ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿಲ್ದಾಣಗಳಲ್ಲಿ ಯೂನಿಸೆಕ್ಸ್ ಹೇರ್ ಸಲೂನ್!

|
Google Oneindia Kannada News

ಬೆಂಗಳೂರು, ಫೆಬ್ರವರಿ23 : ಬೆಂಗಳೂರು ಮೆಟ್ರೋ ರೈಲು ನಿಗಮವು ಹೈಟೆಕ್ ಯೂನಿಸೆಕ್ಸ್ ಸಲೂನ್ನ್ನು ಆರಂಭಿಸುತ್ತಿದ್ದು ಮೊದಲ ಸಲೂನ್ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಉದ್ಘಾಟನೆಗೊಳ್ಳುತ್ತಿದೆ.

ಆರು ತಿಂಗಳ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯಂತೆ ಸಲೂನ್ ಸಿದ್ಧಗೊಳ್ಳುತ್ತಿದ್ದು, ಮೆಟ್ರೋ ಹತ್ತುವ ಮೊದಲು ನಿಮ್ಮ ಕೇಶ ವಿನ್ಯಾಸವನ್ನು ನಿಮಗೆ ಬೇಕಾದ ರೀತಿಯಲ್ಲಿ ಬದಲಿಸಿಕೊಳ್ಳಬಹುದು.

ಡೇರಿ ವೃತ್ತ-ನಾಗವಾರ ಮೆಟ್ರೋ ಸುರಂಗ ಮಾರ್ಗ ಕಡಿತ?ಡೇರಿ ವೃತ್ತ-ನಾಗವಾರ ಮೆಟ್ರೋ ಸುರಂಗ ಮಾರ್ಗ ಕಡಿತ?

ಹೈದರಾಬಾದ್ ಮೂಲದ ಸೂಪರ್ ಎಕ್ಸ್ ಪ್ರೆಸ್ ಸಲೂನ್ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಲೂನ್ ತೆಗೆದಿರುತ್ತದೆ. ಮೆಟ್ರೋ ನಿಲ್ದಾಣದೊಳಗೆ ಸಲೂನ್ ಆರಂಭಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ವೇಕಮ್ ವಾಷಿಂಗ್ ಎಂಬುದು ಸಲೂನ್ ನ ಮುಖ್ಯ ಪರಿಕಲ್ಪನೆಯಾಗಿದೆ.

Bengaluru Metro commuters can get haircut on the go at Metro station

ತಲೆಕೂದಲು ಕತ್ತರಿಸಿದ ನಂತರ ವ್ಯಾಕ್ಯುಮ್ ಕ್ಲೀನರ್ ತರಹದ ಉಪಕರಣವನ್ನು ಬಳಸುತ್ತಾರೆ. ಇದರಿಂದ ತಲೆಕೂದಲು ಮತ್ತು ಶೇವಿಂಗ್ ಮಾಡಿಸಿಕೊಂಡ ವ್ಯಕ್ತಿಯ ಬಟ್ಟೆಯಲ್ಲಿ ಅಥವಾ ದೇಹದಮೇಲೆ ಕೂದಲು ಬೀಳುವುದಿಲ್ಲ ಎಂದು ಸಲೂನ್ ನ ಶ್ರೀದೇವಿ ರೆಡ್ಡಿ ತಿಳಿಸಿದ್ದಾರೆ.

ಅಲ್ಲದೆ ಗ್ರಾಹಕರ ಕೂದಲು ಕತ್ತರಿಸಲು ಬಳಸಿದ ಬಾಚಣಿಗೆಯನ್ನು ಆ ವ್ಯಕ್ತಿಗೆ ಉಚಿತವಾಗಿ ನೀಡಲಾಗುತ್ತದೆ. ಆವರಣ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಲು ಈ ಎಲ್ಲಾ ಕ್ರಮವನ್ನು ಅನುಸರಿಸಲಾಗುತ್ತದೆ. ಈ ಸಂಸ್ಥೆಯು ಎಂಜಿ ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ ಮತ್ತು ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣದಲ್ಲಿ ಕೂಡ ಸಲೂನ್ ಆರಂಭಿಸಲು ಗುತ್ತಿಗೆ ಪಡೆದಿದೆ.

ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್

೨೦೧೨ರಲ್ಲಿಯೇ ಬೆಂಗಳೂರಿನ ಮೆ10 ಸಾವಿರ ಪ್ರಯಣಿಕರು ಬಂದು ಹೋಗುತ್ತಾರೆ. ಹೀಗಾಗಿ ಇದು ಉತ್ತಮ ಅವಕಾಶವಾಗಿದೆ. ಕಡಿಮೆ ಸಮಯದಲ್ಲಿ ಕಡಿಮೆ ದರದಲ್ಲಿ ಸಲೂನ್ ಸೇವೆ ನೀಡಲಾಗುತ್ತದೆ.

ಸಲೂನ್ ಗೆ ಬಂದ 8 ಮಂದಿ ಪುರುಷ ಸಿಬ್ಬಂದಿಗಳು ಇರುತ್ತಾರೆ. ಪ್ರತಿ ವ್ಯಕ್ತಿಗೆ ಶೇ.18 ಜಿಎಸ್ ಟಿ ಸೇರಿದಂತೆ 150 ರೂ, ಮಹಿಳೆಯರಿಗೆ ಯಾವುದೇ ವಿನ್ಯಾಸದಲ್ಲಿ ತಲೆಕೂದಲು ಕಟ್ ಮಾಡಿಸಿಕೊಂಡರೂ 200 ರೂ ವಿಧಿಸಲಾಗುತ್ತದೆ ಎಂದು ಶ್ರೀದೇವಿ ರೆಡ್ಡಿ ತಿಳಿಸಿದ್ದಾರೆ.

English summary
Stopping over to trim your beard or have a quick hair cut before boarding your Metro train to work is set to become a reality now. Initially proposed by the BMRCL nearly six months ago, the first hitech unisex salon is set to open shop at Trinity Metro station on February 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X