ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನಿಮ್ಹಾನ್ಸ್ ಹಿಸ್ಟರಿ ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧ

By Vanitha
|
Google Oneindia Kannada News

ಬೆಂಗಳೂರು, ಜುಲೈ, 25 : ನೀವು ಕಳೆದ ಶತಮಾನದ 40ರ ದಶಕದ ಮನೋವೈಜ್ನಾನಿಕ ಉಪಕರನಗಳನ್ನು ನೋಡಬೇಕೇ? ಹಾಗಾದರೆ ಮುಂದಿನ ವಾರ ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ)ಗೆ ಭೇಟಿ ನೀಡಬಹುದು.

20 ನೇ ಶತಮಾನದ 40 ರ ದಶಕದದಲ್ಲಿ ಬಳಸುತ್ತಿದ್ದ ಸುಳ್ಳು ಪತ್ತೆ ಯಂತ್ರ, ಮಾಗ್ನೆಟೋ ಎಲೆಕ್ಟ್ರಿಕಲ್ ಥೆರಪಿ ಸೇರಿದಂತೆ ಹಲವು ಅಪರೂಪದ ಉಪಕರಣಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ನಿಮ್ಹಾನ್ಸ್ ಸಂಸ್ಥೆ ಮಾಡಿಕೊಟ್ಟಿದೆ. ಹಲವಾರು ಅಪೂರ್ವ ಉಪಕರಣಗಳ ಹಿಸ್ಟರಿ ಮ್ಯೂಸಿಯಂ ನ್ನು ನಿಮ್ಹಾನ್ಸ್ ಆರಂಭಿಸುತ್ತಿದ್ದು, ಮಂಗಳವಾರ ಜುಲೈ 28ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಲಿದ್ದಾರೆ.[ಅಪರೂಪದ ಈ ಮ್ಯೂಸಿಯಂ ಅಭಿವೃದ್ಧಿ ಮಾಡುವವರು ಯಾರು?]

bengaluru nimhans hospital starts history museum on tuesday

ವಿಶ್ವದಲ್ಲಿ ಈ ಬಗೆಯ ಉಪಕರಣಗಳಿರುವುದು ಕೇವಲ 5 ಮಾತ್ರ. ಈ ಉಪಕರಣಗಳು ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದಂತಹವು. ಈ ಯಂತ್ರವನ್ನು ಮಾನಸಿಕ ಆರೋಗ್ಯ ಆರೈಕೆಯಲ್ಲಿ ಭಾರತ ಸೇರದಂತೆ ಹಲವು ರಾಷ್ಟ್ರಗಳು ಬಳಸುತ್ತಿದ್ದವು. 2ನೇ ಮಹಾಯುದ್ದದ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ಅನಸ್ತೇಶಿಯಾ ಸಾಧನಗಳು ಸೇರಿದಂತೆ ಎಲ್ಲಾ ಉಪಕರಣಗಳನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಲಭ್ಯವಾಗಲಿದೆ ಎಂದು ನಿಮ್ಹಾನ್ಸ್ ಸಿಬ್ಬಂದಿವರ್ಗ ತಿಳಿಸಿದ್ದಾರೆ.

ಮನಸ್ಸು ಮತ್ತು ಮೆದುಳಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಪ್ರೇರಣೆ ನೀಡುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ. ನಿಮ್ಹಾನ್ಸ್ 2012ರಲ್ಲಿ ಪಾರಂಪರಿಕ ಕಟ್ಟಡದಲ್ಲಿ ಮ್ಯೂಸಿಯಂ ಆರಂಭಿಸಿತ್ತು. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ಸ್ ಆಂಡ್ ಕಲ್ಚರ್ ಹೆರಿಟೇಜ್ ಈ ಯೋಜನೆಯ ಸಮನ್ವಯತೆಯನ್ನು ನೋಡಿಕೊಳ್ಳುತ್ತಿದೆ ಎಂದು ಉಸ್ತುವಾರಿ ಸಮಿತಿ ಸದಸ್ಯರು ತಿಳಿಸಿದ್ದಾರೆ.

English summary
bengaluru nimans hospital starts history museum on tuesday(july 28). presiedent pranab mukharjee is inograter of this museum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X