ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ನೈಟ್‌ ಲೈಫ್‌ ಒಂದು ವರ್ಷ ವಿಸ್ತರಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 12 : ಉದ್ಯಾನನಗರಿ ಬೆಂಗಳೂರಿನಲ್ಲಿ ಜಾರಿಗೆ ಬಂದಿರುವ 'ನೈಟ್‌ ಲೈಫ್‌' ಅನ್ನು ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದಂತೆ ವಾರಾಂತ್ಯದಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಪಬ್, ಬಾರ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

2014ರಲ್ಲಿ ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ 'ನೈಟ್‌ ಲೈಫ್' ಅನ್ನು ನಂತರ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು. 2015ರ ಜೂನ್ 6ರಂದು ಇದರ ಅವಧಿ ಮುಕ್ತಾಯಗೊಂಡಿತ್ತು. ಈಗ ಪುನಃ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಗಿದೆ.['ಮದ್ಯ'ರಾತ್ರಿ ಅವಧಿ ಒಂದು ವರ್ಷ ವಿಸ್ತರಣೆ]

bar

ಅಬಕಾರಿ ಇಲಾಖೆಯ ಆಯುಕ್ತರಾದ ಎಸ್‌.ಆರ್.ಉಮಾಶಂಕರ್ ಅವರು ಮಂಗಳವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ 2016ರ ಜೂನ್ 30ರ ತನಕ 'ನೈಟ್‌ ಲೈಫ್' ಅವಧಿ ವಿಸ್ತರಣೆಯಾಗಿದೆ. ['ಮದ್ಯ'ರಾತ್ರಿ ಅವಧಿ ವಿಸ್ತರಣೆಗೆ ಬಿಜೆಪಿ ಅಸಮಾಧಾನ]

ನೈಟ್ ಲೈಫ್ ಅವಧಿ ವಿಸ್ತರಣೆ ಮಾಡುವುದಕ್ಕೆ ಮುಂಚೆ ಅಬಕಾರಿ ಇಲಾಖೆಯು ಬೆಂಗಳೂರು ಪೊಲೀಸರಿಂದ ವರದಿ ಕೇಳಿತ್ತು. ಅವಧಿ ವಿಸ್ತರಣೆ ಮಾಡಲು ಪೊಲೀಸರು ಒಪ್ಪಿಗೆ ನೀಡಿದ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ.

ಏನಿದು ನೈಟ್ ಲೈಫ್ : ಉದ್ಯಾನ ನಗರಿಯಲ್ಲಿ ಮಧ್ಯರಾತ್ರಿ 1 ಗಂಟೆಯ ವರೆಗೆ ಪಬ್, ಬಾರ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲು 2014ರಲ್ಲಿ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಶನಿವಾರ ಮತ್ತು ಭಾನುವಾರ ಮಾತ್ರ ಈ ಸೇವೆ ಲಭ್ಯವಿರುತ್ತದೆ ಎಂದು ಸ್ಪಷ್ಟಪಡಿಸಿತ್ತು.

English summary
Karnataka excise department on Tuesday released a notification that will allow pubs, restaurants and bars to remain open till 1 a.m. on Fridays and Saturdays. in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X