• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಪ ಕಡಿಮೆ ಮಾಡಲು AC ಹೆಲ್ಮೆಟ್, ಬೆಂಗಳೂರಿಗನ ಸಾಧನೆ

|

ಬೆಂಗಳೂರು, ಡಿಸೆಂಬರ್ 07: ಹಿಸ್ಟರಿ ಟಿವಿ18ರ ಒಎಂಜಿ! ಯೆ ಮೇರಾ ಇಂಡಿಯಾ ಸೀಸನ್ 6 ನಲ್ಲಿ ಎಸಿ ಹೆಲ್ಮೆಟ್ ತಯಾರಿಸಿದ ಬೆಂಗಳೂರಿನ ವ್ಯಕ್ತಿಯ ಸಾಧನೆ ಬಗ್ಗೆ ಎಪಿಸೋಡ್ ಪ್ರಸಾರವಾಗಲಿದೆ. ಕೋಪವನ್ನು ಕಡಿಮೆ ಮಾಡಲು ಬೆಂಗಳೂರಿನ ಈ ವ್ಯಕ್ತಿ AC ಹೆಲ್ಮೆಟ್ ಅನ್ನು ಕಂಡು ಹಿಡಿದಿದ್ದಾರೆ. ಇವರ ಈ ಯಶಸ್ಸಿನ ಪ್ರಯಾಣದ ಬಗ್ಗೆ ತಿಳಿಯಬಹುದು.

ಸಾಂಸ್ಕೃತಿಕವಾಗಿ ಮತ್ತು ಕಲಾತ್ಮಕ ವೈವಿಧ್ಯತೆಯ ಭೂಮಿಯಾಗಿರುವ ಭಾರತವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಸ್ಟಾರ್ಟ್ಅಪ್ ಮತ್ತು ಟೆಕ್ನಾಲಜಿ ಕಂಪನಿಗಳನ್ನು ಹೊಂದಿರುವ ದೇಶ ಭಾರತವು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕಲಾತ್ಮಕತೆಯನ್ನು ತಂತ್ರಜ್ಞಾನದೊಂದಿಗೆ ಬೆಸೆಯುವುದರೊಂದಿಗೆ ಜಗತ್ತಿಗೆ ಹಲವಾರು ಆವಿಷ್ಕಾರಗಳನ್ನು ಉಡುಗೊರೆಯಾಗಿ ನೀಡುತ್ತದೆ ಹಾಗೇ ಇವು ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಇಂತಹ ಆಕರ್ಷಕ ಕಾರ್ಯಕ್ರಮಗಳ ಅತ್ಯಂತ ಯಶಸ್ವಿ ಮತ್ತು ದೀರ್ಘಾವಧಿಯ ಸರಣಿ HistoryTV18' ತಮ್ಮ ಅದ್ಭುತ ಕಲೆ, ಕರಕುಶಲ ವಸ್ತುಗಳು, ನಾವೀನ್ಯತೆಗಳು ಮತ್ತು ಪ್ರತಿಭೆಗಳೊಂದಿಗೆ ಇತಿಹಾಸ ಸೃಷ್ಟಿಸಿದ ಜನರ ಮೇಲೆ ಬೆಳಕು ಚೆಲ್ಲುವ ಹೊಚ್ಚಹೊಸ OMG! Yeh Mera India Season 6 ಮತ್ತೆ ಬಂದಿದೆ. ಅಂತಹ ಒಂದು ಸ್ಫೂರ್ತಿದಾಯಕ ಕಥೆ ಐಐಟಿ ಮದ್ರಾಸ್ ಪದವೀಧರ ಬೆಂಗಳೂರಿನ ಪಿಕೆ ಸುಂದರ್ ರಾಜನ್ ಅವರದ್ದು.

ಹಿಸ್ಟರಿ ಚಾನೆಲ್ ನಲ್ಲಿ ಕರೆನ್ಸಿ ಕಲೆಕ್ಟರ್ ರೆಜ್ವಾನ್ ರಜಾಕ್ ಅವರ ಕಥೆ

ಸಮಾಜಕ್ಕೆ ಸಹಾಯ ಮಾಡುವ ಕನಸಿನೊಂದಿಗೆ, ಪಿ.ಕೆ. ಸುಂದರ್ ರಾಜನ್ ಅವರು ರಸ್ತೆ ಪ್ರಯಾಣಕ್ಕೆ ನೆರವಾಗುವ ಸರಳವಾದ ಮತ್ತು ಪರಿಣಾಮಕಾರಿಯಾದ ಸಾಧನವನ್ನು ಕಂಡುಹಿಡಿದಿದ್ದಾರೆ. ಇದು ರಸ್ತೆಯತ್ತ ಗಮನ ಕೊಡಲು, ಕೋಪವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನದಲ್ಲಿನ ತನ್ನ ಜ್ಞಾನ ಮತ್ತು ಪರಿಣತಿಯನ್ನು ಬಳಸಿಕೊಂಡು, ಪಿಕೆ ಸುಂದರ್ ರಾಜನ್ ಅವರು ಈ ಪರಿಕರವನ್ನು ರಚಿಸಿದ್ದಾರೆ.

ಅದನ್ನು ಹೆಲ್ಮೆಟ್‌ಗೆ ಸೇರಿಸಿದಾಗ, ಅದು ಹೆಲ್ಮೆಟ್ ಅನ್ನು ತಂಪಾಗಿಸುತ್ತದೆ ಮತ್ತು ತಾಪಮಾನವನ್ನು ಕೆಲವು ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ. ಈ ಸಾಧನವು ವೆಚ್ಚ-ಪರಿಣಾಮಕಾರಿತ್ವಕ್ಕಾಗಿ ಮಾತ್ರವಲ್ಲದೇ ಈಗಾಗಲೇ ಇರುವ ಹೆಲ್ಮೆಟ್ ಗಳಿಗೂ ಇದನ್ನು ಸೇರಿಸುವ ಸಾಮರ್ಥ್ಯ ಹೊಂದಿರುವುದರಿಂದ ಇದು ಮೋಟಾರ್ ಸೈಕಲಿಸ್ಟ್ ಗಳಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. ಸುಂದರ ರಾಜನ್ ಅವರು ಪ್ರತಿ ಮೂಲಮಾದರಿಯಿಂದ ಹಾಗೂ ಪ್ರತಿ ಬಾರಿಯ ವೈಫಲ್ಯದಿಂದ ಸಾಕಷ್ಟನ್ನು ಕಲಿತರು. ಮಾರ್ಚ್ 2018ರಲ್ಲಿ ತಮ್ಮ ಕನಸನ್ನು ಬ್ಲೂಅರ್ಮೋರ್ ರೂಪದಲ್ಲಿ ನನಸಾಗಿಸಿಕೊಂಡರು.

ಹಿಸ್ಟರಿ ಟಿವಿ18ರ ಒಎಂಜಿ! ಯೆ ಮೇರಾ ಇಂಡಿಯಾ ಸೀಸನ್ 6 ನಲ್ಲಿ ಅನೇಕ ಕುತೂಹಲಗಳು, ಪ್ರತಿಭೆಗಳು, ಅದ್ಭುತ ಸಂಗತಿಗಳು ಮತ್ತು ಆಧುನಿಕ ದಿನದ ಅದ್ಭುತಗಳು, ಅವುಗಳ ಎಲ್ಲಾ ವೈವಿಧ್ಯತೆಗಳಿಗೆ ಕನ್ನಡಿ ಹಿಡಿಯಲಿದೆ. ಹಿಸ್ಟರಿ ಟಿವಿ18ನಲ್ಲಿ ಡಿಸೆಂಬರ್ 9 ಮತ್ತು 10 (ಸೋಮವಾರ-ಮಂಗಳವಾರ) ರಂದು ರಾತ್ರಿ 8:00 ಗಂಟೆಗೆ ಇತ್ತೀಚಿನ ಎಪಿಸೋಡ್ ಅನ್ನು ವೀಕ್ಷಿಸಬಹುದು.

English summary
factual entertainment series HistoryTV18’s OMG! Yeh Mera India Season 6.The latest episode will feature inspiring story of Bengaluru Man invents AC helmets to reduce road rage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X