ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮಂಗಳೂರು ರೈಲಿಗೆ ವಿಸ್ಟಾಡೋಮ್‌ ಕೋಚ್‌?

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಬೆಂಗಳೂರು-ಮಂಗಳೂರು ನಡುವೆ ಹಗಲು ಹೊತ್ತಿನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವ ಜನರು ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ನೈಋತ್ಯ ರೈಲ್ವೆಗೆ ಗಾಜಿನ ಮೇಲ್ಛಾವಣಿ ಹೊಂದಿರುವ ಒಂದು ರೈಲು ಬೋಗಿಯನ್ನು ನೀಡಲಾಗಿದೆ.

ಭಾರತೀಯ ರೈಲ್ವೆ ನೀಡಿರುವ ವಿಸ್ಟಾಡೋಮ್‌ ಕೋಚ್‌ ಎಸಿ ರೈಲು ಬೋಗಿಯನ್ನು ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ರೈಲಿಗೆ ಜೋಡಿಸಲು ನೈಋತ್ಯ ರೈಲ್ವೆ ಚಿಂತನೆ ನಡೆಸಿದೆ. ಹಗಲು ಹೊತ್ತಿನಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ರೈಲಿನಲ್ಲಿ ಈ ಬೋಗಿ ಇರಲಿದೆ.

ಎರ್ನಾಕುಲುಂ-ಮಂಗಳೂರು-ಓಖಾ ವಿಶೇಷ ರೈಲು; ವೇಳಾಪಟ್ಟಿ ಎರ್ನಾಕುಲುಂ-ಮಂಗಳೂರು-ಓಖಾ ವಿಶೇಷ ರೈಲು; ವೇಳಾಪಟ್ಟಿ

ಗಾಜಿನ ಮೇಲ್ಛಾವಣಿ ಇರುವ ರೈಲು ಬೋಗಿ ಸಂಪೂರ್ಣ ಹವಾನಿಯಂತ್ರಿವಾಗಿದೆ. ಎಲ್‌ಇಡಿ ದೀಪ, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಯನ್ನು ಈ ಬೋಗಿ ಹೊಂದಿದೆ. ದೇಶದ ಹಲವು ಪ್ರವಾಸಿತಾಣಗಳನ್ನು ಸಂಪರ್ಕಿಸುವ ರೈಲಿನಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ.

ಫೆಬ್ರವರಿ 11ರಿಂದ ಮೈಸೂರು-ದಾದರ್ ರೈಲು; ವೇಳಾಪಟ್ಟಿ ಫೆಬ್ರವರಿ 11ರಿಂದ ಮೈಸೂರು-ದಾದರ್ ರೈಲು; ವೇಳಾಪಟ್ಟಿ

 Bengaluru Mangaluru Day Train May Get Vistadome Coach

ಬೆಂಗಳೂರು-ಮಂಗಳೂರು ಹಗಲು ರೈಲಿನಗೆ ವಿಸ್ಟಾಡೋಮ್ ಕೋಚ್ ಅಳವಡಿಕೆ ಮಾಡುವ ಕುರಿತು ಚಿಂತನೆ ನಡೆದಿದೆ. ರೈಲು ಬೋಗಿ ನೈಋತ್ಯ ರೈಲ್ವೆಗೆ ತಲುಪಿದ ಬಳಿಕ ಯಾವ ರೈಲಿನಗೆ ಅದನ್ನು ಜೋಡಿಸಬೇಕು? ಎಂದು ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.

ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ? ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ?

ಬೆಂಗಳೂರು-ಮಂಗಳೂರು ಮಾರ್ಗದ ರೈಲು ಹಾಸನ, ಸಕಲೇಶಪುರ ಮಾರ್ಗದ ಮೂಲಕ ಸಂಚಾರ ನಡೆಸಲಿದೆ. ಪಶ್ಚಿಮ ಘಟ್ಟದ ಈ ಭಾಗವನ್ನು ರೈಲಿನಲ್ಲಿ ಕುಳಿತು ಪ್ರಯಾಣಿಕರು ಸವಿಯಬಹುದಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚಾರ ನಡೆಸುವುದು ಒಂದು ವಿಶಿಷ್ಟ ಅನುಭವವಾಗಿದೆ.

Recommended Video

ನಾಳೆಯಿಂದ ಫೆ. 25ರವರೆಗೆ ಕೃಷಿ ಹಾಗೂ ಕರಾವಳಿ ಕಲೋತ್ಸವ | Oneindia Kannada

ಅರಕು ಕಣಿವೆ ಪ್ರದೇಶದಲ್ಲಿ ಈಗಾಗಲೇ ಭಾರತೀಯ ರೈಲ್ವೆ ವಿಸ್ಟಾಡೋಮ್ ಕೋಚ್ ಅಳವಡಿಕೆ ಮಾಡಿದೆ. ಜನರು ರೈಲಿನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.

English summary
South western railway will get one AC Vistadome coach. Day train between Bengaluru-Mangaluru may attache with this coach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X