ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಆದಾಯ ತರುವ ಮೂರು ಪಾದಚಾರಿ ಮೇಲ್ಸೇತುವೆ

|
Google Oneindia Kannada News

ಬೆಂಗಳೂರು, ಮಾರ್ಚ್ 14: ನಗರದ ಎಚ್‌ಎಎಲ್ ನಿಲ್ದಾಣ ಬಳಿಯ ಶಾಂತಿಸಾಗರ ಹೋಟೆಲ್, ದೊಮ್ಮಲೂರು ರಸ್ತೆಯ ಎಂಬೆಸ್ಸಿ ಗಾಲ್ಫ್ ಲಿಂಕ್ ಸಮೀಪದ ಡೆಲ್ ಕಂಪನಿ ಸಿಗ್ನಲ್ ಮತ್ತು ಕಸ್ತೂರಬಾ ರಸ್ತೆಯ ಸರ್ ಎಂ. ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಪಾದಚಾರಿ ಮೇಲ್ಸೇತುವೆಯನ್ನು ಕೆ..ಜೆ. ಜಾರ್ಜ್ ಮಂಗಳವಾರ ಉದ್ಘಾಟಿಸಿದರು.

ನಗರದಲ್ಲಿ 153 ಕಡೆ ಖಾಸಗಿ ಸಹಭಾಗಿತ್ವದಲ್ಲಿ ಪಾದಚಾರಿ ಮೇಲ್ಸಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪೈಕಿ 33 ಕಡೆ ಕಾಮಗಾರಿ ಪೂರ್ಣಗೊಂಡಿದ್ದು, ಜನರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ ಎಂದರು.

ದೊಡ್ಡನೆಕ್ಕುಂದಿ ಮೇಲ್ಸೇತುವೆ ಶೀಘ್ರ ವಾಹನ ಸಂಚಾರಕ್ಕೆ ಮುಕ್ತದೊಡ್ಡನೆಕ್ಕುಂದಿ ಮೇಲ್ಸೇತುವೆ ಶೀಘ್ರ ವಾಹನ ಸಂಚಾರಕ್ಕೆ ಮುಕ್ತ

ಎಂಟು ಕಡೆ ಸ್ಕೈವಾಕ್ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನು 49 ಕಡೆ ಪ್ರಾರಂಭಿಕ ಹಂತದಲ್ಲಿದೆ. 36 ಸ್ಕೈವಾಕ್ ನಿರ್ಮಾಣಕ್ಕೆ ಅನುಮೋದನೆ ಪಡೆಯಬೇಕಿದೆ. ಬಾಕಿ 27 ಮೇಲ್ಸೇತುವೆಗಳ ನಿರ್ಮಾಣಕ್ಕೆ ಮರು ಟೆಂಡರ್ ಕರೆಯಲಾಗುವುದು. ಈ ಸ್ಕೈವಾಕ್ ಗಳಿಂದ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ಆದಾಯ ಬರುತ್ತಿದೆ ಎಂದರು.

Bengaluru pedestrian may get 153 skywalks soon

ಎಂಬೆಸ್ಸಿ ಗಾಲ್ಫ್ ಸ್ಕೈವಾಕ್: 27.20ಮೀಟರ್ ಉದ್ದ, 3.50ಮೀಟರ್ ಅಗಲ, 3ಮೀಟರ್ ಎತ್ತರವಿದೆ. ಎಂಟು ಮಂದಿ ತೆರಳುವ ಸಾಮರ್ಥ್ಯವಿದೆ. ವಾರ್ಷಿಕ 10.80 ಲಕ್ಷ ರೂ ವಾರ್ಷಿಕ ಮೆಲ ಬಾಡಿಗೆ, 2.50ಲಕ್ಷ ರೂ ಜಾಹೀರಾತು ಶುಲ್ಕ ದೊರೆಯಲಿದೆ. ಎಚ್‌ಎಎಲ್ ವಿಮಾನ ನಿಲ್ದಾಣ: 26.20 ಮೀಟರ್ ಉದ್ದ, 3.60ಮೀಟರ್ ಅಗಲ, 3ಮೀ. ಎತ್ತರವಿದೆ. ವಾರ್ಷಿಕ 7ಲಕ್ಷ ರೂ, ನೆಲಬಾಡಿಗೆ 3.75 ಲಕ್ಷ ರೂ, ಜಾಹೀರಾತು ಶುಲ್ಕ ದೊರೆಯಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Bengaluru pedestrian may get 153 skywalks soon

ಕಸ್ತೂರ ಬಾ ರಸ್ತೆ ಸ್ಕೈವಾಕ್ : 32 ಮೀ. ಉದ್ದ, 3 ಮೀ, ಅಗಲ, 3 ಮೀ ಎತ್ತರವಿದೆ. ವಾರ್ಷಿಕ 5.10 ಲಕ್ಷ ರೂ. ನೆಲ ಬಾಡಿಗೆ, 4ಲಕ್ಷ ರೂ ಜಾಹೀರಾತು ಶುಲ್ಕ ದೊರೆಯಲಿದೆ.

English summary
Bengaluru Development minister KJ George said that BBMP has planned to construct 153 sky walks in the city and around 35 have been already opened for the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X