ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗೂಢ ಜ್ವರದಿಂದ ಬೆಂಗಳೂರಲ್ಲಿ 3.5 ಲಕ್ಷ ಜನ ಬಳಲುತ್ತಿದ್ದಾರೆ, ಏನದು?

|
Google Oneindia Kannada News

ಬೆಂಗಳೂರು, ಜೂನ್ 19: ಕಳೆದ ಎರಡೂವರೆ ವರ್ಷದಿಂದ 3.5 ಲಕ್ಷ ಮಂದಿ ಹೆಸರೇ ಇಲ್ಲದ ಜ್ವರದಿಂದ ಬಳಲುತ್ತಿದ್ದಾರೆ ಎಂದು ಬಿಬಿಎಂಪಿ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.

101 ಡಿಗ್ರಿಯಷ್ಟು ಜ್ವರ ವಿರುತ್ತದೆ. ಎರಡರಿಂದ ಮೂರು ವಾರ ಜ್ವರ ಕಡಿಮೆಯಾಗುವುದೇ ಇಲ್ಲ. ಈ ಜ್ವರಕ್ಕೆ ಕಾರಣ ಏನೆಂಬುದು ಮಾತ್ರ ನಿಗೂಢವಾಗಿದೆ.

ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಲಿಚಿ ಹಣ್ಣು ಕಾರಣ? ಸಾವಿನ ಸಂಖ್ಯೆ 144 ಕ್ಕೆ ಏರಿಕೆ ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಲಿಚಿ ಹಣ್ಣು ಕಾರಣ? ಸಾವಿನ ಸಂಖ್ಯೆ 144 ಕ್ಕೆ ಏರಿಕೆ

2017ರಲ್ಲಿ 1,57,881 ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತ್ತು. 2018ರಲ್ಲಿ 1,42,890 ಮಂದಿಗೆ, 2019ರಲ್ಲಿ 50,062 ಮಂದಿಯಲ್ಲಿ ಒಟ್ಟು ಮೂರು ವರ್ಷಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತ್ತು.

Bengaluru people suffering from unknown origin fever

ಬಿಬಿಎಂಪಿಯ ಪಿಎಚ್‌ಐಇಸಿ ಯು ಆಸ್ಪತ್ರೆಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿತ್ತು. 450 ಆಸ್ಪತ್ರೆಗಳಿಂದ ಡಾಟಾ ಸಂಗ್ರಹಿಸಲಾಗಿದೆ. 85 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ 30 ಹೆರಿಗೆ ಆಸ್ಪತ್ರೆಯಲ್ಲೂ ಕೂಡ ಸಮೀಕ್ಷೆ ನಡೆಸಲಾಗಿದೆ.

ಟೈಫಾಯಿಡ್, ಕಾಲೆರಾ, ಡೆಂಗ್ಯೂ ಇನ್ನಿತರೆ ಹರಡಬಲ್ಲ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ, ಆದರೆ ಈ ಜ್ವರ ವೈದ್ಯಕೀಯ ಲೋಕಕ್ಕೆ ಇದು ಒಂದು ಸವಾಲಾಗಿದೆ. ಈ ಜ್ವರದಿಂದ ಟಿಬಿಯು ಕೂಡ ಬರಬಹುದು ಎಂದು ತಿಳಿದುಬಂದಿದೆ. ಒಂದು ವಾರಗಳ ಕಾಲ ರೋಗಿಯನ್ನು ಆಸ್ಪತ್ರೆಯಲ್ಲೇ ಇರಿಸಿಕೊಂಡು ನಿಗಾ ವಹಿಸಿದರೆ ಮಾತ್ರ ನಿಜವಾದ ಕಾರಣ ತಿಳಿದುಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

English summary
Bengaluru people suffering from unknown origin fever, nearly 3.5 lakh people are suffering from this fever from 2.5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X