ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿನ ಕರೆಯೋಲೆ ನೀಡಲು ಸಿದ್ಧವಾಗಿರುವ ವಿಜಯ ನಗರದ ಪಾರ್ಕ್ ಗಳು!

ಮೃತ್ಯುಕೂಪಗಳಾಲಿರುವ ಬೆಂಗಳೂರು ಪಾರ್ಕ್ ಗಳು. ವಿದ್ಯುತ್ ಸಂಪರ್ಕದ ಕಳಪೆ ನಿರ್ವಹಣೆಯಿಂದ ಆಗಬಹುದಾದ ತೊಂದರೆ ಅಷ್ಟಿಷ್ಟಲ್ಲ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ಪಾರ್ಕ್ ಗಳು ಉದ್ಯಾನ ನಗರಿಯ ಮತ್ತೊಂದು ಹೆಗ್ಗಳಿಕೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಅಚ್ಚುಕಟ್ಟಾದ, ಸುಸಜ್ಜಿತವಾದ, ಆಧುನೀಕರಣಗೊಂಡ ಉದ್ಯಾನವನಗಳನ್ನು ಇಲ್ಲಿನ ನಾಗರಿಕರು ಪ್ರೀತಿಸುತ್ತಾರೆ. ಹಾಗೆಯೇ ವಿಜಯ ನಗರದಲ್ಲಿರುವ ಕೆಲವು ಪಾರ್ಕ್ ಗಳು ತಮ್ಮದೇ ಆದ ಸೌಂದರ್ಯದಿಂದ ಜನಾಕರ್ಷಣೆಯ ಕೇಂದ್ರಗಳಾಗಿವೆ.

ಆದರೆ, ಈ ಪಾರ್ಕ್ ಗಳ ಹಿರಿಮೆಗೆ ಕಪ್ಪುಚುಕ್ಕೆಯೆಂಬಂತೆ, ಕೆಲವಾರು ಪಾರ್ಕ್ ಗಳಲ್ಲಿ ಇರುವ ವಿದ್ಯುತ್ ಕಂಬಗಳು, ವಿದ್ಯುತ್ ಜಂಕ್ಷನ್ ಬಾಕ್ಸ್ ಗಳು ನಿರ್ವಹಣಾ ಲೋಪದಿಂದಾಗಿ ಮಕ್ಕಳನ್ನು, ಹಿರಿಯರನ್ನು ಬಲಿಪಡೆಯಲು ಕಾಯುತ್ತಿವೆ.

Bengaluru parks becoming dangerous with open electric junction box

ಪಾರ್ಕ್ ಗೆ ವಿದ್ಯುತ್ ಸಂಪರ್ಕ್ ನೀಡಿದರಷ್ಟೇ ಸಾಲದು, ಆ ಸಂಪರ್ಕಗಳನ್ನು ಸೂಕ್ತವಾಗಿ ನಿಭಾಯಿಸಬೇಕು. ಆದರೆ, ಹಲವಾರು ಪಾರ್ಕ್ ಗಳಲ್ಲಿ ಅದು ಆಗುತ್ತಿಲ್ಲ. ಹಲವೆಡೆ, ನೆಲಮಟ್ಟದಲ್ಲಿ ನಿಲ್ಲಿಸಲಾಗಿರುವ ಜಂಕ್ಷನ್ ಬಾಕ್ಸ್ ಗಳಿಂದ ಅಥವಾ ಫ್ಯೂಸ್ ಬಾಕ್ಸ್ ಗಳಿಂದ ಅರ್ದ ತುಂಡಾದ ವೈರುಗಳು ಹೊರಬಿದ್ದಿರುವ ದೃಶ್ಯಗಳು ಹಲವಾರು ಪಾರ್ಕ್ ಗಳಲ್ಲಿ ಮಾಮೂಲಿ ಎನಿಸಿದೆ.

ಅಷ್ಟೇ, ಈ ಜಂಕ್ಷನ್ ಬಾಕ್ಸ್ ಗೆ ಸರಿಯಾದ ಬೀಗವೂ ಇಲ್ಲದಿರುವುದರಿಂದ ಈ ಬಾಕ್ಸ್ ಗಳ ಬಾಗಿಲುಗಳು ತೆರೆದಿದ್ದು ಅಲ್ಲಿನ ಫ್ಯೂಸ್ ಸರ್ಕೀಟ್ ಹಾಗೆಯೇ ಕಣ್ಣಿಗೆ ರಾಚುವಂತಿದೆ. ಅಷ್ಟೇ ಅಲ್ಲ, ಮುಗ್ಧ ಮಕ್ಕಳು ಇದರೊಳಗೆ ಕೈ ಹಾಕುವ ಎಲ್ಲಾ ಅಪಾಯಗಳೂ ಇವೆ. ಹಾಗಾಗಿ, ಇಂಥ ಪಾರ್ಕ್ ಗಳಲ್ಲಿನ ವಿದ್ಯುತ್ ಸಂಪರ್ಕಗಳನ್ನು ಖಂಡಿತವಾಗಿಯೂ ಸಂರಕ್ಷಣೆ ಮಾಡಬೇಕಿದೆ.

ಈಗ ಮಳೆಗಾಲ. ಪಾರ್ಕ್ ಗಳಲ್ಲಿ ಹೇರಳವಾಗಿ ಗಿಡ ಮರ ಬೆಳೆದಿರುವುದರಿಂದ, ಪಾರ್ಕ್ ಗಳಲ್ಲಿ ಹೀಗೆ ವಿದ್ಯುತ್ ಜಂಕ್ಷನ್ ಬಾಕ್ಸ್ ಗಳು, ಮೀಟರ್ ಬಾಕ್ಸ್ ಗಳು ಅಥವಾ ಫ್ಯೂಸ್ ಬಾಕ್ಸ್ ಗಳು ಬಾಯಿ ತೆರೆದುಕೊಂಡು ಮಳೆ ನೀರು ಹಾದುಹೋಗಲು ಅವಕಾಶ ಮಾಡಿಕೊಟ್ಟರೆ, ವಿದ್ಯುತ್ ಗ್ರೌಂಡಿಂಗ್ ಆಗಿ ಅದು ಪಾರ್ಕ್ ಗೆ ಭೇಟಿ ಕೊಡುವ ನಾಗರಿಕರಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗದು. ಹಾಗಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಗ್ಗೆ ಗಮನ ಹರಿಸುವುದೊಳಿತು.

English summary
There is no doubt about that, parks are the one of the icons of the Bengaluru city. But, these parks, apart from giving the joy and pleasure, they have become the place of altars as they have lose live electric wires, overlooked electric junction box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X