ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ; ಸಂಸದರ ಟ್ವೀಟ್

|
Google Oneindia Kannada News

ಬೆಂಗಳೂರು, ಜುಲೈ 07 : "ರಾಜ್ಯಕ್ಕೆ ಈಗ ಲಾಕ್ ಡೌನ್ ಅಗತ್ಯವಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಸೋಂಕು ಹರಡುತ್ತಿರುವ ವೇಗ ನೋಡಿದರೆ ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ" ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಟ್ವೀಟ್ ಮಾಡಿದ್ದಾರೆ.

Recommended Video

ಇವರು ನಿಜವಾದ ಕೊರೋನಾ ವಾರಿಯರ್ಸ್..! | Oneindia Kannada

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೋವಿಡ್ - 19 ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ಡಿ. ಕೆ. ಸುರೇಶ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಲಾಕ್ ಡೌನ್ ಕುರಿತು ಮಾತನಾಡಿದ್ದಾರೆ.

ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ! ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!

ಕೇಂದ್ರ ಆರೋಗ್ಯ ಸಚಿವಾಲಯದ ತಂಡ ಮಂಗಳವಾರ ರಾಜ್ಯಕ್ಕೆ ಆಗಮಿಸಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆ ತಂಡ ಸಭೆ ನಡೆಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಸಚಿವರು ಸಭೆಯಲ್ಲಿದ್ದರು.

ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ

ಸಭೆಯ ಬಳಿಕ ಮಾತನಾಡಿದ ಡಾ. ಕೆ. ಸುಧಾಕರ್, "ಕೇಂದ್ರ ತಂಡದ ಜೊತೆ ಲಾಕ್ ಡೌನ್ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಸೀಲ್ ಡೌನ್ ಕ್ರಮವನ್ನು ಇನ್ನಷ್ಟು ಬಿಗಿಗೊಳಿಸಲಿದ್ದೇವೆ" ಎಂದು ಹೇಳಿದರು.

ರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತ

ಬಿಜೆಪಿ ಸರ್ಕಾರ ವಿಫಲವಾಗಿದೆ

"ರಾಜ್ಯಕ್ಕೆ ಈಗ ಲಾಕ್ ಡೌನ್ ಅನಿವಾರ್ಯವಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಸೋಂಕು ಹರಡುತ್ತಿರುವ ವೇಗ ನೋಡಿದರೆ ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ. ಬಿಜೆಪಿ ಸರ್ಕಾರ ಕೊರೊನಾ ಹತೋಟಿಗೆ ತರಲು ಎಲ್ಲಾ ಹಂತದಲ್ಲೂ ವಿಫಲವಾಗಿದೆ" ಎಂದು ಸಂಸದ ಡಿ. ಕೆ. ಸುರೇಶ್ ಆರೋಪಿಸಿದ್ದಾರೆ.

ನಂಬಿಕೆ ಉಳಿಸಿಕೊಂಡಿಲ್ಲ

ನಂಬಿಕೆ ಉಳಿಸಿಕೊಂಡಿಲ್ಲ

"ಜನಸಾಮಾನ್ಯರಿಗೆ ಸರ್ಕಾರದ ಮೇಲಿದ್ದ ನಂಬಿಕೆಗಳನ್ನು ಉಳಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಗುಳೆ ಹೊರಡುತ್ತಿದ್ದಾರೆ. ಸರ್ಕಾರದ ನಿಲುವುಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ" ಎಂದು ಡಿ. ಕೆ. ಸುರೇಶ್ ಹೇಳಿದ್ದಾರೆ.

ಪರಿಸ್ಥಿತಿ ನಿಭಾಯಿಸಬೇಕು

"ಕೇಂದ್ರ ಸರ್ಕಾರ ಈ ಕೂಡಲೇ ಇಲ್ಲಿನ ಅವ್ಯವಸ್ಥೆಗೆ ಮಧ್ಯ ಪ್ರವೇಶಿಸಿ ಇಲ್ಲಿನ ಸ್ಥಿತಿಯನ್ನು ನಿಭಾಯಿಸಬೇಕು. ಜನರ ರಕ್ಷಣೆಗೆ ನಿಲ್ಲಬೇಕು ಎಂದು" ಡಿ. ಕೆ. ಸುರೇಶ್ ಹೇಳಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚಳ

ಸೋಂಕಿತರ ಸಂಖ್ಯೆ ಹೆಚ್ಚಳ

ಬೆಂಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ನಗರದಲ್ಲಿ 981 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,561ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಪುನಃ ಲಾಕ್ ಡೌನ್ ಜಾರಿಗೆ ಬರಲಿದೆಯೇ?.

English summary
Bengaluru needs lock down to control spread of Coronavirus tweeted Bengaluru Rural Congress MP D. K. Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X