ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ವೈದ್ಯರ ಹನಿಟ್ರ್ಯಾಪ್, 10 ಲಕ್ಷ ಕೇಳಿದವರು ಕಂಬಿ ಹಿಂದೆ!

|
Google Oneindia Kannada News

ಬೆಂಗಳೂರು, ಜೂನ್ 19 : ಹನಿಟ್ರ್ಯಾಪ್ ವಿಡಿಯೋ ಇಟ್ಟುಕೊಂಡು ಬೆಂಗಳೂರು ನಗರದ ವೈದ್ಯರೊಬ್ಬರಿಗೆ ಹಣದ ಬೇಡಿಕೆ ಇಟ್ಟಿದ್ದ ಗ್ಯಾಂಗ್‌ ಕಂಬಿ ಹಿಂದೆ ಹೋಗಿದೆ. 10 ಲಕ್ಷ ಹಣ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.

Recommended Video

ದಾಖಲೆ ಪ್ರಮಾಣದಲ್ಲಿ ಏರಿಕೆ ಆಯಿತು ಪೆಟ್ರೋಲ್, ಡೀಸೆಲ್ ಬೆಲೆ | Oneindia Kannada

ಹಣಕ್ಕಾಗಿ ವೈದ್ಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರ ತಂಡವನ್ನು ನಗರದ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮೈಕೋಲೇಔಟ್‌ನ 9ನೇ ರಸ್ತೆಯ ಚಾಂದಿನಿ (22) ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾಳೆ.

ಹನಿಟ್ರ್ಯಾಪ್ ಗಾಳಕ್ಕೆ ಧಾರವಾಹಿ ನಟಿಯರೇ ಹುಳುಹನಿಟ್ರ್ಯಾಪ್ ಗಾಳಕ್ಕೆ ಧಾರವಾಹಿ ನಟಿಯರೇ ಹುಳು

ಕೋಣನಕುಂಟೆಯ ನಿವಾಸಿ ಪ್ರಜ್ವಲ್ (26), ಸಿಂಗಸಂದ್ರದ ಜಿ. ಕೆ. ಲೇಔಟ್ ನಿವಾಸಿ ಅನಿರುದ್ಧ (23) ಬಂಧಿತ ಆರೋಪಿಗಳು. ಚಾಂದಿನಿ ಮತ್ತು ವೈದ್ಯರು ಜೂನ್ 13ರಂದು ಒಟ್ಟಿಗೆ ಇದ್ದ ವಿಡಿಯೋವನ್ನು ಇಟ್ಟುಕೊಂಡು ಆರೋಪಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದರು.

ಹನಿಟ್ರ್ಯಾಪ್ ಬಲೆಯಲ್ಲಿ ರಾಜ್ಯದ 12 ಮಾಜಿ, ಹಾಲಿ ಶಾಸಕರುಹನಿಟ್ರ್ಯಾಪ್ ಬಲೆಯಲ್ಲಿ ರಾಜ್ಯದ 12 ಮಾಜಿ, ಹಾಲಿ ಶಾಸಕರು

Bengaluru Police Arrested 3 Members Gang For Honey Trapping

ಘಟನೆ ವಿವರಗಳು : ವೈದ್ಯರೊಬ್ಬರಿಗೆ ಆನ್‌ಲೈನ್ ಮೂಲಕ ಚಾಂದಿನಿ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು. ಜೂನ್ 13ರಂದು ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದು, ಊಟ ಮಾಡಿದ್ದಾರೆ.

ಸಿಸಿಬಿ ತನಿಖೆಯಲ್ಲಿ ಹೊರಬಿದ್ದ ಬಿಜೆಪಿ ನಾಯಕನ ಹನಿಟ್ರ್ಯಾಪ್ ಕಥೆ!ಸಿಸಿಬಿ ತನಿಖೆಯಲ್ಲಿ ಹೊರಬಿದ್ದ ಬಿಜೆಪಿ ನಾಯಕನ ಹನಿಟ್ರ್ಯಾಪ್ ಕಥೆ!

ಬಳಿಕ ಯಲಹಂಕದ ಪ್ರಕೃತಿ ನಗರದಲ್ಲಿರುವ ಚಾಂದಿನಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಇಬ್ಬರೇ ಇದ್ದಾಗ ಆಗಮಿಸಿದ ಪ್ರಜ್ವಲ್ ಮತ್ತು ಅನಿರುದ್ಧ ನೀವಿಬ್ಬರು ಒಟ್ಟಿಗೆ ಇರುವ ದೃಶ್ಯಗಳು ನಮ್ಮ ಬಳಿ ಇದೆ. 10 ಲಕ್ಷ ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ವೈದ್ಯರು ಈ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

English summary
Bengaluru police arrested 3 members gang for honey trapping doctor and demand for 10 lakh Rs. Gang recorded doctor video in Yelahanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X