ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 1 ರಿಂದ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜೂನ್ 30: ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ಜುಲೈ 1 ರಿಂದ ವಿಸ್ತರಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ನಮ್ಮ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು, ಕೆಲವೇ ದಿನಗಳ ಹಿಂದೆ ಪುನರಾರಂಭಿಸಲಾಗಿದ್ದು, ಇದೀಗ ಸಂಚಾರದ ಅವಧಿಯನ್ನು ಕೂಡ ವಿಸ್ತರಿಸಲಾಗುತ್ತಿದೆ. ಮೆಟ್ರೋ ರೈಲುಗಳ ಸೇವೆಯು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 5 ನಿಮಿಷದಿಂದ 15 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆಗೊಳ್ಳಲಿದೆ.

 ನಮ್ಮ ಮೆಟ್ರೋದಲ್ಲಿ ಮತ್ತೆ ಟೋಕನ್ ವ್ಯವಸ್ಥೆ ಜಾರಿ ನಮ್ಮ ಮೆಟ್ರೋದಲ್ಲಿ ಮತ್ತೆ ಟೋಕನ್ ವ್ಯವಸ್ಥೆ ಜಾರಿ

ಜುಲೈ 1ರಿಂದ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ ವ್ಯವಸ್ಥೆ ಇರುತ್ತದೆ. ಈ ಹಿಂದೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರ ಇತ್ತು. ಆದರೆ ಇದು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಇರುತ್ತದೆ. ಕೊರೊನಾ ಕಾಟದಿಂದಾಗಿ ವೀಕೆಂಡ್ ಕರ್ಫೂ ಇನ್ನೂ ಜಾರಿಯಲ್ಲಿರುವುದರಿಂದ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ಸಂಚಾರ ಇರುವುದಿಲ್ಲ.

Bengaluru: Namma Metro To Extend Train Timings From July 1

ಇದೇ ವೇಳೆ ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರು ಟೋಕನ್ ಬಳಸಿ ಪ್ರಯಾಣ ‌ಮಾಡಬಹುದು. ಗುರುವಾರದಿಂದ ನಮ್ಮ ಮೆಟ್ರೋದ ಎಲ್ಲ ಸ್ಟೇಷನ್ ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್​ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೊವಿಡ್ ಪೂರ್ವದಲ್ಲಿ ನಿತ್ಯ 5 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಆದ್ರೆ 2021ರ ಮಾರ್ಚ್, ಏಪ್ರಿಲ್ನಲ್ಲಿ ಸರಾಸರಿ 1.5 ಲಕ್ಷ ಜನ ಮಾತ್ರ ಪ್ರಯಾಣಿಸಿದ್ದಾರೆ. ನಿನ್ನೆ ಕೇವಲ 59 ಸಾವಿರ ಜನರಷ್ಟೇ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರ ಸಂಖ್ಯೆ ಕುಸಿತಕ್ಕೆ 'ಸ್ಮಾರ್ಟ್ ಕಾರ್ಡ್' ಕಾರಣವಾಗುತ್ತಿದೆ ಹೀಗಾಗಿ ಸದ್ಯದಲ್ಲೇ ಟೋಕನ್ ವ್ಯವಸ್ಥೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಕೊವಿಡ್ ಪೂರ್ವದಲ್ಲಿ ಶೇ40% ಪ್ರಯಾಣಿಕರು ಟೋಕನ್ ಬಳಸಿಯೇ ಪ್ರಯಾಣಿಸುತ್ತಿದ್ರು. ಸದ್ಯ ಟೋಕನ್ ಇಲ್ಲದೆ ಇರುವ ಕಾರಣ ಸ್ಮಾರ್ಟ್ ಕಾರ್ಡ್ಗೆ 150 ರೂಪಾಯಿ ನೀಡಿ ಪ್ರಯಾಣಿಸಬೇಕಿದೆ.

Recommended Video

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ!! | Oneindia Kannada

ಹೀಗಾಗಿ ಬೆಂಗಳೂರಿಗೆ ಬಂದು ಹೋಗುವ ಪ್ರಯಾಣಿಕರು ಮೆಟ್ರೋದತ್ತ ಸುಳಿಯುತ್ತಿಲ್ಲ. ಸದ್ಯ ಮೆಟ್ರೋದಲ್ಲಿ 50% ರಷ್ಟು ಜನರು ಸಂಚರಿಸಲು ಮಾತ್ರ ಅವಕಾಶ ನೀಡಲಾಗಿದೆ. ಮೂರನೇ ಹಂತದ ಅನ್ಲಾಕ್ನಲ್ಲಿ ದಿನವಿಡೀ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

English summary
The Bangalore Metro Rail Corporation Limited on Wednesday said that from July 1st, 2021, Namma metro train services will be available from 7 am to 6 pm, with a frequency of 5 mins in peak hours and 15 mins in non-peak hours from Monday to Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X