ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪರೂಪದ ಪ್ರಾಣಿಯನ್ನು ವಶ ಪಡಿಸಿಕೊಂಡ ಬೆಂ.ಉತ್ತರ ಪೊಲೀಸರು

|
Google Oneindia Kannada News

ಬೆಂಗಳೂರು, ಆ 14: ಭಾತ್ಮೀದಾರರು ನೀಡಿದ ಖಚಿತ ಮಾಹಿತಿಯ ಜಾಡು ಹಿಡಿದು ಹೋದ ಬೆಂಗಳೂರು ಉತ್ತರ ಪೊಲೀಸರು ಅಪರೂಪದ ಪ್ರಾಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ (ಆ 13) ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಕಮಲಮ್ಮನ ಗುಂಡಿ ಆಟದ ಮೈದಾನದ ಹತ್ತಿರ, ಪಂಗೋಲಿನ್ (ಚಿಪ್ಪು ಹಂದಿ) ಎಂಬ ಪ್ರಾಣಿ ಮತ್ತು ಅದರ ಚಿಪ್ಪುಗಳನ್ನು ಮಾರಾಟ ಮಾಡಲು ಆರೋಪಿಗಳು ಬಂದಿದ್ದರು.

ರಾಜ್ಯದಲ್ಲಿ ಐಪಿಎಸ್ ವರ್ಗಾವಣೆ ದಂಧೆ: ಆಡಿಯೋ ಬಿಚ್ಚಿಟ್ಟ ಕರಾಳ ಅಧ್ಯಾಯರಾಜ್ಯದಲ್ಲಿ ಐಪಿಎಸ್ ವರ್ಗಾವಣೆ ದಂಧೆ: ಆಡಿಯೋ ಬಿಚ್ಚಿಟ್ಟ ಕರಾಳ ಅಧ್ಯಾಯ

ಸಿಕ್ಕ ಮಾಹಿತಿ ಮೇರೆಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ದಾಳಿ ಮಾಡಿ ಆರೋಪಿಗಳಾದ, ಬನ್ನೇರುಘಟ್ಟ ರಸ್ತೆಯ ಮುನಿವೆಂಕಟಪ್ಪ( 45) ಮತ್ತು ಗೌತಮ್ (31) ಎನ್ನುವಾತನನ್ನು ಬಂಧಿಸಿ, ಅವರುಗಳ ವಶದಿಂದ ಪಂಗೋಲಿನ್ ಮತ್ತು ಅದರ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದಾರೆ.

Bengaluru North Police Arrested Two Persons, Seized Pangolin And Their Shells

ಈ ದಾಳಿ ಕಾರ್ಯವನ್ನು ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ, ಧನಂಜಯರವರ ಮಾರ್ಗದರ್ಶನದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಪ್ರಶಾಂತ್ ನೇತೃತ್ವದಲ್ಲಿ, ವೆಂಕಟರಮಣಪ್ಪ ಹಾಗೂ ಸಿಬ್ಬಂದಿಗಳು ನಡೆಸಿದ್ದಾರೆ.

ಪಂಗೋಲಿನ್ ಒಂದು ಸಸ್ತನಿಯಾಗಿದ್ದು (mammals) ಸಾಮಾನ್ಯವಾಗಿ ಮರದ ಪೊತರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ. ಇದು ಸುಮಾರು ಮೂವತ್ತರಿಂದ ನೂರು ಸೆ.ಮೀನಷ್ಟು ಗಾತ್ರವನ್ನು ಹೊಂದಿರುತ್ತದೆ.

English summary
Bengaluru North Police Arrested Two Persons in Mahalakshmi Layout Police Limit and Seized Pangolin And Their Shells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X