ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಕಾಬಿಟ್ಟಿ ಫೈಬರ್ ಕೇಬಲ್ ಕಡಿತ; ಬೆಂಗಳೂರಲ್ಲಿ ಡಿಜಿಟಲ್ ಕಗ್ಗತ್ತಲು?

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು, ಇಂಟರ್ನೆಟ್ ಮತ್ತು ದೂರಸಂಪರ್ಕ ಸೇವೆ ಪೂರೈಕೆದಾರರ ಆಪ್ಟಿಕಲ್ ಫೈಬರ್ ಕೇಬಲ್ (ಓಎಫ್‍ಸಿ) ಕಡಿತಗೊಳಿಸುವ ಕಾರ್ಯಾಚರಣೆಗೆ ಕೈಹಾಕಿದ್ದು, ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಡಿಜಿಟಲ್ ಸೇವೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಬೆಂಗಳೂರು ನಗರವು ಈಗ ಡಿಜಿಟಲ್ ಕಗ್ಗತ್ತಲಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ಸರ್ಜಾಪುರ ರಸ್ತೆ, ವೈಟ್‍ಫೀಲ್ಡ್, ಮಾರತ್‍ಹಳ್ಳಿ, ಬೆಳ್ಳಂದೂರು, ಸರ್ಜಾಪುರ ಮತ್ತಿತರ ಕಡೆಗಳಲ್ಲಿ ಯಾವ ಮುನ್ಸೂಚನೆಯನ್ನೂ ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವಾ ಸಂಸ್ಥೆಗಳಿಗೆ ನೀಡದೇ ಬೇಕಾಬಿಟ್ಟಿಯಾಗಿ ಕೇಬಲ್ ಕಿತ್ತುಹಾಕಲಾಗುತ್ತಿದೆ. ಇದರಿಂದ ನಗರದ ಜನದಟ್ಟಣೆಯ ಪ್ರದೇಶಗಳಲ್ಲಿ ನಾಗರಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರಿಗೆ ಭಾರಿ ಅನಾನುಕೂಲ ಉಂಟಾಗುತ್ತದೆ.

ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈ

ಐಟಿ ಸೇವೆಗಳಿಗೆ ಯಾವುದೇ ಅಡಚಣೆ ಇಲ್ಲದ ಹಾಗೂ ಸುಲಲಿತ ದೂರಸಂಪರ್ಕ ಸೇವೆ ಅಗತ್ಯವಾಗಿದ್ದು, ಇಂಥ ಬೇಕಾಬಿಟ್ಟಿ ಕ್ರಮವು ಭಾರತದ ಐಟಿ ರಾಜಧಾನಿ ಎನಿಸಿಕೊಂಡಿರುವ ಕರ್ನಾಟಕದ ರಾಜಧಾನಿಯಲ್ಲಿ ಸಂಪರ್ಕದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಕರ್ನಾಟಕ ವೃತ್ತದಲ್ಲಿ ಗ್ರಾಹಕರಿಗೆ ಮತ್ತು ಐಟಿ ಉದ್ಯಮಕ್ಕೆ ವೇಗದ ಇಂಟರ್ನೆಟ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲು ದೂರಸಂಪರ್ಕ ಉದ್ಯಮ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಿದೆ. 1,47,200ಕ್ಕೂ ಅಧಿಕ ಮೂಲ ಟ್ರಾನ್ಸ್‍ರಿಸೀವರ್ ಸ್ಟೇಷನ್ (ಬಿಟಿಎಸ್)ಗಳು ಹಾಗೂ ಸುಮಾರು 34700ಟವರ್‍ಗಳನ್ನು ಕರ್ನಾಟಕದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಟೆಲಿಫೋನ್, ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಇದರ ಮೂಲಕ ಒದಗಿಸಲಾಗುತ್ತಿದೆ.

10 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ

10 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ

ಇದಕ್ಕೆ ಮಾಡಿರುವ ಹೂಡಿಕೆಯೇ ಸುಮಾರ 14500 ಕೋಟಿ ರೂಪಾಯಿ ಆಗುತ್ತದೆ. ಈ ವಲಯವು ಕರ್ನಾಟಕವೊಂದರಲ್ಲೇ ಸುಮಾರು 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯವನ್ನು ಸೃಷ್ಟಿಸುತ್ತಿದ್ದು, ರಾಜ್ಯ ಬೊಕ್ಕಸಕ್ಕೆ 1700 ಕೋಟಿ ರೂಪಾಯಿಯನ್ನು ವಿವಿಧ ಶುಲ್ಕಗಳು ಮತ್ತು ತೆರಿಗೆಗಳ ರೂಪದಲ್ಲಿ ನೀಡುತ್ತಿವೆ. ಬಿಬಿಎಂಪಿಯ ಇಂಥ ಬೇಕಾಬಿಟ್ಟಿ ಕ್ರಮವು ಇಡೀ ನಗರದಲ್ಲಿ ಅಕ್ಷರಶಃ ಡಿಜಿಟಲ್ ಸ್ಥಗಿತಕ್ಕೆ ಕಾರಣವಾಗಲಿದ್ದು, ಡಿಜಿಟಲ್ ಆರ್ಥಿಕತೆಗೆ ಇದು ದೊಡ್ಡ ಹಿನ್ನಡೆಯಾಗಲಿದೆ. ಜತೆಗೆ ಬಿಬಿಎಂಪಿ ಸರ್ಕಾರಕ್ಕೆ ಕೂಡಾ ಇದರಿಂದ ಯಾವ ಪ್ರಯೋಜನವೂ ಆಗದು.

ಭೂಮಿಯ ಮೇಲಿರುವ ಎಲ್ಲ ಕೇಬಲ್‍ಗಳು ಅನಧಿಕೃತ ಎಂದು ಬಿಬಿಎಂಪಿ ಪರಿಗಣಿಸಿದೆ. ಆದರೆ ಟೆಲಿಕಾಂ ಉದ್ಯಮ ಇದಕ್ಕೆ ಅನುಮತಿ ಪಡೆದು ಭೂಗತವಾಗಿ ಇದನ್ನು ಅವಳಡಿಸಿದೆ. ಆದಾಗ್ಯೂ ಸೇವಾ ಪೂರೈಕೆದಾರ ಸಂಸ್ಥೆಗಳು ಬಿಬಿಎಂಪಿ ಅನುಮತಿಯೊಂದಿಗೆ ಅವುಗಳನ್ನು ಮೇಲ್ಮಟ್ಟದಲ್ಲಿ ಅಳವಡಿಸುವ ಕಷ್ಟ ತೆಗೆದುಕೊಂಡಿವೆ.

ಮಹಾನಗರ ಪಾಲಿಕೆ ಇಲಾಖೆಗಳ ಕಾಮಗಾರಿ ಗೋಳು

ಮಹಾನಗರ ಪಾಲಿಕೆ ಇಲಾಖೆಗಳ ಕಾಮಗಾರಿ ಗೋಳು

ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯುಎಸ್‍ಎಸ್‍ಬಿ ಮತ್ತಿತರ ಸಂಸ್ಥೆಗಳು ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸುವ ವೇಳೆ ಉದ್ದೇಶಪೂರ್ವಕವಲ್ಲದೇ ಕೇಬಲ್‍ಗಳನ್ನು ತುಂಡರಿಸಿದಾಗ ಅದನ್ನು ಬಿಬಿಎಂಪಿ ಅನುಮತಿ ಪಡೆದು ಮೇಲ್ಮಟ್ಟದಲ್ಲಿ ಅಳವಡಿಸಲಾಗಿದೆ. ಕೇಬಲ್ ತುಂಡರಿಸುವ ಚಟುವಟಿಕೆಯು ಡಿಜಿಟಲ್ ಬೆಂಗಳೂರು ಯೋಜನೆಗೆ ದೊಡ್ಡ ಹೊಡೆತವಾಗಿದ್ದು, ಚಿಲ್ಲರೆ ಮಾರಾಟ ಮಳಿಗೆಗಳ ಪಾಯಿಂಟ್ ಆಫ್ ಸೇಲ್ ಪರ್ಚೇಸ್ ಅಪ್ಲಿಕೇಶನ್‍ಗಳು ಮತ್ತು ಸರ್ಕಾರಿ ಸೇವೆಗಳು ಸೇರಿದಂತೆ ಬೆಂಗಳೂರಿನಲ್ಲಿ ಅಗತ್ಯ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಬೆಂಗಳೂರು : 5,938 ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಬೆಂಗಳೂರು : 5,938 ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ

ಸಿಓಎಐ ಮಹಾನಿರ್ದೇಶಕ ರಂಜನ್ ಎಸ್ ಮ್ಯಾಥ್ಯೂಸ್

ಸಿಓಎಐ ಮಹಾನಿರ್ದೇಶಕ ರಂಜನ್ ಎಸ್ ಮ್ಯಾಥ್ಯೂಸ್

ಬೆಂಗಳೂರನ್ನು ಅಕ್ಷರಶಃ ಸ್ಥಗಿತಗೊಳಿಸಬಲ್ಲ, ನಗರದಲ್ಲಿ ಸೃಷ್ಟಿಯಾಗಿರುವ ತೀವ್ರ ಸಂಕಷ್ಟದ ಪರಿಸ್ಥಿತಿ ಬಗ್ಗೆ ಮಾತನಾಡಿದ ಸಿಓಎಐ (ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ) ಮಹಾನಿರ್ದೇಶಕ ರಂಜನ್ ಎಸ್ ಮ್ಯಾಥ್ಯೂಸ್, "ಬಿಬಿಎಂಪಿ ಯಾವುದೇ ಮುನ್ನೆಚ್ಚರಿಕೆ ನೀಡದೇ ಕೈಗೊಂಡಿರುವ ಈ ಕ್ರಮದಿಂದ ನಮಗೆ ತೀರಾ ಬೇಸರವಾಗಿದೆ. ಇದು ಗ್ರಾಹಕರಿಗೆ ಅನಾನುಕೂಲತೆ ಉಂಟು ಮಾಡುವುದು ಮಾತ್ರವಲ್ಲದೇ, ಹಲವರಿಗೆ ಸಂಪರ್ಕವೇ ಇಲ್ಲದಂತಾಗುತ್ತದೆ. ಇಂಥ ಕೇಬಲ್ ತುಂಡರಿಸುವ ಚಟುವಟಿಕೆಯಿಂದ ವಹಿವಾಟಿಗೆ ಧಕ್ಕೆಯಾಗುತ್ತದೆ ಹಾಗೂ ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ನಾಗರಿಕ ಹಾಗೂ ಸರ್ಕಾರಿ ಸೇವೆಗಳ ವ್ಯತ್ಯಯಕ್ಕೆ ತಕ್ಷಣ ತಡೆ ಉಂಟಾಗುತ್ತದೆ.

ಬಿಬಿಎಂಪಿ ದೂರಸಂಪರ್ಕ ಕಂಪನಿಗಳ ಜತೆ ಸಾಮರಸ್ಯವಿಲ್ಲ

ಬಿಬಿಎಂಪಿ ದೂರಸಂಪರ್ಕ ಕಂಪನಿಗಳ ಜತೆ ಸಾಮರಸ್ಯವಿಲ್ಲ

ನಮ್ಮ ಸದಸ್ಯರು ಸಂಬಂಧಪಟ್ಟ ಪ್ರಾಧಿಕಾರಗಳ ನೀತಿ ನಿಯಮಾವಳಿ ಮತ್ತು ನಿಬಂಧನೆಗಳಿಗೆ ಸಂಪೂರ್ಣ ಬದ್ಧರಾಗಿದ್ದಾರೆ ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ. ಉದ್ಯಮವವು ಈ ಸಮಸ್ಯೆಯನ್ನು ಚರ್ಚಿಸಿ ಬಗೆಹರಿಸಲು ಪ್ರಯತ್ನ ನಡೆಸಿದರೆ, ಬಿಬಿಎಂಪಿ ದೂರಸಂಪರ್ಕ ಕಂಪನಿಗಳ ಜತೆ ಕೆಲಸ ಮಾಡಿ ಪರಿಹಾರ ಕೈಗೊಳ್ಳುವ ಬದಲು ಕೊನೆಯ ಮೈಲಿಯ ಸಂಪರ್ಕವನ್ನು ಕಿತ್ತುಹಾಕುವ ಮಾರ್ಗವನ್ನು ಅನುಸರಿಸಿದೆ. ಈ ಮೂಲಕ ನಾವು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತಿದ್ದು, ದೂರಸಂಪರ್ಕ ಮೂಲಸೌಕರ್ಯಗಳನ್ನು ಪುನರ್ ಕಲ್ಪಿಸಲು ತಕ್ಷಣ ಬಿಬಿಎಂಸಿ ಅವಕಾಶ ನೀಡುವಂತೆ ಸೂಚಿಸಲು ಕೋರುತ್ತಿದ್ದೇವೆ.

ಈ ಮೂಲಕ ಭಾರತದ ಐಟಿ ರಾಜಧಾನಿಯಲ್ಲಿ ನಾಗರಿಕರಿಗೆ ವಿಶ್ವದರ್ಜೆಯ ಡಿಜಿಟಲ್ ಸಂಪರ್ಕವನ್ನು ಒದಗಿಸುವ ಮೂಲಕ ಭವಿಷ್ಯಕ್ಕೆ ಸಜ್ಜಾದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಹಕರಿಸಲು ಮನವಿ ಮಾಡುತ್ತಿದ್ದೇವೆ. ಬೆಂಗಳೂರಿನ ನೆಟ್ಟಿಗರ ಹಿತದೃಷ್ಟಿಯಿಂದ ಮತ್ತು ವಿಸ್ತೃತ ಶ್ರೇಣಿಯ ಡಿಜಿಟಲ್ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಈ ಸಮಸ್ಯೆ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಪುನರುಚ್ಚರಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈ

ಡಿಜಿಟಲ್ ಸೂಪರ್ ಹೈವೆಯಲ್ಲಿ ಏನಿದು ಅಡೆ ತಡೆ

ಡಿಜಿಟಲ್ ಸೂಪರ್ ಹೈವೆಯಲ್ಲಿ ಏನಿದು ಅಡೆ ತಡೆ

ಡಿಜಿಟಲ್ ಸೂಪರ್ ಹೈವೆಯ ಹೆಮ್ಮೆಯನ್ನು ಹೊಂದಿದ ಈ ನಗರದಲ್ಲಿ, ಕರೆಗಳು ಸಂಪರ್ಕಕ್ಕೆ ಸಿಗದಿದ್ದರೆ ಹಾಗೂ ಡಾಟಾ ಸಂಪರ್ಕ ಕಡಿತವಾದಲ್ಲಿ ಸಂಪರ್ಕವೇ ಇಲ್ಲದಂಥ ಅಪಾಯಕಾರಿ ತುರ್ತು ಪರಿಸ್ಥಿತಿ ಸೃಷ್ಟಿಯಾಗುವ ಭೀತಿ ಇದೆ. ಈ ಕ್ರಮದಿಂದ ಭಾರತದ ಸಿಲಿಕಾನ್ ವ್ಯಾಲಿಯ ಕಂಪನಿಗಳು ಮತ್ತು ಉದ್ಯಮಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೇ, ಗ್ರಾಹಕರು ಹಾಗೂ ನಾಗರಿಕರ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ.

ವಹಿವಾಟು ಮತ್ತು ವೈಯಕ್ತಿಕ ಗ್ರಾಹಕರ ಕಾರ್ಯಾಚರಣೆಗೆ ಹಾನಿಮಾಡುವ ಕೇಬಲ್ ತುಂಡರಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ತಕ್ಷಣ ಸ್ಥಗಿತಗೊಳಿಸಬೇಕು. ಪ್ರಸ್ತುತ ದೂರಸಂಪರ್ಕ ಮೂಲಸೌಕರ್ಯವನ್ನು ಸುಲಲಿತವಾಗಿ ಕಲ್ಪಿಸುವ ಸಂಬಂಧ ಬೆಂಗಳೂರಿನಲ್ಲಿ ಸಮಗ್ರ ನೀತಿ ಇಲ್ಲ. ಆದ್ದರಿಂದ ದೇಶಾದ್ಯಂತ ನಗರಗಳಲ್ಲಿ ದೂರಸಂಪರ್ಕ ಮೂಲಸೌಕರ್ಯಗಳನ್ನು ಸುಲಲಿತವಾಗಿ ಅಳವಡಿಸಲು ಅನುವಾಗುವಂತೆ ಭಾರತ ಸರ್ಕಾರ 2016ರ ನವೆಂಬರ್ ನಲ್ಲಿ ಪ್ರಕಟಿಸಿದ ರೈಟ್ ಆಫ್ ವೇ ರೂಲ್ಸ್ ಗೆ ಅನುಗುಣವಾಗಿ ಸಮಗ್ರ ರಾಜ್ಯ ಟವರ್ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಬೇಕು.

ರೈಟ್ ಆಫ್ ವೇ ರೂಲ್ಸ್, 2016ರ ಅನ್ವಯ

ರೈಟ್ ಆಫ್ ವೇ ರೂಲ್ಸ್, 2016ರ ಅನ್ವಯ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈಟ್ ಆಫ್ ವೇ ರೂಲ್ಸ್, 2016ರ ಅನ್ವಯ, ಭೂಗತ ಅಥವಾ ನೆಲಮಟ್ಟದ ಮೇಲೆ ದೂರಸಂಪರ್ಕ ಮೂಲಸೌಕರ್ಯವನ್ನು ಅಳವಡಿಸಲು ಅವಕಾಶವಿದ್ದು, ಸ್ಥಳೀಯ ದೂರಸಂಪರ್ಕ ಗೋಪುರಗಳ ಮೇಲೆ ಯಾವುದೇ ನಿರ್ಬಂಧ ಹೇರುವಂತಿಲ್ಲ; ಏಕಗವಾಕ್ಷಿ ಕ್ಲಿಯರೆನ್ಸ್ ವ್ಯವಸ್ಥೆ, ಅನುಮೋದನೆಗಳಿಗೆ ವ್ಯಾಖ್ಯಾನಿತ ಸಮಯ ಮಿತಿ, ನೋಡೆಲ್ ಅಧಿಕಾರಿಗಳ ನೇಮಕಾತಿ, ನಾಮಕಾವಸ್ಥೆಯ ಆಡಳಿತಾತ್ಮಕ ಶುಲ್ಕ ಮತ್ತು ಸ್ವಾಯತ್ತ ಅನುಮೋದನೆಯಂಥ ಅಂಶಗಳು ಡಿಜಿಟಲ್ ಇಂಡಿಯಾ ದೃಷ್ಟಿಯನ್ನು ವಿಸ್ತøತವಾಗಿ ಬೆಂಬಲಿಸುತ್ತವೆ.

ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ, ದೂರಸಂಪರ್ಕ ಉದ್ಯಮವು ನಗರಾಡಳಿತ ಸಂಸ್ಥೆಗೆ ನೆರವಾಗಲು ಮತ್ತು 2016ರ ರೈಟ್ ಆಫ್ ವೇ ನಿಯಮಾವಳಿಯ ಅನ್ವಯ ಇತರ ರಾಜ್ಯಗಳಲ್ಲಿ ಅನುಸರಿಸುವ ಉತ್ತಮ ಕ್ರಮಗಳನ್ನು ಅಧ್ಯಯನ ಮಾಡಿ ಚರ್ಚಿಸಲು ಸಿದ್ಧವಿದೆ.

English summary
India’s IT capital city, Bengaluru is staring at potential blackout of its digital services across-the-board as BBMP (Bruhat Bengaluru Mahanagara Palike) has resorted to large-scale cutting of Optical Fibre Cable (OFC) of telecom and internet service providers. This random cutting of OFC across areas like Sarjapur Road, Whitefield, Marathahalli, Bellandur, Sarjapur etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X