ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇಡಿನ ಕೊಲೆ: ಭಾರತದಲ್ಲೇ ಬೆಂಗಳೂರು ನಂ.1, ಎರಡನೇ ಸ್ಥಾನದಲ್ಲಿ ದೆಹಲಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಇಡೀ ಭಾರತದಾದ್ಯಂತ ನಡೆದ ಸೇಡಿನ ಕೊಲೆಯಲ್ಲಿ ಬೆಂಗಳೂರಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ದೆಹಲಿ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿರುವ 2019ರ ಅಪರಾಧ ಪ್ರಕರಣಗಳ ದತ್ತಾಂಶಗಳ ಅನ್ವಯ ದೇಶದಲ್ಲಿ ನಡೆದ ಒಟ್ಟಾರೆ ಕೊಲೆ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ ಅಗ್ರ ಸ್ಥಾನದಲ್ಲಿದೆ.

ಚಾಮರಾಜನಗರ: ಮನೆ ಮಾಲೀಕನನ್ನು ಹತ್ಯೆ ಮಾಡಿದ ಶ್ರೀಗಂಧ ಕಳ್ಳರುಚಾಮರಾಜನಗರ: ಮನೆ ಮಾಲೀಕನನ್ನು ಹತ್ಯೆ ಮಾಡಿದ ಶ್ರೀಗಂಧ ಕಳ್ಳರು

ಬೆಂಗಳೂರಲ್ಲಿ ಕೊರೊನಾ ಸೋಂಕಿನಿಂದಾಗಿ ಲಾಕ್‌ಡೌನ್ ವಿಧಿಸಿದ್ದ ಕಾರಣ ಕಳೆದ ಐದಾರು ತಿಂಗಳಲ್ಲಿ ಅಪರಾಧ ಪ್ರಕರಣಗಳು ಕೊಂಚ ತಗ್ಗಿವೆ. ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಿವೆ.

ದೆಹಲಿಯಲ್ಲಿ 505 ಕೊಲೆ ಪ್ರಕರಣಗಳು

ದೆಹಲಿಯಲ್ಲಿ 505 ಕೊಲೆ ಪ್ರಕರಣಗಳು

2019ರಲ್ಲಿ ದೆಹಲಿಯಲ್ಲಿ ಒಟ್ಟು 505 ಕೊಲೆ ಪ್ರಕರಣಗಳು ನಡೆದಿದ್ದು, ಬೆಂಗಳೂರಿನಲ್ಲಿ ಒಟ್ಟು 210 ಕೊಲೆ ನಡೆದಿದ್ದು 2ನೇ ಸ್ಥಾನದಲ್ಲಿದೆ.
58 ದ್ವೇಷದ ಕೊಲೆ ಪ್ರಕರಣಗಳು ದಾಖಲಾಗಿರುವ ನಾಗಪುರ ಮೂರನೇ ಸ್ಥಾನದಲ್ಲಿದ್ದು, ಚೆನ್ನೈ (45 ಪ್ರಕರಣ), ಸೂರತ್ (43 ಪ್ರಕರಣ), ಕೋಲ್ಕತಾ (27 ಪ್ರಕರಣ) ಅಹಮದಾಬಾದ್ (23 ಪ್ರಕರಣ) ಮತ್ತು ಇಂದೋರ್ (16 ಪ್ರಕರಣ) ನಂತರದ ಸ್ಥಾನದಲ್ಲಿದೆ.

ಶೇ.75ರಷ್ಟು ಪ್ರಕರಣಗಳು ವೈಯಕ್ತಿಕ ದ್ವೇಷದಿಂದ ನಡೆದಿದೆ

ಶೇ.75ರಷ್ಟು ಪ್ರಕರಣಗಳು ವೈಯಕ್ತಿಕ ದ್ವೇಷದಿಂದ ನಡೆದಿದೆ

ಬೆಂಗಳೂರು 2019ರಲ್ಲಿ 106 ಸೇಡಿನ ಕೊಲೆಗಳು ನಡೆದಿದ್ದು, ದೆಹಲಿಯಲ್ಲಿ 87 ಕೊಲೆಗಳಾಗಿವೆ. ಅದರಂತೆ ಸೇಡಿಗಾಗಿ ನಡೆದ ಕೊಲೆ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದ್ದು, ದೆಹಲಿ 2ನೇ ಸ್ಥಾನದಲ್ಲಿದೆ.

ಒಟ್ಟು ಕೊಲೆ ಪ್ರಕರಣಲ್ಲಿ ಶೇ.75 ಪ್ರಕರಣಗಳು ವೈಯಕ್ತಿಕ ದ್ವೇಷ, ಮಾರಾಟ ಹಾಗೂ ಪೂರ್ವ ನಿಯೋಜಿತ ಕೃತ್ಯಗಳಾಗಿವೆ.
ಲಾಭಕ್ಕಾಗಿ ಮಾಡುವ ಕೊಲೆ

ಲಾಭಕ್ಕಾಗಿ ಮಾಡುವ ಕೊಲೆ

ಇತ್ತೀಚೆಗೆ ಬೆಂಗಳೂರಿನ ಹೆಬ್ಬಗೋಡುವಿನಲ್ಲಿ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊಲೆಗಾರ ಮೊಬೈಲ್ ಫೋನ್ ಹಾಗೂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಲಾಭಕ್ಕಾಗಿ ಮಾಡುವ ಕೊಲೆಯ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತವೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ವೈಯಕ್ತಿಕ ಲಾಭಕ್ಕಾಗಿ ನಡೆಯುವ ಕೊಲೆಗಳು ಹೆಚ್ಚು ಆತಂಕಕಾರಿ. ದ್ವೇಷದ ಆಧಾರಿತ ಕೊಲೆಗಳು ಹೆಚ್ಚಾಗಿ ನಡೆಯುವುದು ವೈಯಕ್ತಿಕ ಕಾರಣಗಳಿಂದ. ಲಾಭಕ್ಕಾಗಿ ಕೊಲೆ ಮಾಡುವ ಉದ್ದೇಶವೆಂದರೆ ಚಿನ್ನ, ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಳ್ಳುವುದು.

Recommended Video

DK Shivakumar ಮನೆಯ ಮೇಲೆ ದಾಳಿ ನಡೆಸಿದ ಹಿಂದಿನ ಅಸಲಿ ಕಾರಣ ಇದೇ | Oneindia Kannada
ಭೂಮಿ, ಮಹಿಳೆ, ಸಂಪತ್ತಿಗಾಗಿ ನಡೆದ ಕೊಲೆಗಳು

ಭೂಮಿ, ಮಹಿಳೆ, ಸಂಪತ್ತಿಗಾಗಿ ನಡೆದ ಕೊಲೆಗಳು

ವೈಯಕ್ತಿಕ ದ್ವೇಷದ ಕೊಲೆಗಳು ಕುಟುಂಬಗಳಲ್ಲಿ, ಸ್ನೇಹಿತರು ಹಾಗೂ ಒಂದೇ ಪ್ರದೇಶದಲ್ಲಿ ವಾಸಿಸುವ ಜನರ ನಡುವೆ ನಡೆದಿವೆ. ಲಾಭಕ್ಕಾಗಿ ನಡೆದಿರುವ ಕೊಲೆಗಳಿಗೆ ಈ ತನಿಖೆ ಕಷ್ಟವೇನಲ್ಲ.
ವೈಯಕ್ತಿಕ ದ್ವೇಷದಿಂದಾಗಿಯೇ ಹೆಚ್ಚಿನ ಕೊಲೆಗಳು ನಡೆದಿದ್ದು, ಭೂಮಿ, ಮಹಿಳೆ ಹಾಗೂ ಸಂಪತ್ತಿಗಾಗಿ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ ಎಂಬುದು ಎನ್‍ಸಿಆರ್‍ ಬಿ ದತ್ತಾಂಶಗಳಿಂದ ಬಹಿರಂಗವಾಗಿದೆ. ಅಪರಾಧ ಉದ್ದೇಶವನ್ನು ಪತ್ತೆ ಹಚ್ಚಿದ ಬಳಿಕ ಶಂಕಿತರನ್ನು ಪತ್ತೆ ಹಚ್ಚುವುದು ಹಾಗೂ ಬಂಧಿಸುವುದು ಸುಲಭವಾಗುತ್ತದೆ ಎಂದು ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್ ತಿಳಿಸಿದ್ದಾರೆ.

English summary
Karnataka capital Bengaluru has reported the highest number of revenge murders in the country followed by the national capital Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X