ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 03: " ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ಹತ್ತು ಪಥಗಳ ನಿರ್ಮಾಣ ಕಾರ್ಯ ಫೆಬ್ರವರಿ 2022ರಲ್ಲಿ ಮುಕ್ತಾಯವಾಗಲಿದೆ" ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಈ ಕುರಿತು ಉತ್ತರ ನೀಡಿದರು. "6 ಪಥದ ಹೆದ್ದಾರಿಯ ಜೊತೆಗೆ ಎರಡೂ ಕಡೆ ಎರಡು ಪಥದ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ" ಎಂದರು.

ಧಾರವಾಡದಲ್ಲಿ ರಸ್ತೆ ಅಪಘಾತ; ವರದಿ ಕೇಳಿದ ಸುಪ್ರೀಂಕೋರ್ಟ್ ಧಾರವಾಡದಲ್ಲಿ ರಸ್ತೆ ಅಪಘಾತ; ವರದಿ ಕೇಳಿದ ಸುಪ್ರೀಂಕೋರ್ಟ್

"ಮೊದಲ ಪ್ಯಾಕೇಜ್‌ನಲ್ಲಿ ಬೆಂಗಳೂರು-ನಿಢಘಟ್ಟ ತನಕ ಕಾಮಗಾರಿ ನಡೆಯಲಿದೆ. 2190 ಕೋಟಿ ಪ್ಯಾಕೇಜ್‌ನಲ್ಲಿ ಶೇ 67.5ರಷ್ಟು ಕಾಮಗಾರಿ ಪೂರ್ಣಗೊಂಡಿದೆ" ಎಂದು ಸಚಿವರು ವಿವರಣೆ ನೀಡಿದರು.

ಬೆಂಗಳೂರು, ಮಂಗಳೂರು ನಡುವೆ ಚತುಷ್ಪಥ ರಸ್ತೆ,ಹೊಸ ಟೆಂಡರ್ ಬೆಂಗಳೂರು, ಮಂಗಳೂರು ನಡುವೆ ಚತುಷ್ಪಥ ರಸ್ತೆ,ಹೊಸ ಟೆಂಡರ್

Bengaluru-Mysuru 10 Lane Highway To Complete In February 2022

"ಎರಡನೇ ಪ್ಯಾಕೇಜ್‌ನಲ್ಲಿ 2283 ಕೋಟಿ ರೂ.ಗಳಲ್ಲಿ ನಿಢಘಟ್ಟ-ಮೈಸೂರು ನಡುವೆ ಕಾಮಗಾರಿ ನಡೆಯಲಿದೆ. ಈ ಪ್ಯಾಕೇಜ್‌ನಲ್ಲಿ ಶೇ 50.5ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಫೆಬ್ರವರಿ 2022ಕ್ಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದರು.

ಕೇಂದ್ರ ಬಜೆಟ್ 2021; 11 ಸಾವಿರ ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಕೇಂದ್ರ ಬಜೆಟ್ 2021; 11 ಸಾವಿರ ಕಿ. ಮೀ. ರಾಷ್ಟ್ರೀಯ ಹೆದ್ದಾರಿ

Recommended Video

ಒಂಟಿ ಸಲಗಕ್ಕೆ ಸಾಥ್ ಕೊಟ್ಟಿದ್ದು ಯಾರು ಗೊತ್ತಾ?? | Oneindia Kannada

"ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಎರಡೂ ಪ್ಯಾಕೇಜ್‌ಗಳ ಕಾಲಾವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ" ಗೋವಿಂದ ಕಾರಜೋಳ ವಿವರಿಸಿದರು.

English summary
PWD minister of Karnataka Govinda Karajola said that Bengaluru-Mysuru 10 lane highway project will complete in February 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X