ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭ

By Nayana
|
Google Oneindia Kannada News

Recommended Video

ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭ | Oneindia Kannada

ಬೆಂಗಳೂರು, ಜು.24: ಎಲ್ಲರೂ ಕಾತುರದಿಂದ ಕಾಯುತ್ತಿರುವ ಮೈಸೂರು-ಬೆಂಗಳೂರು ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ. 6500 ಕೋಟಿ ರೂ ವೆಚ್ಚದ ಆರು ಪಥಗಳ ರಸ್ಎ ಕಾಮಗಾರಿಗಾಗಿ ಈಗಾಗಲೇ ಶೇ.63 ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಶೇ.80ರಷ್ಟು ಭೂಸ್ವಾಧೀನ ಬಳಿಕ ಕಾಮಗಾರಿ ಆರಂಭವಾಗಬೇಕು.ಉಳಿದ ಶೇ.17 ಭೂಸ್ವಾಧೀನ ಶೀಘ್ರದಲ್ಲಿ ಪೂರ್ಣ ಮಾಡಲಿದ್ದೇವೆ ಎಂದು ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿ: ನಿತಿನ್ ಗಡ್ಕರಿ ಶಂಕುಸ್ಥಾಪನೆಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿ: ನಿತಿನ್ ಗಡ್ಕರಿ ಶಂಕುಸ್ಥಾಪನೆ

ವಿದ್ಯುತ್ ಕಂಬ , ರಸ್ತೆ ಇಕ್ಕೆಲಗಳಲ್ಲಿರುವ ಯುಟಿಲಿಟಿ ಶಿಫ್ಟ್‌ 20 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ , ರಸ್ತೆ ಗುಂಡಿ ಮುಚ್ಚಲು ಪ್ರತಿ ಕಿ.ಮೀಗೆ 25 ಸಾವಿರ ರೂ ಬಿಡುಗಡೆ ಮಾಡಲಾಗಿದೆ. ಮಳೆಗಾಲ ಇರುವುದರಿಂದ ಟಾರ್‌ ಹಾಕಿದರೆ ಕಿತ್ತು ಬರುತ್ತದೆ. ಮಳೆ ನಿಂತ ಬಳಿಕ ಮುಚ್ಚಲಾಗುತ್ತದೆ.

Bengaluru-Mysuru six lane road work will kick start in November

ಚಾರ್ಮಾಡಿ ಘಾಟ್‌ ಕಾಮಗಾರಿಗೆ ಕೇಂದ್ರ ಸರ್ಕಾರಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಘಟ್‌ಗೆ ಖುದ್ದು ಪರಿಶೀಲನೆ ಮಾಡಿದ್ದೇನೆ ಎಂದರು. ಮೈತ್ರಿ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂಬ ಮಾಜಿ ಶಾಸಕ ರಾಜಣ್ಣ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ಸರ್ಕಾರ ಇದ್ದಷ್ಟು ದಿನ ನಡೆಯಲಿ ಬಿಡಿ ಎಂದಷ್ಟೇ ಹೇಳಿದರು.

English summary
Most awaited Bengaluru mysuru six lane road work is going to start from November. Remaining 17 percent of land acquire will be done shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X