ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್!

|
Google Oneindia Kannada News

ಬೆಂಗಳೂರು, ಮೇ 12 : ಬೆಂಗಳೂರು-ದೆಹಲಿ ಎಸಿ ಸೂಪರ್ ಫಾಸ್ಟ್ ರೈಲಿನ ಟಿಕೆಟ್ ಕೇವಲ 30 ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದೆ. ಮಂಗಳವಾರದಿಂದ ನೈಋತ್ಯ ರೈಲ್ವೆ ಎರಡೂ ನಗರಗಳ ನಡುವೆ ಪ್ರತಿದಿನದ ರೈಲನ್ನು ಓಡಿಸುತ್ತಿದೆ.

ಭಾರತೀಯ ರೈಲ್ವೆ ಸೋಮವಾರ ಸಂಜೆ 7.30ಕ್ಕೆ ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಬುಕ್ಕಿಂಗ್ ಆರಂಭಿಸಿತು. ಅರ್ಧಗಂಟೆಯಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್ ಆಗಿವೆ. ಮಂಗಳವಾರ ರಾತ್ರಿ 8.30ಕ್ಕೆ ರೈಲು ಬೆಂಗಳೂರಿನಿಂದ ಹೊರಡಲಿದೆ.

ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು

ರೈಲಿನಲ್ಲಿ ಸಂಚಾರ ನಡೆಸುವ ಜನರಿಗೆ ಮಾರ್ಗಸೂಚಿಗಳನ್ನು ಈಗಾಗಲೇ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದೆ. ನಿಮ್ಮ ಟಿಕೆಟ್ ಖಚಿತವಾಗಿದ್ದರೆ ಮಾತ್ರ ರೈಲು ನಿಲ್ದಾಣ ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತದೆ. ಆರೋಗ್ಯ ತಪಾಸಣೆಗೆ ಪ್ರಯಾಣಿಕರು ಸಹಕಾರ ನೀಡಬೇಕಿದೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ? ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇಶದಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ಸ್ಥಗಿತವಾಗಿತ್ತು. ಮಂಗಳವಾರದಿಂದ ಕೆಲವು ನಗರಗಳಿಗೆ ರೈಲು ಸಂಚಾರ ಆರಂಭವಾಗಲಿದೆ. ಇದಕ್ಕಾಗಿ ಸೋಮವಾರದಿಂದ ಬುಕ್ಕಿಂಗ್ ಆರಂಭವಾಗಲಿದೆ.

ಕರ್ನಾಟಕ; ಒಂದೇ ದಿನ ಹೊರಟ 6 ಶ್ರಮಿಕ್ ರೈಲು, ವಲಸಿಗರು ತವರಿಗೆ ಕರ್ನಾಟಕ; ಒಂದೇ ದಿನ ಹೊರಟ 6 ಶ್ರಮಿಕ್ ರೈಲು, ವಲಸಿಗರು ತವರಿಗೆ

ಒಂದು ದಿನ ತಡವಾಗಿ ಬುಕ್ಕಿಂಗ್ ಆರಂಭ

ಒಂದು ದಿನ ತಡವಾಗಿ ಬುಕ್ಕಿಂಗ್ ಆರಂಭ

ಐಆರ್‌ಸಿಟಿಸಿ ಭಾನುವಾರ ಸಂಜೆ 4 ಗಂಟೆಗೆ ರೈಲಿನ ಟಿಕೆಟ್ ಬುಕ್ಕಿಂಗ್ ಆರಂಭ ಮಾಡಬೇಕಿತ್ತು. ಆದರೆ, ಸರ್ವರ್‌ನಲ್ಲಿನ ಸಮಸ್ಯೆ ಕಾರಣ ಸೋಮವಾರ ಬುಕ್ಕಿಂಗ್ ಆರಂಭವಾಯಿತು. ಬೆಂಗಳೂರು-ನವದೆಹಲಿ ಎಸಿ ಸೂಪರ್ ಫಾಸ್ಟ್ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿಯೇ ಖಾಲಿ ಆಯಿತು.

90 ನಿಮಿಷ ಮೊದಲು ಹೋಗಿ

90 ನಿಮಿಷ ಮೊದಲು ಹೋಗಿ

ರೈಲಿನಲ್ಲಿ ಪ್ರಯಾಣ ಮಾಡುವವರು 90 ನಿಮಿಷ ಮೊದಲು ರೈಲು ನಿಲ್ದಾಣಕ್ಕೆ ಹೋಗಬೇಕು. ಮೊದಲು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಬೇಕಾಗುತ್ತದೆ. ಪ್ರಯಾಣಿಕರು ಕುಡಿಯುವ ನೀರು, ಒಣಗಿದ ಹಣ್ಣು, ರೆಡಿ ಟು ಈಟ್ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಬಹುದು. ರೈಲಿನವೊಳಗೆ ಬ್ಲಾಂಕೆಟ್ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಸ್ಕ್ ಧರಿಸುವುದು ಕಡ್ಡಾಯ

ಮಾಸ್ಕ್ ಧರಿಸುವುದು ಕಡ್ಡಾಯ

ರೈಲು ನಿಲ್ದಾಣಕ್ಕೆ ಬರುವಾಗ, ವಾಪಸ್ ಹೋಗುವಾಗ ಕೈಗಳನ್ನ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನಿಲ್ದಾಣದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರಯಾಣದ ಅವಧಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಯಾರ ಟಿಕೆಟ್ ಖಚಿತವಾಗಿದೆಯೋ ಅವರನ್ನು ಮಾತ್ರ ರೈಲು ನಿಲ್ದಾಣದ ಒಳಗೆ ಬಿಡಲಾಗುತ್ತದೆ.

ರೈಲಿನ ವೇಳಾಪಟ್ಟಿ

ರೈಲಿನ ವೇಳಾಪಟ್ಟಿ

* ರೈಲು ನಂಬರ್ 02691 ಕೆಎಸ್ಆರ್‌ ಬೆಂಗಳೂರು-ನವದೆಹಲಿ ಸೂಪರ್ ಫಾಸ್ಟ್ ಎಸಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರನ್ನು ಪ್ರತಿದಿನ ರಾತ್ರಿ 8.30ಕ್ಕೆ ಬಿಡಲಿದೆ. ನವದೆಹಲಿಯನ್ನು ಮೂರನೇ ದಿನ 5.55ಕ್ಕೆ ತಲುಪಲಿದೆ.

* ರೈಲು ನಂಬರ್ 02692 ನವದೆಹಲಿ-ಕೆಎಸ್ಆರ್ ಬೆಂಗಳೂರು ಸೂಪರ್ ಫಾಸ್ಟ್ ಎಸಿ ಎಕ್ಸ್‌ಪ್ರೆಸ್ ರೈಲು ನವದೆಹಲಿಯನ್ನು ಪ್ರತಿದಿನ ರಾತ್ರಿ 9.15ಕ್ಕೆ ಬಿಡಲಿದೆ. ಮೂರನೇ ದಿನ ಬೆಳಗ್ಗೆ 6.40ಕ್ಕೆ ಬೆಂಗಳೂರು ತಲುಪಲಿದೆ.

ಈ ರೈಲಿನಲ್ಲಿ ಒಟ್ಟು 1076 ಜನರು ಸಂಚಾರ ನಡೆಸಬಹುದಾಗಿದೆ. ರೈಲು ಅನಂತಪುರ, ಗುಂತಕಲ್ ಜಂಕ್ಷನ್, ಸಿಕಂದರಾಬಾದ್, ನಾಗ್ಪುರ, ಭೋಪಾಲ್ ಮತ್ತು ಝಾನ್ಸಿಯಲ್ಲಿ ನಿಲುಗಡೆಗೊಳ್ಳಲಿದೆ.

English summary
The tickets for Bengaluru-New Delhi AC superfast train sold out in 30 minutes. South Western Railway will operate daily trains between two cities from Tuesday. Train will leave KSR Bengaluru City station daily at 8.30pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X