ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮಂಗಳೂರು ವಿಶೇಷ ರೈಲು ವೇಳಾಪಟ್ಟಿ ಬದಲು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17 : ನೈಋತ್ಯ ರೈಲ್ವೆ ಬೆಂಗಳೂರು-ಮಂಗಳೂರು ವಿಶೇಷ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ರೈಲು ಸಂಚಾರ ಸಹಜ ಸ್ಥಿತಿಗೆ ಮರಳಿದ ಬಳಿಕ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ.

ಮೆಜೆಸ್ಟಿಕ್‌ನಲ್ಲಿರುವ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ರೈಲು ತಡವಾಗಿ ಹೊರಡಲಿದೆ. ಬೆಂಗಳೂರಿಗೆ ಆಗಮಿಸುವ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೇಗ ಹೊರಡುವಂತೆ ವೇಳಾಪಟ್ಟಿ ಬದಲಾವಣೆಯಾಗಿದೆ.

ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ

ರೈಲು ನಂಬರ್ 06515 ಕೆಎಸ್ಆರ್ ಬೆಂಗಳೂರು-ಮಂಗಳೂರು ಸೆಂಟ್ರಲ್ ವಿಶೇಷ ರೈಲು ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 8.25ಕ್ಕೆ ಮಂಗಳೂರು ತಲುಪಲಿದೆ.

ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ

Bengaluru-Mangaluru Special Train Schedule Changed

ರೈಲು ನಂಬರ್ 06516 ಮಂಗಳೂರು ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರಿನಿಂದ ಸಂಜೆ 7.15ಕ್ಕೆ ಹೊರಡಲಿದೆ. ಬೆಂಗಳೂರಿಗೆ ಮರುದಿನ ಬೆಳಗ್ಗೆ 4.15ಕ್ಕೆ ಆಗಮಿಸಲಿದೆ.

ಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆ

ಯಾವುದೇ ಬದಲಾವಣೆ ಇಲ್ಲ : ಬೆಂಗಳೂರು-ಮಂಗಳೂರು ಸೆಂಟ್ರಲ್ ನಡುವೆ ಮೈಸೂರು ಮಾರ್ಗವಾಗಿ ಸಂಚಾರ ನಡೆಸುವ ರೈಲು ನಂಬರ್ 06517 ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

Recommended Video

ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada

ಯಶವಂತಪುರ-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ನಿಗದಿತ ವೇಳಾಪಟ್ಟಿಯಂತೆ ಸಂಜೆ 6.45ಕ್ಕೆ ಹೊರಡಲಿದೆ. ಆದರೆ, ಈ ರೈಲು ಹಾಸನ ಮತ್ತು ಬಂಟ್ವಾಳ ತಲುಪುವ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ.

English summary
On public demand south western railway revised the schedule of Bengaluru-Mangaluru-Bengaluru Special train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X