ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ತಿಂಗಳ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಕಾಮಗಾರಿ ಒಂದು ತಿಂಗಳ ಬಳಿಕ ಪುನರಾರಂಭಗೊಂಡಿದೆ.

Recommended Video

Effects of Corona on Namma Metro | BMRCL | Metro effect | Oneindia kannada

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ನ (ಬಿಎಂಆರ್‌ಸಿಎಲ್) ಎರಡನೇ ಹಂತದ ಯೋಜನೆಗೆ ಸಂಬಂಧಿಸಿದಂತೆ 45 ಸ್ಥಳಗಳಲ್ಲಿ ನಿರ್ಮಾಣ ಕಾರ್ಯಗಳು ಮತ್ತೆ ಪ್ರಾರಂಭಗೊಂಡಿದೆ. ರಾಜ್ಯ ಸರ್ಕಾರ ಹೊರಡಿಸಿದ ಲಾಕ್‌ಡೌನ್ ಸಡಿಲಿಕೆಯ ನೂತನ ಮಾರ್ಗಸೂಚಿಗಳ ನಂತರ ಕಾಮಗಾರಿಗಳು ಪುನಾರಂಭವಾಗಿದೆ.

"ಒಟ್ಟು 1350 ನೌಕರರು 45 ತಾಣಗಳಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ಸಾಮಾಜಿಕ ಅಂತರ ಹಾಗೂ ಮೂಲಭೂತ ಆರೋಗ್ಯ ತಪಾಸಣೆಗೆ ಪೂರ್ವಸಿದ್ಧತಾ ಕ್ರಮ, ಅಗತ್ಯ ಮುನ್ನೆಚ್ಚರಿಕೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರು ಜಾರಿಗೆ ತಂದಿದ್ದಾರೆ"ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಪತ್ರಿಕೆಗೆ ಹೇಳಿದ್ದಾರೆ.

Bengaluru Namma Metro Construction Work Begins

ಮೆಟ್ರೊ ಸಾವಿರಾರು ವಲಸೆ ಕಾರ್ಮಿಕರನ್ನು ತನ್ನ ಕೆಲಸಕ್ಕೆ ತೊಡಗಿಸಿಕೊಂಡಿದ್ದು ಅವರನ್ನು ಕೆಲಸದ ಸ್ಥಳಗಳ ಬಳಿ ಶಿಬಿರಗಳಲ್ಲಿ ಇರಿಸಲಾಗಿದೆ.

ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್.ಯಶವಂತ್ ಚವಾಣ್ ಮಾತನಾಡಿ, ಸಿಲ್ಕ್ ಬೋರ್ಡ್ ಮತ್ತು ಬೊಮ್ಮಸಂದ್ರ, ಶಿವಾಜಿ ನಗರ, ಜಯದೇವ ಫ್ಲೈಓವರ್, ಮತ್ತು ಕಂಟೋನ್ಮೆಂಟ್, ಕಾಸ್ಟಿಂಗ್ ಯಾರ್ಡ್‌ಗಳ ಭೂಗತ ನಿಲ್ದಾಣಗಳು ಮತ್ತು ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್ (ರೀಚ್ -4) ನಡುವೆ ಅನೇಕ ಸ್ಥಳಗಳಲ್ಲಿ ಕೆಲಸ ಪ್ರಾರಂಭವಾಗಿದೆ.

ಆಗಸ್ಟ್ 15 ಅನ್ನು ರೀಚ್ - 4 ಮಾರ್ಗದ ಉದ್ಘಾಟನಾ ದಿನಾಂಕವೆಂದು ಘೋಷಿಸಲಾಗಿತ್ತು. ಕೊರೊನಾವೈರಸ್ ಕಾರಣದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಇದ್ದ ಕಾರಣ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿತ್ತು.

ಗುರುವಾರ ಮತ್ತು ಶುಕ್ರವಾರದಿಂದ ಅಲ್ಲಿ ಕೆಲಸ ಪ್ರಾರಂಭವಾಗಿದ್ದು ಇಂದಿನಿಂದ ಇನ್ನೂ ಕೆಲವು ಸ್ಥಳಗಳಲ್ಲಿ ಕೆಲಸ ಪ್ರಾರಂಭವಾಗಿದೆ. ಸರ್ಕಾರ ಹೊರಡಿಸುವ ಎಲ್ಲಾ ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ

English summary
After a gap of nearly a month, construction work began at 45 sites in connection with the Phase-II project of the Bangalore Metro Rail Corporation Limited (BMRCL) following lockdown relaxations issued by the Karnataka government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X