ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಯರ್‌ಗೆ ದಂಡ ಹಾಕಿದ ಬಿಬಿಎಂಪಿ, ಪ್ರಶಂಸೆಯ ಸುರಿಮಳೆ!

|
Google Oneindia Kannada News

ಬೆಂಗಳೂರು, ಆಗಸ್ಟ್ 04 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಗಂಗಾಬಿಕೆ ಅವರಿಗೆ 500 ರೂ. ದಂಡ ಹಾಕಿದೆ...!. ಪಾಲಿಕೆಯ ತೀರ್ಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಲಾಗುತ್ತಿದೆ.

ನೂತನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಲು ಹೋಗಿದ್ದ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ 500 ರೂ. ದಂಡ ಕಟ್ಟಿದ್ದಾರೆ. ಮೇಯರ್ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ.

ಪ್ಲಾಸ್ಟಿಕ್ ಬಳಸ್ತಿದ್ದೀರಾ ದಂಡ ಕಟ್ಟಲು ಸಿದ್ಧರಾಗಿಪ್ಲಾಸ್ಟಿಕ್ ಬಳಸ್ತಿದ್ದೀರಾ ದಂಡ ಕಟ್ಟಲು ಸಿದ್ಧರಾಗಿ

ಜುಲೈ 30ರಂದು ಗಂಗಾಬಿಕೆ ಯಡಿಯೂರಪ್ಪರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು. ಆಗ ಪ್ಲಾಸ್ಟಿಕ್ ಹೊದಿಕೆ ಇರುವ ಡ್ರೈ ಪ್ರೂಟ್ಸ್ ಬುಟ್ಟಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?

Bengaluru Mayor Fined For Use Of Plastic

ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಆದರೆ, ಮೇಯರ್ ನೀಡಿದ್ದ ಡ್ರೈ ಪ್ರೂಟ್ಸ್‌ ಬುಟ್ಟಿಯನ್ನು ನಿಷೇಧಿತ ಪ್ಲಾಸ್ಟಿಕ್‌ನಲ್ಲಿ ಸುತ್ತಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಮೊಳಕೆಯೊಡೆದು ಗಿಡವಾಗುತ್ತೆ ಈ ಯೂಸ್ ಅಂಡ್ ಥ್ರೋ ಪೆನ್ಮೊಳಕೆಯೊಡೆದು ಗಿಡವಾಗುತ್ತೆ ಈ ಯೂಸ್ ಅಂಡ್ ಥ್ರೋ ಪೆನ್

ಸಂಪಂಗಿರಾಮನಗರ ವಾರ್ಡ್‌ ಆರೋಗ್ಯಾಧಿಕಾರಿ ಕಚೇರಿಗೆ ತೆರಳಿ ಪ್ಲಾಸ್ಟಿಕ್ ಬಳಕೆ ಮಾಡಿದ್ದಕ್ಕಾಗಿ 500 ರೂ. ದಂಡವನ್ನು ವಿಧಿಸಿದರು. ದಂಡ ಪಾವತಿ ಮಾಡಿರುವುದನ್ನು ಮೇಯರ್ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಪ್ಲಾಸ್ಟಿಕ್ ಬಳಸುವ ಸಾರ್ವಜನಿಕರಿಗೆ ದಂಡ ಹಾಕದಿದ್ದರೂ ಕೆಎಂಸಿ ಕಾಯ್ದೆ 431(ಎ) ಪ್ರಕಾರ ಪರಿಸರಕ್ಕೆ ಹಾನಿ ಉಂಟು ಮಾಡುವ ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಸುವ ಜನರಿಗೆ ದಂಡ ವಿಧಿಸುವ ಅಧಿಕಾರ ಪಾಲಿಕೆಗೆ ಇದೆ.

English summary
Bruhat Bengaluru Mahanagara Palike (BBMP) fined Bengaluru Mayor Gangambike Mallikarjun for the use of plastic during meet of Chief Minister B.S.Yediyurappa. Social media users appreciated this move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X