ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು ಇಷ್ಟು ಸ್ಲೋ ಆದರೆ ಹೇಗೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ಮೈಸೂರು-ಬೆಂಗಳೂರು ನಡುವೆ ಬಸ್ ಪ್ರಯಾಣವಲ್ಲದೆ, ದಿನ ನಿತ್ಯ ರೈಲು ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾಗಿದೆ.

ಎಕ್ಸ್ ಪ್ರೆಸ್, ಪ್ಯಾಸೆಂಜರ್ ಟ್ರೈನ್ ಗಳ ನಿರಂತರ ಓಡಾಟವಿದ್ದರೂ ಪ್ರಯಾಣಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ, ಪ್ಯಾಸೆಂಜರ್ ರೈಲು ನಿತ್ಯ ತಡವಾಗುತ್ತಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಕೊಂಕಣ್ ರೈಲ್ವೆ ರೂಟ್ ನಲ್ಲಿ ಮತ್ತೆ ರೈಲು ಸಂಚಾರ ಆರಂಭಕೊಂಕಣ್ ರೈಲ್ವೆ ರೂಟ್ ನಲ್ಲಿ ಮತ್ತೆ ರೈಲು ಸಂಚಾರ ಆರಂಭ

"ಅಯ್ಯೋ ಬಸ್ಸಿನಲ್ಲಿ ಹೋದರೆ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳಬೇಕು, ಜೊತೆಗೆ ಸಮಯ, ಹಣ ವ್ಯರ್ಥವಾಗುತ್ತದೆ" ಎಂದು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ರೈಲನ್ನೇ ನಂಬಿಕೊಂಡಿದ್ದಾರೆ.

ಮೈಸೂರಿನಿಂದ ಬೆಂಗಳೂರು ಮಧ್ಯೆ ಸಾಕಷ್ಟು ನಿಲ್ದಾಣಗಳು ಬರಲಿದ್ದು, ನಿತ್ಯ ನೂರಾರು ಮಂದಿ ಸಾಂಸ್ಕೃತಿಕ ನಗರಿಯಿಂದ ಉದ್ಯಾನ ನಗರಿಗೆ ಸಂಚರಿಸುತ್ತಿರುತ್ತಾರೆ.

ವಿಧಾನಸೌಧ ಇನ್ನಿತರೆ ಸರ್ಕಾರಿ ಕೆಲಸಕ್ಕೆ ಬರುವವರು, ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಸಾಕಷ್ಟು ಮಂದಿ ಇದ್ದು ಅವರೆಲ್ಲರೂ ರೈಲನ್ನೇ ಅವಲಂಬಿಸಿದ್ದಾರೆ. ಆದರೆ ಅಷ್ಟು ಮಂದಿಗೂ ರೈಲ್ವೆ ವೇಳಾ ಪಟ್ಟಿ ಬದಲಾಗಿರುವುದು ಕಿರಿ ಕಿರಿ ಉಂಟು ಮಾಡುತ್ತಿದೆ.

ಬೆಂಗಳೂರು-ಮೈಸೂರು ರೈಲಿನ ಹೆಸರು ಬದಲಾಯಿಸಲು ಟ್ವಿಟ್ಟರ್ ಅಭಿಯಾನಬೆಂಗಳೂರು-ಮೈಸೂರು ರೈಲಿನ ಹೆಸರು ಬದಲಾಯಿಸಲು ಟ್ವಿಟ್ಟರ್ ಅಭಿಯಾನ

ಕೇವಲ ಒಂದೆರೆಡು ದಿನವಾದರೆ ಪ್ರಯಾಣಿಕರಿಗೂ ಏನೋ ತೊಂದರೆಯಾಗಿದೆ ಸರಿಯಾಗುತ್ತದೆ ಬಿಡು ಎಂದು ಸುಮ್ಮನಿರುತ್ತಾರೆ. ನಿತ್ಯವೂ ಅದೇ ಗೋಳಾಗಿದೆ. ನಿತ್ಯ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಸಾಕಷ್ಟಿದೆ. ಕೆಲವರು ಸ್ವಂತ ಮನೆ ಹೊಂದಿರುತ್ತಾರೆ, ಇನ್ನೂ ಕೆಲವರು ಬೆಂಗಳೂರಿನ ಟ್ರಾಫಿಕ್ ತಲೆಬಿಸಿಯೇ ಬೇಡ ಎಂದು ಮೈಸೂರಿನಲ್ಲಿ ಮನೆ ಮಾಡಿರುತ್ತಾರೆ. ಇನ್ನೂ ಕೆಲವರಿಗೆ ಮಕ್ಕಳ ಶಿಕ್ಷಣ, ಕುಟುಂಬದವರ ದೃಷ್ಟಿಯಿಂದ ಅಲ್ಲಿ ವಾಸವಿದ್ದುಕೊಂಡು ನಿತ್ಯ ಬೆಂಗಳೂರಿಗೆ ನೌಕರಿಗೆಂದು ಬರುತ್ತಾರೆ.

ಬೆಂಗಳೂರು ಮೈಸೂರು ನಡುವಿನ ರೈಲು ಹಳಿ ವಿದ್ಯುದ್ದೀಕರಣ ಹಾಗೂ ಡಬ್ಲಿಂಗ್ ಮುಕ್ತಾಯಗೊಂಡಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯನ್ನು ಆಗಸ್ಟ್ 15ರಿಂದ ಅನ್ವಯ ಆಗುವಂತೆ ಬದಲು ಮಾಡಲಾಗಿದೆ. ಆದರೆ, ರೈಲು ಸಂಖ್ಯೆ, ರೈಲು ನಿಲುಗಡೆ ಮಾಡುವ ನಿಲ್ದಾಣ ಹಾಗೂ ಅವುಗಳು ಸಂಚರಿಸುವ ಮಾರ್ಗಗಳಲ್ಲಿ ಮಾತ್ರ ಯಾವುದೇ ರೀತಿಯ ಬದಲಾವಣೆ ಆಗಿಲ್ಲ ಎಂದು ಪ್ರಯಾಣಿಕ ಮುರುಗೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಕಚೇರಿಗೆ ಸಮಯಕ್ಕೆ ತಲುಪಲು ಆಗುತ್ತಿಲ್ಲ

ಕಚೇರಿಗೆ ಸಮಯಕ್ಕೆ ತಲುಪಲು ಆಗುತ್ತಿಲ್ಲ

ಈ ನೌಕರರಿಗೆ ಸರಿಯಾದ ಸಮಯಕ್ಕೆ ಕಚೇರಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ತರಗತಿಗಳನ್ನು ಅಟೆಂಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಆರೋಗ್ಯ ತಪಾಸಣೆಗೆಂದು ಬೆಂಗಳೂರಿಗೆ ಬರುವವರನ್ನಂತೂ ಕೇಳಲೇಬೇಡಿ, ನಿತ್ಯ ರೈಲಿಗೆ ಹಿಡಿ ಶಾಪ ಹಾಕುತ್ತಿರುತ್ತಾರೆ. ವೈದ್ಯರೊಂದಿಗೆ ಅಪಾಯಿಂಟ್‌ಮೆಂಟ್ ಇದ್ದರೆ ಆ ಸಮಯಕ್ಕೆ ಅವರು ಆಸ್ಪತ್ರೆ ತಲುಪಲು ಸಾಧ್ಯವಾಗದೆ ಮರುದಿನಕ್ಕೆ ಮತ್ತೆ ಸಮಯ ನಿಗದಿ ಮಾಡಿಕೊಂಡು ಬಂದಿರುವ ಉದಾಹರಣಗಳೂ ಇವೆ.

ಯಾವ ಸಮಯದ ರೈಲಿನಿಂದ ಹೆಚ್ಚು ತೊಂದರೆ

ಯಾವ ಸಮಯದ ರೈಲಿನಿಂದ ಹೆಚ್ಚು ತೊಂದರೆ

ಮೈಸೂರಿನಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಪ್ರಯಾಣಿಕರಿಗೆ ಮುಖ್ಯವಾಗಿ ತೊಂದರೆಯಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಮೈಸೂರಿಗೆ ಹಿಂದಿರುಗುವವರಿಗೂ ತೊಂದರೆಯಾಗುತ್ತಿದೆ. ಇದೆಲ್ಲವೂ ರೈಲ್ವೆ ವೇಳಾಪಟ್ಟಿ ಬದಲಾವಣೆಯಾದ ಬಳಿಕ ಉಂಟಾಗಿರುವ ಸಮಸ್ಯೆಯಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಬೆಳಗಿನ ಜಾವ 5.50ಕ್ಕೆ ಪ್ಯಾಸೆಂಜರ್ ರೈಲು ಹೊರಡಲಿದ್ದು ಅದು ಬೆಂಗಳೂರನ್ನು ಬೆಳಗ್ಗೆ 9 ಗಂಟೆಗೆ ಬಂದು ತಲುಪಬೇಕು. ಆದರೆ ಮಧ್ಯದಲ್ಲಿ ಅರ್ಧ ಗಂಟೆ, ತಾಸುಗಟ್ಟಲೆ ನಿಲ್ಲಿಸುವ ಕಾರಣ 1ರಿಂದ 1.30 ತಾಸು ರೈಲು ತಡವಾಗಿ ಬೆಂಗಳೂರು ತಲುಪುತ್ತಿದ್ದು, ರೈಲ್ವೆ ನಿಲ್ದಾಣದಿಂದ ಕಚೇರಿ ತಲುಪುವಷ್ಟರಲ್ಲಿ 2 ಗಂಟೆಗೂ ಹೆಚ್ಚು ತಡವಾಗುತ್ತಿದೆ.

ಇನ್ನು ಸಂಜೆ 5.20ಕ್ಕೆ ಸಂಗೊಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟು ಮೈಸೂರನ್ನು 8.20ಕ್ಕೆ ತಲುಪಬೇಕಾದ ರೈಲು ಕನಿಷ್ಠ 1 ಗಂಟೆ ತಡವಾಗಿ ತಲುಪುತ್ತಿದೆ. ಇದರಿಂದ ಮೈಸೂರು ಹೊರವಲಯದಲ್ಲಿ ಮನೆ ಇರುವವರು ಮನೆಗೆ ತಲುಪುವುದೇ ಕಷ್ಟವಾಗಿದೆ. ಹೀಗಾಗಿ ನಿಗದಿತ ಸಮಯಕ್ಕೆ ರೈಲು ತಲುಪುವಂತಾಗಬೇಕು. ರೈಲು ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಎನ್ನುವುದು ರೈಲ್ವೆ ಪ್ರಯಾಣಿಕರ ಒತ್ತಾಯವಾಗಿದೆ.

ಮೈಸೂರು-ಬೆಂಗಳೂರು ನಡುವೆ ಓಡಾಡುವ ರೈಲುಗಳೆಷ್ಟು?

ಮೈಸೂರು-ಬೆಂಗಳೂರು ನಡುವೆ ಓಡಾಡುವ ರೈಲುಗಳೆಷ್ಟು?

ಕಣ್ಣೂರು-ಮೈಸೂರು-ಬೆಂಗಳೂರು
ಕಾರವಾರ-ಮೈಸೂರು-ಬೆಂಗಳೂರು
ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು
ಚಾಮುಂಡಿ ಎಕ್ಸ್‌ಪ್ರೆಸ್
ಮಾಲ್ಗುಡಿ ಎಕ್ಸ್‌ಪ್ರೆಸ್‌
ಚಾಮರಾಜನಗರ- ಬೆಂಗಳೂರು
ಟಿಪ್ಪು ಎಕ್ಸ್‌ಪ್ರೆಸ್
ಬಸವ ಎಕ್ಸ್‌ಪ್ರೆಸ್
ಶತಾಬ್ದಿ
ಭಾಗ್ಮತಿ
ಹಂಪಿ ಎಕ್ಸ್‌ಪ್ರೆಸ್
ಮೈಸೂರು-ಬೆಂಗಳೂರು ರಾಜ, ರಾಣಿ ಎಕ್ಸ್‌ಪ್ರೆಸ್
ಮೈಸೂರು ಪ್ಯಾಸೆಂಜರ್ ರೈಲು
ಗೋಲ್ ಗುಂಬಜ್
ಮೈಸೂರು-ಅಜ್ಮರ್ ಎಕ್ಸ್‌ಪ್ರೆಸ್
ಕಾವೇರಿ ಎಕ್ಸ್‌ಪ್ರೆಸ್
ನೈಟ್ ಕ್ವೀನ್ ಪ್ಯಾಸೆಂಜರ್ ರೈಲು

ರೈಲು ತಡ: ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವುದೇನು?

ರೈಲು ತಡ: ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವುದೇನು?

ಯಾವುದೇ ಕಾರಣಕ್ಕೂ ರೈಲು 10-15ನಿಮಿಷಕ್ಕಿಂತ ಹೆಚ್ಚು ತಡವಾಗುವುದಿಲ್ಲ, ನಾವು ಮಾನಿಟರ್ ಮಾಡುತ್ತಿರುತ್ತೇವೆ. ತುಂಬಾ ದೂರದಿಂದ ಆಗಮಿಸುವ ರೈಲುಗಳು ಸಾಮಾನ್ಯವಾಗಿ 15-30 ನಿಮಿಷ ತಡವಾಗುತ್ತದೆ ಎಂದು ಹುಬ್ಬಳ್ಳಿ ರೈಲ್ವೆ ಘಟಕದ ಸಿಪಿಆರ್‌ಓ ವಿಜಯಾ ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ರೈಲು ತಡವಾಗುವ ಕುರಿತು ಮೊದಲೇ ಮಾಹಿತಿ ದೊರೆತರೆ ವೆಬ್‌ಸೈಟ್‌ನಲ್ಲೂ ನೀಡಲಾಗುತ್ತದೆ. ನಿಲ್ದಾಣದಲ್ಲಿಯೇ ಅನೌನ್ಸ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

English summary
Higher Number Of People are Using Train Instead of Bus and other Transport Facilities, Between Mysuru and Bengaluru. But now they are facing some problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X