ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್: ಹೊಸ ಯೋಜನೆಗೆ ಒತ್ತಾಯ

|
Google Oneindia Kannada News

ಬೆಂಗಳೂರು, ಆಗಸ್ಟ್ 13: ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಕುರಿತು ದಿ ಸಿಟಿಜನ್ಸ್ ಫಾರ್ ಬೆಂಗಳೂರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ.

ಈ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ತಿಳಿಸಿವೆ. ಕೆಎಸ್‌ಪಿಸಿಬಿ ಆಗಸ್ಟ್ 18 ರಂದು ಸಭೆಯನ್ನು ಕರೆದಿದೆ. ಈ ಯೋಜನೆಯು ಎಂಟು ಪಥದ ರಸ್ತೆಯಾಗಿದ್ದು, ತುಮಕೂರು ಹಾಗೂ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ.

ಇದೇ ಗುಂಪು 2016ರಲ್ಲಿ ಸ್ಟೀಲ್ ಫ್ಲೈಓವರ್ ಬೇಡ ಎಂದು ಪ್ರತಿಭಟನೆ ನಡೆಸಿದ್ದರು.ಪೆರಿಫೆರ್ ರಿಂಗ್ ರಸ್ತೆ ಯೋಜನೆಯಿಂದ 33,738 ಮರಗಳನ್ನು ಕತ್ತರಿಸಬೇಕಾಗುತ್ತದೆ.

Bengaluru Peripheral Ring Road: Citizens For Bengaluru Seeks Fresh Proposal For Project

ಬೆಂಗಳೂರಿನ ಹೊರವಲಯಗಳನ್ನು ಸಂಪರ್ಕಿಸುವ ಪೆರಿಫೆರಲ್ ವರ್ತುಲ ರಸ್ತೆಗೆ ಅಂದಾಜು 17,061 ಕೋಟಿ ರೂ. ವೆಚ್ಚವಾಗಲಿದೆ. ಇದಕ್ಕಾಗಿ 1,810 ಎಕರೆ ಭೂಮಿ ಅವಶ್ಯಕವಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ, ವೈಟ್‌ಫೀಲ್ಡ್, ಹೊಸಕೋಟೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತುಮಕೂರು ರಸ್ತೆ ಇನ್ನಿತರೆ ರಸ್ತೆಗಳಿಗೆ ವರ್ತುಲ ರಸ್ತೆ ಸಂಪರ್ಕ ಕಲ್ಪಿಸಲಿದೆ. ತುಮಕೂರು ಹಾಗೂ ಹೊಸೂರು ರಸ್ತೆ ಬಳಿ ಅಂದಾಜು 90 ಎಕರೆ ಭೂಮಿ ಬೇಕಾಗಿದೆ.

ಕಾಮಗಾರಿಗೆ ಸಾವಿರ ಕೋಟಿ ರೂ. ಮೀಸಲಿಡುತ್ತಿದ್ದಂತೆ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ. ಯಲಹಂಕದ ವೆಂಕಟಾಲ, ಸೀಗೆಹಳ್ಳಿ ಮುಂತಾದೆಡೆ 2010ರಲ್ಲಿ ತಯಾರಿಸಿದ ಮಾರ್ಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಮಸ್ಯೆ ಎದುರಾದ ಹಿನ್ನೆಲೆ 2017ರಲ್ಲಿ ತಯಾರಿಸಿದ ಮಾರ್ಗದಲ್ಲೇ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ.

English summary
The Citizens for Bengaluru (CfB) has written to the Karnataka State Pollution Control Board (KSPCB) to scrap the Environment Impact Assessment (EIA) report for the Peripheral Ring Road (PRR) project, claiming that it was no longer legally valid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X