ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಸ್ತೆ-ಕೆಂಗೇರಿ ನಡುವೆ ಪರೀಕ್ಷಾರ್ಥ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಏಪ್ರಿಲ್ 6: ಬಿಎಂಆರ್‌ಸಿಎಲ್ ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವೆ ಪರೀಕ್ಷಾರ್ಥ ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಿದೆ.

ಇದು ನೇರಳೆ ಮಾರ್ಗ ಮೈಸೂರು ರಸ್ತೆಯ ವಿಸ್ತರಿತ ಮಾರ್ಗವಾಗಿದೆ. ಮಂಗಳವಾರ ಈ ಮಾರ್ಗದಲ್ಲಿ ಪರೀಕ್ಷಾರ್ಥ ಮೆಟ್ರೋ ರೈಲು ಸಂಚರಿಸಿದೆ.2020ರ ಡಿಸೆಂಬರ್‌ನಲ್ಲಿ ಬಿಎಂಆರ್‌ಸಿಎಲ್ ನೀಡಿದ್ದ ಮಾಹಿತಿ ಪ್ರಕಾರ 2021ರ ಆರಂಭದಲ್ಲಿಯೇ ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವೆ ಮೆಟ್ರೋ ರೈಲು ಸಂಚರಿಸಲಿದೆ.

ಮೈಸೂರು ರಸ್ತೆ, ಕೆಂಗೇರಿಗೆ ಮೆಟ್ರೋ ಸೇವೆ ಯಾವಾಗ ಆರಂಭ? ಇಲ್ಲಿದೆ ಉತ್ತರಮೈಸೂರು ರಸ್ತೆ, ಕೆಂಗೇರಿಗೆ ಮೆಟ್ರೋ ಸೇವೆ ಯಾವಾಗ ಆರಂಭ? ಇಲ್ಲಿದೆ ಉತ್ತರ

7.5 ಕಿ.ಮೀ ಉದ್ದದ ವಿಸ್ತರಿಸಿದ ಮೆಟ್ರೋ ಮಾರ್ಗ ಇದಾಗಿದೆ. ಜೂನ್ 2021ರಲ್ಲಿ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಹಳಿಗಳ ವೀಕ್ಷಣೆ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಇವೆ.

Bengaluru: Namma Metros Mysuru Road- Kengeri Trial Runs Started

ಮುಂದಿನ 2 ತಿಂಗಳುಗಳಲ್ಲಿ ನಮ್ಮ ಮೆಟ್ರೋ ಸಂಚಾರ ಈ ಮಾರ್ಗದಲ್ಲಿ ಶುರುವಾಗಲಿದ್ದು, ನಿತ್ಯ 75 ಸಾಇರ ಮಂದಿ ನಿರೀಕ್ಷಿಸಲಾಗಿದೆ. ಕೆಂಗೇರಿ ಹಾಗೂ ನಾಯಂಡಹಳ್ಳಿ ಮೂಲಕ ರೈಲು ಬೆಂಗಳೂರಿನ ಕೇಂದ್ರ ಭಾಗವನ್ನು ಪ್ರವೇಶಿಸುತ್ತದೆ. ಈ ವಿಸ್ತರಿಸಿದ ಮಾರ್ಗದಲ್ಲಿ 7 ಮೆಟ್ರೋ ನಿಲ್ದಾಣಗಳು ಬರಲಿವೆ.

Recommended Video

#Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಮೈಲಸಂದ್ರ ಹಾಗೂ ಕೆಂಗೇರಿ ಬಸ್ ಟರ್ಮಿನಲ್ ಹಾಗೂ ಚೆಲ್ಲಘಟ್ಟ ನಿಲ್ದಾಣಗಳು ಬರಲಿವೆ.
ಇನ್ನು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಸಂಪರ್ಕಿಸುವ ಮೆಟ್ರೋ ಕಾಮಗಾರಿ 2022ರಲ್ಲಿ ಪೂರ್ಣಗೊಳ್ಳಲಿದೆ.

English summary
The Bengaluru Metro Rail Corporation Limited (BMRCL) began trial runs on the Mysuru Road-Kengeri section on Tuesday. This is the extension of the existing Purple Line of the Namma Metro connecting Mysuru Road to Kengeri in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X