ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಟಿಟಿ ಬಳಿಕ ಎಲ್ಲಾ ಕಲೆಗಳು ನಶಿಸುತ್ತಿವೆ : ಅಲೋಕ್ ಕುಮಾರ್

|
Google Oneindia Kannada News

ಬೆಂಗಳೂರು, ಫೆ. 21 : ಸರ್ಕಾರವೇ ಎಲ್ಲವನ್ನೂ ಮಾಡುತ್ತೆ ಅಂತ ಕಾಯಬೇಡಿ. ನಿಮ್ಮ ಪ್ರಯತ್ನ ನೀವು ಮಾಡಬೇಕು. ಫಿಡಿಲಿಟಸ್ ಗ್ಯಾಲರಿನಂತಹ ಸರ್ಕಾರೇತರ ಸಂಸ್ಥೆಗಳೂ ಕಲಾವಿದರನ್ನು ಪ್ರೋತ್ಸಾಹ ಮಾಡ್ತಿರೋದು ಶ್ಲಾಘನೀಯ. ಇತ್ತೀಚೆಗೆ ಒಟಿಟಿ ಪ್ಲಾಟ್ ಫಾರಂ ನಿಂದ ಎಲ್ಲ ಕಲೆಗಳೂ ನಶಿಸ್ತಾ ಇದೆ. ಇಂತಹ ಸಮಯದಲ್ಲಿ ಇಂತಹ ಕಲಾ ಪ್ರದರ್ಶನಗಳು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಬನಶಂಕರಿಯಲ್ಲಿರುವ ಫಿಡಿಲಿಟಸ್ ಗ್ಯಾಲರಿಯಲ್ಲಿ ಜರುಗಿದ "CONSORTIUM-Art Preceptors of Bengaluru Art Institutions" ವಿಶೇಷ ಕಲಾ ಪ್ರದರ್ಶನ ಕಾರ್ಯಕ್ರಮ ಹಾಗೂ ವರ್ಚುಯಲ್ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಹರಿ ಸಂಸ್ಥೆಯ ಎಂಡಿ ಲಹರಿ ವೇಲು, ಖ್ಯಾತ ಕಲಾ ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಹಾಗೂ ಫಿಡಿಲಿಟಸ್ ಕಾರ್ಪ್ ಎಂಡಿ ಅಚ್ಯುತ್ ಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಲಹರಿ ವೇಲು ಮಾತನಾಡಿ, 'ಬ್ಯುಸಿನೆಸ್ ಜೊತೆ ಆರ್ಟ್‌ಗೆ ಬೆಂಬಲ ನೀಡ್ತಿರೋದು ತುಂಬಾ ಒಳ್ಳೆಯ ಕೆಲಸ. ಸಂಗೀತ ಕ್ಷೇತ್ರದಲ್ಲಿ ನಿಮ್ಮ ಲಹರಿ ಸಂಸ್ಥೆ ಬೆಳೆದ ರೀತಿಯಲ್ಲಿ ಫಿಡಿಲಿಟಸ್ ಗ್ಯಾಲರಿಯೂ ಬೆಳೆಯಲಿ ಎಂದು ಹಾರೈಸುತ್ತೇನೆ. ಕಲಾವಿದರಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಜೊತೆ ಎಂದಿಗೂ ನಾವಿರ್ತೀವಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.

Bengaluru: OTTs Vanishing All Types of Arts Says Alok Kumar IPS

ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಮಾತನಾಡಿ, ಅಚ್ಚುತ್ ಗೌಡ ಅವರು ಕಲಾವಿದರಿಗೆ ಕೊಡುತ್ತಿರುವ ಬೆಂಬಲಕ್ಕೆ ಎಷ್ಟು ಹೊಗಳಿದರೂ ಸಾಲದು. ಕಲಾವಿದರ ಕಲಾಕೃತಿಗಳಿಗೆ ತುಂಬಾ ಗೌರವ ನೀಡಬೇಕಿದೆ. ಅದು ಈ ಸುಂದರ ಸಂಜೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜರುಗುತ್ತಿದೆ ಎಂದು ಫಿಡಿಲಿಟಸ್ ಗ್ಯಾಲರಿಯನ್ನು ಪ್ರಶಂಶೆ ಮಾಡಿದರು.

Bengaluru: OTTs Vanishing All Types of Arts Says Alok Kumar IPS

Recommended Video

Sourav Ganguly ಸಪೋರ್ಟ್ ಇದ್ರೂ ಸಾಹಾಗೆ ದ್ರಾವಿಡ್ ಮೋಸ‌ ಮಾಡಿದ್ದು ಹೇಗೆ? | Oneindia Kannada
ಪಿಡಿಲಿಟಸ್ ಗ್ಯಾಲರಿಯ ಸಂಸ್ಥಾಪಕರಾದ ಅಚ್ಚುತ್ ಗೌಡ ಮಾತನಾಡಿ, ಗ್ಯಾಲರಿ ಪ್ರಾರಂಭವಾದ ಮೊದಲ ದಿನದಿಂದಲೂ ನಾವು ಕಲೆ ಬಗ್ಗೆ ಗೌರವ ಹೊಂದಿದ್ದೇವೆ. ಇಂತಹ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನ ಮಾಡೋದು ನಮ್ಮ ಸೌಭಾಗ್ಯ. ದೇವರು ಕೊಟ್ಟ ಒಂದು ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ನಮ್ಮ ಕಲಾ ಸೇವೆ ಮುಂದೆಯೂ ಮುಂದುವರಿಯಲಿದೆ ಎಂದು ಕಲಾವಿದರಿಗೆ ಧನ್ಯವಾದ ಅರ್ಪಿಸಿದರು.

Bengaluru: OTTs Vanishing All Types of Arts Says Alok Kumar IPS

ಪ್ರತಿಷ್ಠಿತ ಕಲಾ ಕಾಲೇಜುಗಳ 10 ಮಂದಿ ಹಿರಿಯ ಬೋಧಕರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ 9 ದಿನಗಳ ಕಾಲ ಅಂದರೆ ಫೆಬ್ರವರಿ 27ರ ವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಮಾರಾಟವಾದ ಕಲಾಕೃತಿಗಳ ಮೌಲ್ಯದ 25% ರಷ್ಟನ್ನು ಶಿಲ್ಪಾ ಫೌಂಡೇಷನ್‌ಗೆ ನೀಡಲಾಗುವುದು. ಫಿಡಿಲಿಟಸ್ ಕಾರ್ಪ್‌ನ ಅಂಗ ಸಂಸ್ಥೆಯಾದ ಶಿಲ್ಪಾ ಫೌಂಡೇಷನ್ ಶಿಕ್ಷಣ, ಪರಿಸರ ಮತ್ತು ಆರೋಗ್ಯ ಸಂಬಂಧಿತ ಕ್ಷೇತ್ರಗಳಲ್ಲಿ ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿದ್ದು, ಕಲಾಕೃತಿ ಮಾರಾಟದಲ್ಲಿ ಬಂದ ಹಣವನ್ನು ಈ ಮೂಲಕ ಸದ್ವಿನಿಯೋಗ ಮಾಡಲಾಗುತ್ತಿದೆ.

English summary
Increasing invasion of Social Media & OTT platforms in our lives is shrinking the space for artistic creativity says Alok Kumar IPS. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X