ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರಮಹಾಲಕ್ಷ್ಮಿ ಹಬ್ಬ: ಹೂವಿನ ರೇಟು ಕೇಳಿ ಹೌಹಾರಬೇಡಿ!

|
Google Oneindia Kannada News

ಬೆಂಗಳೂರು, ಆಗಸ್ಟ್ 3: ಉದ್ಯಾನ ನಗರಿಯ ಮಾರುಕಟ್ಟೆಗಳೀಗ ಜಾತ್ರೆಯ ಸಂಭ್ರಮದಲ್ಲಿರುವಷ್ಟು ಸಿಂಗರಿಸಿಕೊಂಡಿವೆ. ಆಗಸ್ಟ್ 4 ರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರಾಟವಂತೂ ಭರದಿಂದ ಸಾಗುತ್ತಿದೆ. ವ್ಯಾಪಾರಿಗಳಿಗೆ ಆದಾಯ ಗಳಿಸೋಕೆ ಇದೊಂದು ಸೀಸನ್ ಆಗಿರುವುದರಿಂದ ಅವರು ಹೇಳಿದ್ದೇ ರೇಟು. ಹಬ್ಬ ಅನ್ನೋ ಕಾರಣಕ್ಕೆ ರೇಟು ಎಷ್ಟಾದರೂ ಸರಿ, ಕೊಳ್ಳುವವರಿಗೇನೂ ಕೊರತೆಯಿಲ್ಲ. ಒಟ್ಟಿನಲ್ಲಿ ವ್ಯಾಪಾರಿಗಳಿಗಂತೂ ವರಮಹಾಲಕ್ಷ್ಮಿ ಹಬ್ಬ ಸಾಕ್ಷಾತ್ 'ಲಕ್ಷ್ಮಿ' ಯ ಆಗಮನ ಎಂಬುದಂತೂ ಸುಳ್ಳಲ್ಲ.

ವರಮಹಾಲಕ್ಷ್ಮಿ ಹಬ್ಬ: ಸುಲಭ, ಸುಂದರ ಅಲಂಕಾರ ಹೇಗೆ?ವರಮಹಾಲಕ್ಷ್ಮಿ ಹಬ್ಬ: ಸುಲಭ, ಸುಂದರ ಅಲಂಕಾರ ಹೇಗೆ?

ಎಲ್ಲೆಲ್ಲೂ ತೆಂಗಿನ ಕಾಯಿ, ಹೂವು-ಹಣ್ಣುಗಳು, ಬಾಳೆಗಿಡಗಳು, ವೀಳ್ಯದೆಲೆ, ತರಹೇವಾರಿ ಹಣ್ಣು-ತರಕಾರಿ... ಈ ಎಲ್ಲವುಗಳೊಟ್ಟಿಗೆ ಬೆಲೆ ಏರಿಕೆಯಿದ್ದರೂ ಮಾರುಕಟ್ಟೆಯಲ್ಲಿ ಮುಗಿಬಿದ್ದು ಕೊಳ್ಳುವ ಜನರು! ಇದು ಎಲ್ಲ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ದೃಶ್ಯ.

ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ

ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ.ಕನಕಾಂಬರಕ್ಕೆ 1600 ರೂ. ಹೇಳಲಾಗುತ್ತಿದೆ! ಮಲ್ಲಿಗೆ ಹಾರಕ್ಕೆ ಕನಿಷ್ಠ 300 ರೂ. ನಿಂದ ಗರಿಷ್ಠ 500, 600 ರವರೆಗೂ ಬೆಲೆ ಹೇಳಲಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ

ಹಬ್ಬ ಅಂದಮೇಲೆ ಹೂವು ಬೇಕೇ ಬೇಕು. ಬೆಲೆ ಎಷ್ಟಾದರೂ ಸರಿ, ಒಂದು ದಿನಕ್ಕೆ ತಾನೇ? ಎಂದುಕೊಂಡು ಖರೀದಿಸುವವರಿಗೇನು ಕಡಿಮೆಯಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ವ್ಯಾಪಾರಿಗಳು ಹೂವುಗಳ ನಿಜವಾದ ಬೆಲೆಗಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಬೆಲೆ ನಿಗದಿಪಡಿಸುತ್ತಿದ್ದಾರೆ.

ಹೂವಿನ ದರ ಕೇಳಿ ಹೌಹಾರಬೇಡಿ!

ಹೂವಿನ ದರ ಕೇಳಿ ಹೌಹಾರಬೇಡಿ!

ಸೇವಂತಿಗೆ ಹೂವು ಕೆಜಿಗೆ 400 ರೂ, ಗುಲಾಬಿ ಮತ್ತು ಸುಗಂಧರಾಜ ಬಿಡಿ ಹೂವು ಕೆಜಿಗೆ 200-250, ತಾವರೆ ಹೂವು ಜೋಡಿಗೆ 50-75 ರೂ., ಕನಕಾಂಬರ 1400-1600 ರೂ, ಮಲ್ಲಿಗೆ ಹಾರಕ್ಕೆ 300-500 ರೂ.

ವರಮಹಾಲಕ್ಷ್ಮಿಗೆ ಆರತಿ ಬೆಳಗಿರೆ ನಾರಿಯರು ಬೇಗ ವರಮಹಾಲಕ್ಷ್ಮಿಗೆ ಆರತಿ ಬೆಳಗಿರೆ ನಾರಿಯರು ಬೇಗ

ತೆಂಗಿನ ಕಾಯಿಯೂ ತುಟ್ಟಿ

ತೆಂಗಿನ ಕಾಯಿಯೂ ತುಟ್ಟಿ

ಮೊದಲೇ ತುಟ್ಟಿಯಾಗಿದ್ದ ತೆಂಗಿನ ಕಾಯಿ ಹಬ್ಬದ ಪ್ರಯುಕ್ತ ಮತ್ತಷ್ಟು ತುಟ್ಟಿಯಾಗಿದೆ. ಚಿಕ್ಕ ತೆಂಗಿನ ಕಾಯಿಗೂ 20 ರಿಂದ 30 ರೂ ತೆರಬೇಕಾದ ಪರಿಸ್ಥಿತಿಯಿದೆ!

ಬೆಲ್ಲ ಕೊಬ್ಬರಿ ಹೋಳಿಗೆ ಮಾಡುವ ವಿಧಾನ ಬೆಲ್ಲ ಕೊಬ್ಬರಿ ಹೋಳಿಗೆ ಮಾಡುವ ವಿಧಾನ

ಬಾಳೆ ಎಲೆ- ವೀಳ್ಯದೆಲೆ

ಬಾಳೆ ಎಲೆ- ವೀಳ್ಯದೆಲೆ

ಒಂದು ಬಾಳೆ ಎಲೆಗೆ 5 ರಿಂದ 10 ರೂ. ಹೇಳಲಾಗುತ್ತಿದೆ! ವೀಳ್ಯದೆಲೆ ಕಟ್ಟಿಗೆ 80-85 ರೂ! ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಎರಡೂ ಅಗತ್ಯವಾಗಿ ಬೇಕಿರುವುದರಿಂದ ಎಷ್ಟು ಬೆಲೆ ಹೇಳಿದರೂ ಕೊಳ್ಳದೆ ವಿಧಿಯಿಲ್ಲ!

ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೇಳಬೇಡಿ!

ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೇಳಬೇಡಿ!

ಹಬ್ಬಕ್ಕೆ ಅತ್ಯಗತ್ಯವಾಗಿ ಬೇಕಾದ ಏಲಕ್ಕಿಬಾಳೆಹಣ್ಣಿನ ಬೆಲೆ ಮಾತ್ರ ಕೇಳುವಂತಿಲ್ಲ. ಕೆ.ಜಿಗೆ 60 ರೂ. ಇದ್ದ ಬೆಲೆ ಈಗ 100 ರೂ.ಆಗಿದೆ. ಸಪೋಟ 66 ರೂ., ಮೋಸಂಬಿ 70 ರೂ., ಮಾವು 60ರೂ. ಆಗಿದೆ.

ತರಕಾರಿ ಬೆಲೆ ಪರವಾಗಿಲ್ಲ

ತರಕಾರಿ ಬೆಲೆ ಪರವಾಗಿಲ್ಲ

ಹಣ್ಣು-ಹೂವಿಗೆ ಹೋಲಿಸಿದರೆ ತರಕಾರಿ ಬೆಲೆ ಜಾಸ್ತಿಯಾಗಿಲ್ಲ. ಮೊದಲೇ ತರಕಾರಿ ಬೆಲೆ ಸ್ವಲ್ಪ ಜಾಸ್ತಿಯೇ ಇದ್ದಿದ್ದರಿಂದ ಹಬ್ಬಕ್ಕಾಗಿ ಹೆಚ್ಚಾದಂತೆ ಅನ್ನಿಸುತ್ತಿಲ್ಲ. ಕ್ಯಾರೆಟ್ ಕೆಜಿ ಗೆ 60 ರೂ., ಟೊಮ್ಯಾಟೋ ಸ್ವಲ್ಪ ಕಡದಿಮೆಯಾಗಿ, ಕೆಜಿಗೆ 58 ರೂ. ಆಗಿದೆ. ಡಬಲ್ ಬೀನ್ಸ್ ಬೆಲೆ ಮಾತ್ರ ಕೆಜಿಗೆ 150 ರೂ. ಆಗಿದೆ.

English summary
Bengaluru Market is now in festival mood. Varamahalakshmi festival is celebrating on August 4th. Here is prices of fruits, flower, vegitables in Bengaluru's market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X