ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಶಾಸಕರಿಗೆ ಕೊಚ್ಚಿ ಕಂಪನಿಯಿಂದ ನೀರಾಭಾಗ್ಯ!

|
Google Oneindia Kannada News

ಬೆಂಗಳೂರು, ಜು. 11: ನಮ್ಮ ಶಾಸಕರು ಇನ್ನು ಮುಂದೆ ವಿಧಾನಸೌಧದಲ್ಲಿಯೇ ನೀರಾ ಕುಡಿದು ಮಜಾ ಉಡಾಯಿಸಲಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ಶಾಸಕರಿಗೆ ಕೊಚ್ಚಿ ಮೂಲದ ಸಂಸ್ಥೆಯೊಂದು ನೀರಾ ಸರಬರಾಜು ಮಾಡಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೊಚ್ಚಿ ಮೂಲದ ತೆಂಗು ಉತ್ಪನ್ನ ಸಂಸ್ಥೆಯ ಅಧ್ಯಕ್ಷ ಕೆ ಟಿ ಜೋಷ್ ಬೆಂಗಳೂರಿನಲ್ಲಿ ಆರಂಭವಾಗಲಿರುವ ಅಧಿವೇಶನದಲ್ಲಿ ನೀರಾ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.[ಬೀರು ತರುವವರ ಮನೆಗೆ ನೀರಾ ತರುವಾ!]

bengaluru

ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನೀರಾ ಇಳಿಕೆ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಕರ್ನಾಟಕ ಅಬಕಾರಿ ಇಲಾಖೆ ಎಲ್ಲ ಜಿಲ್ಲೆಗಳಲ್ಲೂ ನೀರಾ ಇಳಿಕೆ ಮಾಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಈ ಬಾರಿಯ ಅಧಿವೇಶನದಲ್ಲಿ ನೀರಾ ಬಳಕೆ ಸಂಬಂಧ ಸ್ಪಷ್ಟ ನಿರ್ದೇಶನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಇದು ಅಬಕಾರಿ ಇಲಾಖೆಗೆ ಆದಾಯ ತಂದುಕೊಡುವುದಲ್ಲದೇ ರೈತರಿಗೆ ನೆರವಾಗಲಿದೆ ಎಂದು ಹೇಳಿದರು.[ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಂಡ ಶಾಸಕ!]

ತೆಂಗು ಬೆಳೆಗಾರರು ಬೆಳಗಾವಿ ಅಧಿವೇಶನದಲ್ಲಿ ನೀರಾಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಬಗ್ಗೆ ಸರ್ಕಾರವನ್ನು ಕೇಳಿಕೊಂಡಿದ್ದರು. ಅಲ್ಲದೇ ಶಾಸಕರಿಗೆ ಪೌಷ್ಟಿಕಾಂಶಯುಕ್ತ ನೀರಾ ನೀಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಇದಕ್ಕೆ ಒಪ್ಪಿಗೆ ನೀಡಿದ್ದು ಜುಲೈ 15 ರ ನಂತರದ ಅಧಿವೇಶನದಲ್ಲಿ ಭಾಗವಹಿಸುವವರಿಗೆ ನೀರಾ ಸಿಗಲಿದೆ.

English summary
Bengaluru: The sap from coconut inflorescence will be served to our MLA, during the current monsoon session, Chairman of Kochi-based Coconut Development Board T.K. Jose said here on Saturday that Karnataka legislators would be served with ‘neera' in the current monsoon session of the Legislature, which would continue in Bengaluru from Monday, July 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X