ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲಕನ ಬುದ್ಧಿವಾದಕ್ಕೆ ಜನ ಏನಂದ್ರು?

|
Google Oneindia Kannada News

ಬೆಂಗಳೂರು, ಏಪ್ರಿಲ್ 27: " ನೋಡಮ್ಮಾ, ಹೀಗೆಲ್ಲ ಮೈ ಕಾಣುವಂತೆ ಬಟ್ಟೆ ಹಾಕಬಾರದು" ಎಂದು ಬುದ್ಧಿವಾದ ಹೇಳಿದ್ದ ಆಟೋ ಚಾಲಕ ಮತ್ತು ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಪತ್ರಕರ್ತೆಯ ಸುದ್ದಿಯನ್ನು ನೀವು ಓದಿರುತ್ತೀರಿ.

ನಡೆದ ಘಟನಾವಳಿಗಳನ್ನು ನಾವು ಸವಿಸ್ತಾರವಾಗಿ ಜನರ ಮುಂದೆ ಇಟ್ಟಿದ್ದೇವು. ಜನ ಸಾಮಾಜಿಕ ತಾಣ ಮತ್ತು ನಮ್ಮ ವೆಬ್ ತಾಣಕ್ಕೆ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಶೇ, 99 ಕ್ಕೂ ಅಧಿಕ ಜನರು ಆಟೋ ಚಾಲಕನ ಪರವಾಗಿ ನಿಂತಿದ್ದಾರೆ. ಅವುಗಳಲ್ಲಿನ ಟಾಪ್ ಕಮೆಂಟ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.['ಹೀಗೆ ಬಟ್ಟೆ ಹಾಕ್ಕೇಡ' ಅಂತ ಯುವತಿಗೆ ಹೇಳಿದ್ದೇ ತಪ್ಪಾ?]

auto

ನೋಡಿದರೆ ಗೌರವಿಸುವಂತಿರಬೇಕು
ಇಲ್ಲಿ ಬೇರೆ ರಾಜ್ಯದ ಹುಡುಗಿ ಅನ್ನುವ ಮಾತ್ರಕ್ಕೆ ಆಕೆಯದ್ದು ತಪ್ಪು ಅನ್ನುತ್ತಿರುವ ಮಾಧ್ಯಮಗಳು ನಮ್ಮ ರಾಜ್ಯದ ಹುಡುಗಿರು ಮೈ ಪ್ರದರ್ಶನ ಮಾಡಿಕೊಂಡು ಓಡಾಡುವುದರ ಬಗ್ಗೆ ಮಾತನಾಡುವುದಿಲ್ಲ. ಹೆಣ್ಣು ಮಕ್ಕಳ ಹಕ್ಕು, ಅವರಿಗೆ ಸ್ವಾತಂತ್ರ್ಯ ಇಲ್ವಾ ಅವರಿಷ್ಟದ ಬಟ್ಟೆ ಧರಿಸಲು? ಒಳ್ಳೆಯ ಮನಸ್ಸಿನಿಂದ ನೋಡಿ ನಿಮಗೆ ಯಾರು ಅಕ್ಕ ತಂಗಿ ಇಲ್ವಾ? ಈ ಬಗೆಯ ಮಾತುಗಳಿಗೂ ಕಡಿಮೆ ಇಲ್ಲ. ಯಾರು ಮೈ ಪ್ರದರ್ಶನ ಮಾಡಿ ಕೊಂಡು ಓಡಾಡುತ್ತಾರೊ ಅವರೆಲ್ಲರ ಉದ್ದೇಶ ಎಲ್ಲಾ ಗಂಡಸರು ಇವರನ್ನೇ ನೋಡಬೇಕು-Leela Nithya

ಸ್ವಾತಂತ್ರ್ಯ ಇಲ್ಲವೆ?
ಹೆಣ್ಣು ಮಕ್ಕಳ ಡ್ರೆಸ್ ಬಗ್ಗೆ ಕಾಮೆಂಟ್ ಮಾಡುವವರು ಮೊದಲು ತಮ್ಮ ಮನಸ್ಥಿತಿಯನ್ನು ಅರಿತುಕೊಳ್ಳಬೇಕು. ಇವರು ನೋಡುವ ದೃಷ್ಟಿ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ.-Nagaraja[ಮಹಾನಗರಕ್ಕೆ ವೇಷ ಹೊಂದಿಕೆಯಾಗ್ದಿದ್ರೆ ಅಷ್ಟೇ ಕತೆ!]

ಬುದ್ಧಿವಾದ ತಪ್ಪೆ?
ಬುದ್ಧಿವಾದ ಹೇಳಿದರೆ ಅದನ್ನು ತಪ್ಪು ತಿಳಿದುಕೊಂಡು ಆ ವ್ಯಕ್ತಿಯ ಬಗ್ಗೆ ಪೋಸ್ಟ್ ಮಾಡುತ್ತೀರಾ.. ಅರೆಬೆತ್ತಲೆ ಬಟ್ಟೆ ತೊಡುವುದು ತುಂಡುಡುಗೆ ತೊಡುವುದು ನಿಮಗೆ ಸ್ವಾತಂತ್ರ್ಯ ಎನಿಸಿದರೆ ಆ ವ್ಯಕ್ತಿಗೂ ತನ್ನ ಅಭಿಪ್ರಾಯ ತಿಳಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ... ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹೆಣ್ಣಿನ ಮೇಲಿನ ಗೌರವ ಕಡಿಮೆಯಾಗುತ್ತಿದೆ ಅಂದರೆ ಅದಕ್ಕೆ ಇಂಥ ಘಟನೆಗಳೇ ಕಾರಣ-Sunil Hassan

ಹೆಣ್ಣಿನ ಬಗ್ಗೆ ಕಾಳಜಿ
ಆಟೋ ಚಾಲಕ ಹೇಳಿದ್ದು ಸರಿಯಾಗಿದೆ. ಹೆಣ್ಣನ್ನು ಗೌರವಿಸುವ ಯಾರೇ ಆಗಲಿ ಆಕೆಯ ಬಗ್ಗೆ ಕಾಳಜಿ ಮಾತಾಡ್ತಾರೆ. ಮಾಡ್ರನ್ ಡ್ರೆಸ್ ಹಾಕಬಾರದು ಅಂಥ ಯಾರೂ ಹೇಳಲ್ಲ. ಅದು ಮಿತಿಯಲ್ಲಿ ಇದ್ದರೆ ಉತ್ತಮ.-Ramesh M Sidlaghatta

ಆಮೇಲೆ ಕೂಗಾಡ್ತಾರೆ
ಈ ತರಹದ ಡ್ರೆಸ್ ಮಾಡಿಕೊಂಡು ನಂತರ ರೇಪ್ ಮಾಡಿದ್ರು ಅಂತಾ ಕೂಗಾಡುತ್ತಾರೆ. ಆದರೆ ಇಂಥವರ ತಪ್ಪಿಗೆ ಬಡವರ ಮನೆಯ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದು ದುರ್ದೈವ-Manju Ambiga Hnr

ತಾವೇ ತಿಳಿದುಕೊಳ್ಳಬೇಕು
ಇವತ್ತಿನ ಪರಿಸ್ಥಿತಿಯಲ್ಲಿ ಯಾರಿಗೂ ಸಲಹೆ ನೀಡುವುದು ಸರಿಯಲ್ಲ. ಜನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಎಂದು ಕೂಗಾಡುವ ಹೆಣ್ಣುಮಕ್ಕಳು, ಅವರೇ ತಿಳಿದುಕೊಂಡು ತಿದ್ದಿಕೊಳ್ಳಬೇಕು. ಪತ್ರಕರ್ತೆ ಅನ್ನೋ ಅಹಂಕಾರ ಇರುವ ಈ ಹೆಣ್ಣುಮಗಳಿಗೆ ಏನು ಹೇಳುವುದು? ವಿದೇಶಿ ಬಟ್ಟೆ, ಧಿರಿಸು ಬಯಸುವ ಈ ಹೆಣ್ಣುಮಕ್ಕಳಿಗೆ ಬುದ್ಧಿ ಹೇಳುವುದು ಕಷ್ಟ. ಅನುಭವಿಸಲಿ ಬಿಡು ಅಂದು ಬಿಡುವುದೇ ಒಳ್ಳೆಯದು-Kannadiga

ಡ್ರೆಸ್ ಕೋಡ್ ಅರ್ಥ ಮಾಡಿಕೊಳ್ಳಲಿ
ಆಧುನಿಕ ಸಮಾಜದ ಹೆಸರಿನಲ್ಲಿ ಮನಸೋಯಿಚ್ಛೆ ವರ್ತನೆ ಸಲ್ಲದು. ಬೀದಿಯಲ್ಲೆಲ್ಲಾ ಬಟ್ಟೆ ಬಿಚ್ಚಿಕೊಂಡು ಓಡಾಡುವುದನ್ನು ಸಮರ್ಥಿಸಿಕೊಳ್ಳಲು ಹೋಗಬಾರದು. ಡ್ರೆಸ್ ಕೋಡನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪಾಲಿಸುವುದು ಒಳ್ಳೆಯದು-Vishwamanava

English summary
Letters to the editor : Oneindia Kannada readers have reacted to the story on Bengaluru auto driver suggesting an young girl to wear properly. Readers say, one should honor the driver's statement and wear dress decently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X