• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಟಿಎಂ ಕಳ್ಳರ ಬಂಧನಕ್ಕೆ ನೆರವಾದ ಬ್ಯಾಂಕಿನ ಕಂಟ್ರೋಲ್ ರೂಮ್

|

ಬೆಂಗಳೂರು, ಜನವರಿ 28: ಎಟಿಎಂ ದೋಚಲು ಯತ್ನಿಸಿದ್ದ ಆ ಕಳ್ಳರಿಬ್ಬರು ಸಿಸಿಟಿವಿಗೆ ಚ್ಯೂಯಿಂಗ್ ಗಮ್ ಅಂಟಿಸಿದ್ದರು, ತಲೆಗೆ ಹೆಲ್ಮೆಟ್ ಧರಿಸಿದ್ದರು ಆದರೆ, ಬ್ಯಾಂಕಿನ ಕಂಟ್ರೋಲ್ ಸಿಬ್ಬಂದಿ ಸಮಯೋಚಿತ ನಡೆಯಿಂದ ಕಳ್ಳರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ರಸ್ತೆಯ ಎಟಿಎಂ ಕಿಯೋಸ್ಕ್ ನಲ್ಲಿರುವ ಸಿಸಿಟಿವಿ ಮಸುಕಾಗಿದ್ದು, ಮುಂಬೈನಲ್ಲಿರುವ ಎಸ್ಬಿಎಂ ಕಂಟ್ರೋಲ್ ರೂಮ್ ಗೆ ಗೊತ್ತಾಗಿದೆ. ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಅಲರ್ಟ್ ಮಾಡಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಬಾರದು ಎಂದು ಚ್ಯೂಯಿಂಗ್ ಗಮ್ ಅಂಟಿಸಿದ್ದರು, ಮತ್ತೊಂದೆಡೆ ಮಸಿ ಬಳಿದಿದ್ದರು.

ಜಾಲಹಳ್ಳಿ ಬಳಿಯ ಎಟಿಎಂ ಯಂತ್ರದಲ್ಲಿತ್ತು ಸ್ಕಿಮ್ಮರ್

ಸುಮಾರು 13 ಲಕ್ಷ ರು ಕದಿಯುವ ಇರಾದೆಯಿಂದ ಎಟಿಎಂನೊಳಗೆ ನುಗ್ಗಿದ್ದವರ ಪೈಕಿ ಒಬ್ಬ ಕುಸ್ತಿಪಟು ಹರ್ಷ್ ಅರೊರ್ ಮತ್ತೊಬ್ಬ ಸಮರ್ ಜೋತ್ ಸಿಂಗ್ ಇಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

"ಮೈಸೂರು ರಸ್ತೆ ಬಿಎಚ್ ಇಎಲ್ ಬಳಿ ಇರುವ ಎಸ್ಬಿಎಂ ಎಟಿಎಂ ಕಿಯೋಸ್ಕ್ ನಲ್ಲಿ ಏನೋ ಅಚಾತುರ್ಯ ನಡೆಯುತ್ತಿರುವ ಬಗ್ಗೆ ಭಾನುವಾರ ಮುಂಜಾನೆ 1:20ಕ್ಕೆ ನಮಗೆ ಮುಂಬೈ ಕಂಟ್ರೋಲ್ ರೂಮ್ ನಿಂದ ಅಲರ್ಟ್ ಬಂದಿತ್ತು. ಈ ಇಬ್ಬರು 1.20 ರಿಂದ 1.50 ರ ಅವಧಿಯಲ್ಲಿ ಕಳ್ಳತನದ ಯತ್ನ ನಡೆಸಿದ್ದರು. ಹೆಲ್ಮೆಟ್ ಧರಿಸಿ, ಕೆಮರಾಗಳಿಗೆ ಮಸಿ ಬಳಿದಿದ್ದರು. ಜೆಜೆ ನಗರ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಹೊಯ್ಸಳ ವಾಹನಗಳು ತಕ್ಷಣವೇ ಕಾರ್ಯತತ್ಪರರಾಗಿ ಸ್ಥಳಕ್ಕೆ ತೆರಳಿದರೂ ಎಟಿಎಂ ಪತ್ತೆಯಾಗಿರಲಿಲ್ಲ.

ಎಟಿಎಂನಲ್ಲಿ ಹಣ ಲಪಟಾಯಿಸಲು ಯತ್ನಿಸಿದವ 15 ದಿನಗಳ ನಂತರ ಸಿಕ್ಕಿಬಿದ್ದ

ಚಂದ್ರಾಲೇಔಟ್ ಇನ್ಸ್ ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ಅವರು ರಾತ್ರಿವೇಳೆ ಗಸ್ತು ತಿರುಗುವಾಗ ಬಿಎಚ್ ಇಎಲ್ ಬಳಿಯ ಎಟಿಎಂನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಸಿಬ್ಬಂದಿಗಳನ್ನು ಕರೆದುಕೊಂಡು ಎಟಿಎಂ ಬಳಿ ತೆರಳಿ ದಾಳಿ ನಡೆಸಿದಾಗ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸಿಬ್ಬಂದಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಯತ್ನಿಸಿದ್ದರಿಂದ ಕಾನ್ಸ್ ಟೇಬಲ್ಸ್ ಗೆ ಗಾಯವಾಗಿವೆ ಎಂದು ಪಶ್ಚಿಮ ವಲಯ ಡಿಸಿಪಿ ರಮೇಶ್ ಬನೋಥ್ ಹೇಳಿದರು.

ಇತ್ತೀಚೆಗೆ ಪರಪ್ಪನ ಅಗ್ರಹಾರದಲ್ಲಿ ಎಟಿಎಂ ದೋಚಿದ್ದ ಈ ಜೋಡಿ, ಇನ್ನೆರಡು ಕಡೆಗಳಲ್ಲಿ ನಡೆಸಿದ ಯತ್ನ ವಿಫಲವಾಗಿತ್ತು. ಯೂಟ್ಯೂಬ್ ವಿಡಿಯೋ ನೋಡಿಕೊಂಡು ಎಟಿಎಂ ದೋಚುವ ಯೋಜನೆ ಹಾಕಿಕೊಂಡಿದ್ದರು ಎಂದು ಡಿಸಿಪಿ ರಮೇಶ್ ತಿಳಿಸಿದರು.

English summary
Quick action by the Mumbai control room of the State Bank of India in alerting Bengaluru police prevented yet another ATM robbery and made way for the arrest of the two culprits, a wrestler and his associate from Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more