ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡದ ಮೊತ್ತವನ್ನು ಸರ್ಕಾರ ಹೆಚ್ಚಿಸಿದ ನಂತರ ರಾಜ್ಯದಲ್ಲಿ ಅತೀ ಇದುವರೆಗೆ ಅತೀ ಹೆಚ್ಚು ದಂಡ ಕಟ್ಟಿದ್ದು ಬೆಂಗಳೂರಿನ ವ್ಯಕ್ತಿ!

ಸಂಚಾರಿ ನಿಯಮ ಉಲ್ಲಂಘನೆಯ ಮೂರು ಪ್ರಕರಣ ಸೇರಿ ಅವರಿಗೆ ಟ್ರಾಫಿಕ್ ಪೊಲೀಸರು ಒಟ್ಟು 17000 ರೂ. ದಂಡ ವಿಧಿಸಿದ್ದಾರೆ! ವರ್ತೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಆಕಾಶ್ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಕುಡಿದು ವಾಹನ ಚಲಾಯಿಸಿದ ಕಾರಣಕ್ಕೆ 10,000 ರೂ., ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ 5,000 ರೂ. ಮತ್ತು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ ಕಾರಣಕ್ಕೆ 2000 ರೂ. ಸೇರಿ ಒಟ್ಟು 17,000 ರೂ ದಂಡ ವಿಧಿಸಲಾಗಿದೆ.

ಟಾಫ್ರಿಕ್ ಫೈನ್ ಕಟ್ಟೋಕೆ ಸಾಲ ಕೊಡ್ತಿರಾ?ಟಾಫ್ರಿಕ್ ಫೈನ್ ಕಟ್ಟೋಕೆ ಸಾಲ ಕೊಡ್ತಿರಾ?

ಕನಕಪುರ ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಆಕಾಶ್ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದು, ನಂತರ ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಬಳಿ ಲೈಸೆನ್ಸ್ ಇಲ್ಲದಿರುವುದು ಪತ್ತೆಯಾಗಿತ್ತು. ಜೊತೆಗೆ ರಘುವನಹಳ್ಳಿಯ ಕೆಎಸ್ ಐಸಿ ಕಾಲೇಜ್ ಜಂಕ್ಷನ್ ಬಳಿ ಕೆಲ ದಿನಗಳ ಹಿಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದೂ ದಾಖಲಾಗಿತ್ತು.

Bengaluru Man paid Rs. 17000 for violation of Traffic Rules

'ವೆಸ್ಪಾ' ಸ್ವಿಚಕ್ರ ವಾಹನದ ಚಾಲಕರಾಗಿರುವ ಆಕಾಶ್ ಕುಡಿದು ಗಾಡಿ ಓಡಿಸುತ್ತಿದ್ದುದೂ ತಿಳಿದುಬಂದಿತ್ತು.

"ನಿತಿನ್ ಗಡ್ಕರಿ ಹೆಲ್ಮೆಟ್ ಇಲ್ದೆ ಗಾಡಿ ಓಡಿಸಿದ್ದಕ್ಕೆ ಫೈನ್ ಎಷ್ಟು?"

ಸೆಪ್ಟೆಂಬರ್ 1 ರಿಂದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡದ ಮೊತ್ತವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ.

English summary
Bengaluru Man paid Rs. 17000 for violation of Traffic Rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X