಪೊಲೀಸ್ ಖಡಕ್ ಎಚ್ಚರಿಕೆ

ರಾಜಸ್ಥಾನದ ಬರಕ್‌ಪುರನ ವಾಸಿಗಳಾಗಿದ್ದ ಐವರು ಆರೋಪಿಗಳು ಅಲ್ಲಿಂದಲೇ ವ್ಯವಸ್ಥಿತವಾಗಿ ಆನ್‌ಲೈನ್‌ನಲ್ಲಿ ಲಕ್ಷಾಂತರ ಹಣ ಲಪಟಾಯಿಸುತ್ತಿದ್ದರು. ಬೆಂಗಳೂರು ಸಿಸಿಬಿ ಪೊಲೀಸರು ರಾಜಸ್ಥಾನಕ್ಕೆ ತೆರಳಿ ಐವರು ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.

ಕ್ಯುಆರ್ ಕೋಡ್ ಕಳಿಸಿ ವಂಚಿಸುತ್ತಿದ್ದರು

ಕ್ಯುಆರ್ ಕೋಡ್ ಕಳಿಸಿ ವಂಚಿಸುತ್ತಿದ್ದರು

ಓಎಲ್‌ಎಕ್ಸ್‌ನಲ್ಲಿ ಹಾಕಲಾಗುವ ಹೊಸ ವಸ್ತುಗಳ ಜಾಹೀರಾತುಗಳನ್ನೇ ಇವರು ಮೋಸ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಜಾಹಿರಾತು ಹಾಕುವವರನ್ನು ಸಂಪರ್ಕಿಸಿ ವಸ್ತುವನ್ನು ಕೊಳ್ಳುವುದಾಗಿ ಹೇಳಿ, ಅವರ ಸಂಖ್ಯೆಗೆ ಕ್ಯುಆರ್‌ ಕೋಡ್ ಒಂದನ್ನು ಕಳುಹಿಸಿ, ಕ್ಯುಆರ್‌ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ಹೇಳುತ್ತಿದ್ದರು. ಆ ಕಡೆಯವರು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಅವರ ಖಾತೆಯಲ್ಲಿರುವ ಹಣವೆಲ್ಲಾ ಇವರ ಖಾತೆಗೆ ವರ್ಗವಾಗಿಬಿಡುತ್ತಿತ್ತು.

ನಲಪಾಡ್ ಕಾರು ಅಪಘಾತ ಪ್ರಕರಣ: ಈವರೆಗೆ ನಡೆದಿದ್ದೇನು?

ಗ್ರಾಮಸ್ಥರಿಂದ ಹಣ ಕೊಟ್ಟು ಬ್ಯಾಂಕ್ ಖಾತೆ ತೆರೆಸಿದ್ದರು

ಗ್ರಾಮಸ್ಥರಿಂದ ಹಣ ಕೊಟ್ಟು ಬ್ಯಾಂಕ್ ಖಾತೆ ತೆರೆಸಿದ್ದರು

ವ್ಯವಸ್ಥಿತಿವಾಗಿ ಸಂಚು ರೂಪಿಸಿದ್ದ ಇವರು ತಮ್ಮ ಗ್ರಾಮದಲ್ಲಿದ್ದವರಿಂದ ಬ್ಯಾಂಕ್ ಖಾತೆಗಳನ್ನು ತೆರೆಸುತ್ತಿದ್ದರು. ವಂಚನೆ ಮಾಡಿ ಖಾತೆಗೆ ಹಣ ಬರುತ್ತಿದ್ದಂತೆ ಖಾತೆಯನ್ನು ಬಂದ್ ಮಾಡಿಸುತ್ತಿದ್ದರು. ಖಾತೆ ತೆರೆದವನಿಗೆ ಇಂತಿಷ್ಟು ಹಣ ನೀಡುತ್ತಿದ್ದರಿಂದ, ಗ್ರಾಮಸ್ಥರು ನಾ-ಮುಂದು ತಾ-ಮುಂದು ಎಂದು ಖಾತೆ ತೆರದು ಮಾಹಿತಿಯನ್ನು ಇವರಿಗೆ ಕೊಡುತ್ತಿದ್ದರು.

ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಲ್ಲಿ ಮೋಸ

ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಲ್ಲಿ ಮೋಸ

ಬೆಂಗಳೂರು ಪೊಲೀಸರ ಮೇಲೆ ವಿನಾಕಾರಣ ಆಕ್ರೋಶ ಹೊಂದಿದ್ದ ಇವರು, ಉದ್ದೇಶಪೂರ್ವಕವಾಗಿ ಬೆಂಗಳೂರಿಗರನ್ನೇ ಮೋಸ ಮಾಡಲು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಂಡಿದ್ದರು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಿನ್ನೂ ಬಳಸಿ ಇವರು ಮೋಸ ಮಾಡಿದ್ದಾರೆ. ಭಾರತೀಯ ಸೇನೆಯ ಹೆಸರು ಹೇಳಿಕೊಂಡು ಸಹ ಲಕ್ಷಾಂತರ ಹಣ ಲಪಟಾಯಿಸಿದ್ದರು.

316 ವಂಚನೆ ಪ್ರಕರಣದಲ್ಲಿ 200 ವಂಚನೆ ಪ್ರಕರಣ ಇವರದ್ದೇ

316 ವಂಚನೆ ಪ್ರಕರಣದಲ್ಲಿ 200 ವಂಚನೆ ಪ್ರಕರಣ ಇವರದ್ದೇ

ಕಳೆದ ವರ್ಷ ದೇಶದಲ್ಲಿ ನಡೆದ 316 ಓಎಲ್‌ಎಕ್ಸ್ ಸಂಬಂಧಿ ವಂಚನೆಯಲ್ಲಿ 200 ಪ್ರಕರಣಗಳನ್ನು ಈ ಆರೋಪಿಗಳೇ ಮಾಡಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಹುಳಿಮಾವು ನಿವಾಸಿ ಒಬ್ಬರಿಂದ ಟ್ರೇಡ್‌ ಮಿಲ್ ಕೊಳ್ಳುವುದಾಗಿ ಭಾಸ್ಕರ್ ರಾವ್ ಅವರ ಹೆಸರಿನಲ್ಲಿ ಈ ಗ್ಯಾಂಗ್ ಮೋಸ ಮಾಡಿದೆ.

ಬೆಂಗಳೂರು: ಕಿಡ್ನಿ ಮಾರಾಟ ಹೈಟೆಕ್ ಜಾಲ ಭೇದಿಸಿದ ಪೊಲೀಸರು

ಕ್ಯುಆರ್ ಕೋಡ್ ಪೋರ್ಜರಿಯಲ್ಲಿ ಪಳಗಿದ್ದ ಆರೋಪಿ

ಕ್ಯುಆರ್ ಕೋಡ್ ಪೋರ್ಜರಿಯಲ್ಲಿ ಪಳಗಿದ್ದ ಆರೋಪಿ

ರಾಜಸ್ಥಾನ ಮೂಲದ ಕರಣ್ ಸಿಂಗ್(35), ಅಕ್ರಮ್ ಖಾನ್(18), ಹ್ಯಾರೀಸ್(21), ಜಮೀಲ್(42)ಮತ್ತು ಮಹೆಜರ್(20) ಬಂಧಿತ ವಂಚಕರಾಗಿದ್ದು, ಆರೋಪಿ ಜಮೀಲ್ ಮೋಟಾರು ಕಳವು ಪ್ರಕರಣದ ಹಳೆ ಆರೋಪಿಯಾಗಿದ್ದು, ಎಂಟು ಕಳವು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದಾನೆ. ಮತ್ತೊಬ್ಬ ಆರೋಪಿ ಕರಣ್ ಸಿಂಗ್ ಬ್ಯಾಂಕ್ ಅಕೌಂಟ್ ಹೋಲ್ಡರ್ ಆಗಿದ್ದು, ಹ್ಯಾರೀಸ್ ಖಾನ್ ಎಚ್‌ಡಿಎಫ್‌ಸಿ ಮತ್ತು ಗೂಗಲ್ ಪೇಟಿಯಂ ಸಂಸ್ಥೆಗಳ ಮಾಜಿ ನೌಕರನಾಗಿದ್ದು, ಕ್ಯೂಆರ್ ಕೋಡ್ ಪೋರ್ಜರಿ ಮಾಡುವುದರಲ್ಲಿ ಪಳಗಿದ್ದಾನೆ. ಆರೋಪಿಗಳಾದ ಮೆಹಜರ್ ಮತ್ತು ಅಕ್ರಮ್ ಖಾನ್ ಇವರಿಬ್ಬರು ಗ್ರಾಹಕರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ತಮ್ಮ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದರು. ಇವರಲ್ಲಿ ಒಬ್ಬ ಆಸ್ಪತ್ರೆಯ ಕಾಂಪೌಂಡರ್ ಆಗಿದ್ದಾನೆ.

English summary
Bengaluru CCB police arrested a Rajastan gang which were used to fraud online by using Bengaluru police commissioner Bhaskar Rao's name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X