ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಧ್ರ ಮೂಲದ ಕಿಲಾಡಿ ಕಿಡ್ನಾಪರ್ಸ್ ಅರೆಸ್ಟ್: 3 ಕೋಟಿ ನಕಲಿ ನೋಟು ವಶ

|
Google Oneindia Kannada News

ಬೆಂಗಳೂರು, ಜ. 29: ಮಕ್ಕಳು ಆಟ ಆಡುವ ನಕಲಿ ನೋಟುಗಳ ಕಂತೆಗಳನ್ನು ತೋರಿಸಿ ಮನಿ ಡಬ್ಲಿಂಗ್ ಹೆಸರಿನಲ್ಲಿ ಶ್ರೀಮಂತರಿಗೆ ಗಾಳ ಹಾಕಿ, ಬಳಿಕ ಅವರನ್ನು ಅಪಹರಿಸಿ ಸುಲಿಗೆ ಮಾಡುತ್ತಿದ್ದ ಆಂಧ್ರದ ಸುಲಿಗೆಕೋರ ಗ್ಯಾಂಗ್ ಅನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ರೌಡಿಶೀಟರ್, ಸಿಟಿ ಗ್ಯಾಂಗ್ ಲೀಡರ್ ರಾಜಾರೆಡ್ಡಿ, ಬಾಲಾಜಿ, ವೆಂಕಟೇಶ್ ಮತ್ತು ರಾಜೇಶ್ ಬಂಧಿತ ಅರೋಪಿಗಳು. ಐದು ಲಕ್ಷ ರೂ. ನಗದು, ಮೂರು ಕೋಟಿ ರೂ. ನಕಲಿ ನೋಟು ನಕಲಿ ಚಿನ್ನ ವಶಕ್ಕೆ ಪಡೆದಿದ್ದಾರೆ.

ಕ್ರೈಂ ರೌಂಡಪ್: ಡ್ರಗ್ ತಯಾರಿ ವಿದೇಶಿ ಪ್ರಜೆ ಬಂಧನ, ಯುವತಿ ಕಿಡ್ನಾಪ್ ಕೇಸ್ಕ್ರೈಂ ರೌಂಡಪ್: ಡ್ರಗ್ ತಯಾರಿ ವಿದೇಶಿ ಪ್ರಜೆ ಬಂಧನ, ಯುವತಿ ಕಿಡ್ನಾಪ್ ಕೇಸ್

ಆಂಧ್ರದ ಗ್ಯಾಂಗ್ :

ರಾಜಾರೆಡ್ಡಿ ಆಂಧ್ರದ ರೌಡಿ ಶೀಟರ್. ಸಿಕ್ಕಿ ಬಿದ್ದರೆ ತಪ್ಪಿಸಿಕೊಳ್ಳಲು ಸಂಘಟನೆ, ಪತ್ರಕರ್ತ ಎಂದು ನಾಟಕವಾಡುತ್ತಿದ್ದ. ಈತ ತನ್ನ ಪಟಾಲಂ ಕಟ್ಟಿಕೊಂಡು ಮನಿ ಡಬ್ಲಿಂಗ್ ಮಾಡಿಕೊಡವುದಾಗಿ ಹಣ ಇರುವರನ್ನು ನಂಬಿಸುತ್ತಿದ್ದ. ಒಂದು ಲಕ್ಷ ರೂ. ಅಸಲಿ ಹಣ ಕೊಟ್ಟರೆ, ಬ್ಲಾಕ್ ಮನಿ ಮೂರು ಲಕ್ಷ ರೂ. ಕೊಡ್ತೀವಿ ಎಂದು ನಂಬಿಸುತ್ತಿತ್ತು ಈ ಗ್ಯಾಂಗ್. ಯಾರಾದರೂ ಆಸಕ್ತಿ ತೋರಿದರೆ, ನಕಲಿ ನೋಟಿನ ಮೇಲೆ ಅಸಲಿ ನೋಟು ಜೋಡಿಸಿ ತೋರಿಸುತ್ತಿದ್ದರು. ಅಸಲಿ ನೋಟು ನೋಡಿ ಮನಿ ಡಬ್ಲಿಂಗ್ ವಹಿವಾಟಿಗೆ ಕೈ ಹಾಕಿದರೆ, ಅಸಲಿ ಹಣ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಹೀಗೆ ಸಿಕ್ಕ ಸಿಕ್ಕವರ ಬಳಿ ಸುಲಿಗೆ ಮಾಡುತ್ತಿದ್ದರು.

Bengaluru: Money Doubling Gang who kidnapping rich people arrested

ಕಳೆದ ಅಕ್ಟೋಬರ್‌ನಲ್ಲಿ ನಿವೇಶನ ತೋರಿಸುವುದಾಗಿ ನಂಬಿಸಿ ಇಬ್ಬರನ್ನು ಅಪಹರಣ ಮಾಡಿ ಹತ್ತು ಲಕ್ಷ ರೂ. ಸುಲಿಗೆ ಮಾಡಿದ್ದರು. ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಪಹರಣಕ್ಕೆ ಒಳಗಾದ ವ್ಯಕ್ತಿಗಳು ಹಣ ಕೊಟ್ಟು ವಾಪಸು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನಾಧರಿಸಿ ತನಿಖೆ ನಡೆಸಿದ ಪೊಲೀಸರು ಆಂಧ್ರ ಪ್ರದೇಶದ ಚೋರ್ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.

Recommended Video

Congress ಪಕ್ಷ ಬಿಡೋಕೆ ಕಾರಣ ಯಾರೆಂದು ಹೇಳಿದ CM Ibrahim | Oneindia Kannada

ಮನಿ ಡಬ್ಲಿಂಗ್, ಹಳೇ ಚಿನ್ನದ ಕಾಯಿನ್ ಮಾರಾಟದ ಸೋಗಿನಲ್ಲಿ ವಂಚನೆ ಮಾಡಿದ್ದು, ಅನೇಕರಿಗೆ ನಾಮ ಹಾಕಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಮನಿ ಡಬ್ಲಿಂಗ್ ಮಾಡ್ತೀವಿ ಎಂದು ಯಾರಾದರೂ ನಂಬಿಸಿದರೆ ಸಾರ್ವಜನಿಕರು ನಂಬಬಾರದು. ಪೊಲೀಸರಿಗೆ ಮಾಹಿತಿ ನೀಡಬೇಕು. ಇನ್ನು ಅಮೃತಹಳ್ಳಿ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ಕಿಡ್ನಾಪ್ ಗ್ಯಾಂಗ್ ನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಅನೂಪ್ ಶೆಟ್ಟಿ ಪೊಲೀಸರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ.

English summary
Amruthalli Police arrest money doubling gang who kidnapping rich people. Seized Rs 5 lakh and Rs 3 crore fake notes. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X