ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರದಲ್ಲಿ ಅವಳಿ ಮಕ್ಕಳನ್ನು ಹೆತ್ತ ಉಕ್ಕಿನ ಮಹಿಳೆ ಶರ್ಮಿಳಾ

|
Google Oneindia Kannada News

ಬೆಂಗಳೂರು, ಮೇ 13: ಮಣಿಪುರದ ಉಕ್ಕಿನ ಮಹಿಳೆ, ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಮಲ್ಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ 'ಮದರ್ಸ್ ಡೇ' ದಿನದಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಭಾನುವಾರದಂದು ಬೆಳಗ್ಗೆ 9.21 ಕ್ಕೆ 46 ವರ್ಷ ವಯಸ್ಸಿನ ಶರ್ಮಿಳಾ ಅವರು ಸಿ ಸೆಕ್ಷನ್ ಮೂಲಕ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಐರೋಮ್ ಶರ್ಮಿಳಾ ಹೊಸ ರಾಜಕೀಯ ಪಕ್ಷ ಘೋಷಣೆ ಐರೋಮ್ ಶರ್ಮಿಳಾ ಹೊಸ ರಾಜಕೀಯ ಪಕ್ಷ ಘೋಷಣೆ

ಇರೋಮ್ ಅವರ ಪತಿ ಗೋವಾ ಮೂಲದ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೊ ಅವರು ತಮ್ಮ ಮಕ್ಕಳಿಗೆ ನಿಕ್ಸ್ ಸಖಿ ಹಾಗೂ ಆಟೋಮನ್ ತಾರಾ ಎಂದು ಹೆಸರಿಟ್ಟಿದ್ದಾರೆ. 2017 ರಲ್ಲಿ ಇಬ್ಬರು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಿದ್ದರು.

Bengaluru : Mother’s Day Special, twin girls for Iron Lady Irom Sharmila

ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಶರ್ಮಿಳಾ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕಾಗಿ ಶರ್ಮಿಳಾ ಅವರ ಮೇಲೆ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದ ಬಳಿಕ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ. ಮುಂದಿನ ವರ್ಷ ಮಣಿಪುರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಆಗಸ್ಟ್ 9 ರಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಶರ್ಮಿಳಾ,ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು.

ನವೆಂಬರ್ 1, 2000ರಂದು ಮಣಿಪುರದ ಇಂಫಾಲ್‌ ವಿಮಾನ ನಿಲ್ದಾಣದ ಸಮೀಪದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನ ಸಾರ್ವಜನಿಕರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಇದನ್ನು ಪ್ರತಿಭಟಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

English summary
Bengaluru : Iron Lady from Manipur Irom Sharmila(46) gave birth to twin girls through C-Section at Cloudnine's Malleswaram branch, Bengaluru. Sharmila and her husband Desmond have named their daughters Nix Sakhi and Autumn Tara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X