ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಿಷನ್ 2022: ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಡಿ. 30: ಬೆಂಗಳೂರು ಮಿಷನ್ 2022 ಕಾರ್ಯ ಪ್ರಗತಿಯಲ್ಲಿದೆ ಎಂದು ತೋರಿಸಲು ರಾಜ್ಯ ಸರ್ಕಾರವು ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಕೆರೆಗಳ ಪಟ್ಟಿಯನ್ನು ಪ್ರಕಟಿಸಿದೆ. ಸುಮಾರು 25 ಕೆರೆಗಳ ಪುನಶ್ಚೇತನ ಕಾರ್ಯ ಜಾರಿಯಲ್ಲಿದೆ ಎಂದು ತೋರಿಸಿದೆ. ಯಾವುದೇ ಹೊಸ ಕೆರೆಗಳನ್ನು ಹೊಸ ಯೋಜನೆಯ ಪಟ್ಟಿಯಲ್ಲಿ ಸೇರಿಸಿಲ್ಲ.

ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲು ಪಟ್ಟಿ ಮಾಡಲಾಗಿರುವ ಕೆರೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಅಧಿಕಾರಿಗಳು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

207 ಕೆರೆಗಳಿಗೆ ಸಿಸಿಟಿವಿ ಅಳವಡಿಸಲಿದೆ ಬಿಬಿಎಂಪಿ207 ಕೆರೆಗಳಿಗೆ ಸಿಸಿಟಿವಿ ಅಳವಡಿಸಲಿದೆ ಬಿಬಿಎಂಪಿ

ಹೊರಮಾವು ಹಾಗೂ ಗಂಗಶೆಟ್ಟಿ ಕೆರೆಗಳ ಪುನಶ್ಚೇತನ ಕಾರ್ಯಕ್ಕಾಗಿ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ 22ರೊಳಗೆ ಈ ಯೋಜನೆ ಪೂರ್ಣಗೊಳಿಸಬೇಕಾಗಿದೆ. ವಿಭೂತಿಪುರ ಕೆರೆ ಅಭಿವೃದ್ಧಿಗೆ ಮಾರ್ಚ್ 2022 ಕೊನೆ ದಿನಾಂಕವಾಗಿದೆ.

Bengaluru Mission 2022: BBMP lists lakes where works are under way

ಬೆಳ್ಳಂದೂರು ಹಾಗೂ ವರ್ತೂರು ಕೆರೆ ಬಿಟ್ಟರೆ ಮಿಕ್ಕ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದ ಕಾಮಗಾರಿ ಅಗತ್ಯವಿಲ್ಲ. ಹಲವು ಕೆರೆಗಳಲ್ಲಿ ಕಸದ ರಾಶಿ ತುಂಬಿವೆ, ಒತ್ತುವರಿ ಸಮಸ್ಯೆ ಕೂಡಾ ಕಂಡು ಬಂದಿದೆ ಎಂದು ಅಧಿಕಾರಿ ಹೇಳಿದರು.

ಡ್ರೋಣ್ ಕೇವಲ ನಿಗಾ ಇಡುವುದಲ್ಲ ಕೆರೆಗಳನ್ನೂ ಸ್ವಚ್ಛ ಮಾಡುತ್ತೆಡ್ರೋಣ್ ಕೇವಲ ನಿಗಾ ಇಡುವುದಲ್ಲ ಕೆರೆಗಳನ್ನೂ ಸ್ವಚ್ಛ ಮಾಡುತ್ತೆ

ಸರ್ಕಾರ ಪಟ್ಟಿ ಮಾಡಿರುವ ಕೆರೆಗಳು:
ಕೋನಪ್ಪನ ಅಗ್ರಹಾರ, ಜೆಂಕೆನಹಳ್ಳಿ, ಗುಂಜೂರ್ ಪಾಳ್ಯ, ಬೈರಸಂದ್ರ(ವಾರ್ಡ್ 58), ಹೂಡಿ ಗಿಡ್ಡನಕೆರೆ, ತಲಘಟ್ಟಪುರ, ಚೊಕ್ಕಬಸ್ತಿ, ಪುಟ್ಟೇನಹಳ್ಳಿ, ಗೌಡನಪಾಳ್ಯ, ಕೆಂಬತ್ತಹಳ್ಳಿ, ದೇವಸಂದ್ರ, ಮಹದೇವಪುರ-2, ಯೆಲೇನಹಳ್ಳಿ, ಕಗ್ಗದಾಸನಪುರ, ಬಸಾಪುರ-2, ಕಮ್ಮನಹಳ್ಳಿ, ವಸಂತಪುರ, ಸುಬ್ಬರಾಯನ ಕೆರೆ(ಗೊಟ್ಟಿಗೆರೆ), ನಾಗೇಶ್ವರ ನಾಗೇನಹಳ್ಳಿ, ಹೊರಮಾವು, ಗಂಗಶೆಟ್ಟಿ ಕೆರೆ, ವಿಭೂತಿಪುರ ಕೆರೆ

Recommended Video

ಬೆಂಗಳೂರು: 'ಗ್ರಾ.ಪಂ ಮಟ್ಟದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿದೆ'-ಆರ್.ಆಶೋಕ್ | Oneindia Kannada

ಕೆರೆ ಹೂಳೆತ್ತುವುದು, ಕೆರೆ ಏರಿ ಸರಿಪಡಿಸುವುದು, ದ್ವೀಪ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಕೆರೆ ಸುತ್ತಾ ಬೇಲಿ ಹಾಕುವುದು, ಕಸ ಹಾಕಲು ಪ್ರತ್ಯೇಕ ಕಸದ ಡಬ್ಬಿ ಸ್ಥಾಪನೆ, ವಾಕಿಂಗ್ ಪಾಥ್, ಸುತ್ತಾ ಪಾರ್ಕ್ ನಿರ್ಮಾಣ ಹೀಗೆ ವಿವಿಧ ಕಾಮಗಾರಿಯನ್ನು ಎಲ್ಲಾ ಕೆರೆಗಳಲ್ಲಿ ಬಿಬಿಎಂಪಿ ಕೈಗೊಳ್ಳಬೇಕಿದೆ.

English summary
Bruhat Bengaluru Mahanagara Palike has played safe and has listed lakes where works are already underway, for Bengaluru Mission 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X